ಸುಗಂಧ ದೇವಿಯ ಜಾತ್ರಾಮಹೋತ್ಸವ

ಸುಗಂಧ ದೇವಿಯ ಜಾತ್ರಾಮಹೋತ್ಸವ  The festival of the goddess of fragrance


ರಾಯಬಾಗ 05:  ತಾಲೂಕಿನ ಬಾವನಸೌಂದತ್ತಿ ಗ್ರಾಮದ ಗ್ರಾಮದೇವತೆ ಸುಗಂಧ ದೇವಿಯ ಜಾತ್ರಾಮಹೋತ್ಸವವು ಮಾ.6ರಿಂದ 12 ರವರೆಗೆ ನಡೆಯಲಿದೆ.ಮಾ.6 ರಿಂದ ಪ್ರತಿನಿತ್ಯ ದೇವಿಗೆ ಅಭಿಷೇಕ ನಡೆಯಲಿದ್ದು, ಮಾ.8 ರಂದು ರಂಗಪಂಚಮಿ ದಿನದಂದು ಮಹಾನೈವೇದ್ಯ ನಡೆಯಲಿದೆ. ಬೆಳಿಗ್ಗೆ 9 ಗಂಟೆಯಿಂದ ದೇವಿಯ ಪಲ್ಲಕ್ಕಿ ಮೆರವಣಿಗೆ ಮತ್ತು ಕುಂಭಮೇಳ ಜರುಗಲಿದೆ.ಜಾತ್ರಾಮಹೋತ್ಸವ ನಿಮಿತ್ತ ವಿವಿಧ ಓಟದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಾ.10 ರಂದು ಮಧ್ಯಾಹ್ನ 2.30ಕ್ಕೆ ಕುಸ್ತಿ ಪಂದ್ಯಗಳು ನಡೆಯಲಿವೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವಿಯ ದರ್ಶನ ಪಡೆಯಬೇಕೆಂದು ಜಾತ್ರಾ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಫೋಟೊ: 05 ರಾಯಬಾಗ 2ಫೋಟೊ ಶೀರ್ಷಿಕೆ: ರಾಯಬಾಗ: ತಾಲೂಕಿನ.ಬಾವನಸೌಂದತ್ತಿ ಗ್ರಾಮದೇವತೆ ಶ್ರೀ ಸುಗಂಧಾದೇವಿ.