ಲೋಕದರ್ಶನ ವರದಿ
ಇದ್ದೂ ಇಲ್ಲದಂತಾಗಿರುವ ಯರಗಟ್ಟಿ ಸಾರ್ವಜನಿಕ ಗ್ರಂಥಾಲಯ
ವರದಿ ಈರಣ್ಣಾ ಎಚ್. ಹುಲ್ಲೂರ, ಯರಗಟ್ಟಿ
ಯರಗಟ್ಟಿ, 26: ಸಾರ್ವಜನಿಕ ಗ್ರಂಥಾಲಯಕ್ಕೆ ತನ್ನದೆಯಾದ ಕಟ್ಟಡವಿದ್ದರೂಬಳಕೆ ಬಾರದೇ ಶಿಥಿಲಗೊಂಡಿದೆ. ಐದಾರು ವರ್ಷ ಕಳೆದರೂ ದುರಸ್ತಿಯಾಗಿಲ್ಲ. ಹೀಗಾಗಿ ಪರ್ಯಾಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಓದುಗರಿಗೆ ಕಿರಿಕಿರಿ ತಪ್ಪಿಲ್ಲ. ಇದು ಯರಗಟ್ಟಿ ಪಟ್ಟಣದ ಗ್ರಂಥಾಲಯ ಪರಿಸ್ಥಿತಿ.
ಪಟ್ಟಣದಲ್ಲಿ ಹಳೆಯ ಕಟ್ಟಡದಲ್ಲಿ ಸದ್ಯ ಕಾರ್ಯ ನಿರ್ವಹಿಸುತ್ತಿರುವ ಗ್ರಂಥಾಲಯದಲ್ಲಿ ವಿದ್ಯುತ್, ಕುಡಿಯುವ ನೀರು, ಶೌಚಾಲಯ ಸೇರಿ ಮೂಲ ಸೌಲಭ್ಯ ಮರೀಚಿಕೆಯಾಗಿವೆ. ಗ್ರಂಥಾಲಯದ ಅಕ್ಕಪಕ್ಕದಲ್ಲಿ ಮನೆಗಳಿದ್ದು ಓದುಗರಿಗೆ ತೀವ್ರ ತೊಂದರೆಯಾಗುತ್ತಿದೆ. ಪಕ್ಕದಲ್ಲೆ ದೇವಸ್ಥಾನ ಇರುವುದರಿಂದ ಸಾರ್ವಜನಿಕರ ಆಗಮಿಸುವಿಕೆಯಿಂದ ಗ್ರಂಥಾಲಯ ಇದ್ದು ಇಲ್ಲದಂತಾಗಿದೆ.
ಪಟ್ಟಣದಲ್ಲಿ ಗ್ರಂಥಾಲಯದ ವ್ಯವಸ್ಥೆ ಇದ್ದರೂ ಪಕ್ಕದಿಂದ ಗ್ರಾಮಕ್ಕೆ ಹೋಗಿ ಅಲ್ಲಿನ ಯುವಕರು ಪುಸ್ತಕಗಳನ್ನು ಓದುವ ಪರಿಸ್ಥಿತಿ ಉದ್ಭವಿಸಿತ್ತು. ಆದರೆ 2015ರಲ್ಲಿ ಗ್ರಂಥಾಲಯ ಅಭಿವೃದ್ಧಿ ಪಡಿಸಲು ಆಗಿನ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಗ್ರಾಮಸ್ಥರಿಂದ ಮನವಿ ಸಲ್ಲಿಸಿದರು .ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಗ್ರಂಥಾಲಯದಲ್ಲಿ 2,714 ಪುಸ್ತಕಗಳಿವೆ. ನಿತ್ಯ ಮೂರು ದಿನಪತ್ರಿಕೆಗಳು ಬರುತ್ತವೆ. ಆದರೆ ಮಾಸಿಕ, ಪಾಕ್ಷಿಕ ಮತ್ತು ಸ್ಪರ್ಧಾತ್ಮಕ ಪುಸ್ತಕಗಳು ಮಾತ್ರ ಇಲ್ಲಿ ಮರೀಚಿಕೆಯಾಗಿದೆ.
ಇದ್ದು ಇಲ್ಲವಾದ ಗ್ರಂಥಾಲಯ ಕಟ್ಟಡ:
ಒಂದೇ ಕಟ್ಟಡದಲ್ಲಿ ಎರೆಡೆರೆಡು ಕಚೇರಿಗಳು ಇರುವ ಕಾರಣ ಸುತ್ತಲೂ ಗದ್ದಲ ಗಲಾಟೆಯದ್ದೆ ಪರಿಸರ. ಹೀಗಾಗಿ ಬಹುತೇಕ ಯುವಕರು ಗ್ರಂಥಾಲಯಕ್ಕೆ ಹೋಗಲು ಹಿಂಜರಿಯುತ್ತಿದ್ದಾರೆ.
2007ರಿಂದ 2025ರ ವರೆಗೆ ಗ್ರಂಥಾಲಯ ಕಟ್ಟಡದಲ್ಲಿ ಸ್ವಚ್ಛಂದವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಆದರೆ ಕಟ್ಟಡ ಮೇಲ್ಛಾವಣಿ ಮಳೆಯಿಂದ ಸೊರುತಿದೆ. ಐದಾರು ಕಳೆದರೂ ಗ್ರಂಥಾಲಯ ಕಟ್ಟಡ ಮಾತ್ರ ಕಟ್ಟಡ ದುರಸ್ತಿಗೆ ಯಾವುದೇ ಕ್ರಮ ಜರುಗಿಸಿಲ್ಲ.
ಈ ಕುರಿತು ಪಟ್ಟಟಣದ ನಿವಾಸಿಗಳು ಹಲವಾರು ಬಾರಿ ಆಡಳಿತಕ್ಕೆ ಮನವಿ ಮಾಡಿದರೂ ನಿರ್ಲಕ್ಷ್ಯ ಭಾವನೆ ತೋರುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಂಥಾಲಯಗಳ ನಿರ್ವಹಣೆಗೆ ಇಲಾಖೆ ತನ್ನದೇ ಆದ ನಿಯಮಾನುಸಾರವನ್ನು ಹಾಕಿ ಕೊಂಡಿದೆ. ಬೆಳಗ್ಗೆ 9 ರಿಂದ 12 ಗಂಟೆಯ ವರೆಗೆ, ಮಧ್ಯಾಹ್ನ 3 ಗಂಟೆಯಿಂದ 6 ಗಂಟೆಯವರೆಗೆ ಗ್ರಂಥಾಲಯವನ್ನು ತೆರೆಯಬೇಕು. ದಿನಕ್ಕೆ 6 ಗಂಟೆ ಗ್ರಂಥಾಲಯ ತನ್ನ ಕಾರ್ಯನಿರ್ವಹಿಸಬೇಕು. ಆದರೀಗ ಕೇವಲ 3ರಿಂದ 4 ಗಂಟೆ ಮಾತ್ರ ತೆಗೆಯುತ್ತಿದ್ದಾರೆ. ಇದರಿಂದ ಓದುಗರಿಗೆ ತೀವ್ರ ಅನಾನುಕೂಲವಾಗುತ್ತಿದೆ.
ಗ್ರಂಥಾಲಯದ ಹಳೆಯ ಕಟ್ಟಡವನ್ನು ದುರಸ್ತಿಗೊಳಿಸಿ ಎಂದು ಮನವಿ ಮಾಡಲಾಗಿದೆ. ಆದರೆ ಪಟ್ಟಣ ಪಂಚಾಯತ ಆಡಳಿತದಲ್ಲಿ ಗ್ರಂಥಾಲಯಕ್ಕೆ ಯಾವುದೇ ಅನುದಾನವಿಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ ಗದ್ದಲದ ಪರಿಸರದಲ್ಲಿ ಗ್ರಂಥಾಲಯ ನಡೆಸುತ್ತಿದೆ. ಗ್ರಂಥಾಲಯಕ್ಕೆ ಸಂಬಂಧಸಿದ ಅಧಿಕಾರಿಗಳು ಸದರಿ ಸಮಸ್ಯೆಗಳನ್ನು ಸರಿಪಡಿಸಿ ವಿದ್ಯಾರ್ಥಿಗಳಿಗೆ ಓದುಗರಿಗೆ ಅನಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹೇಳಿಕೆ :1 ಯರಗಟ್ಟಿ ತಾಲೂಕು ಕೇಂದ್ರವಾಗಿದೆ ಆದರೆ ಪಟ್ಟಣದಲ್ಲಿ ಇರವ ಗ್ರಂಥಾಲಯಕ್ಕೆ ಅಭಿವೃದ್ಧಿ ಕೊರತೆ ಇದೆ ಮತ್ತು ಈವರೆಗೂ ಸಮರ್ಕ ಸೌಲಭ್ಯ ದೊರೆಯುತ್ತಿಲ್ಲ. ಇನ್ನು ಹೆಚ್ಚಿನ ದಿನಪತ್ರಿಕೆ, ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು ಲಭ್ಯವಾದರೆ ವಿದ್ಯಾರ್ಥಿಗಳಿಗೆ , ಓದುಗರಿಗೆ ಅನುಕೂಲವಾಗುತ್ತದೆ.
ಸಂತೋಷ ಚನ್ನಮೇತ್ರಿ, ದಲಿತ ಮುಖಂಡರು, ಯರಗಟ್ಟಿ
ಹೇಳಿಕೆ: 2
ಯರಗಟ್ಟಿ ಪಟ್ಟಣದ ಗ್ರಂಥಾಲಯ ಮೂಲಭೂತ ಸೌಕರ್ಯ ಇದ್ದವೆಂದು ಹಾಗೂ ಮಳೆಗಾಲದಲ್ಲಿ ಸೊರುತಿದ್ದು ಇದ್ದು ನಮ್ಮ ಗಮನಕ್ಕೆ ಬಂದ್ದಿದ್ದು ಶೀಘ್ರದಲ್ಲೇ ಗ್ರಂಥಾಲಯಕ್ಕೆ ನೂತನ ಕಟ್ಟಡ ಸೇರಿದಂತೆ ಡಿಜಿಟಲ್ ಗ್ರಂಥಾಲಯವನ್ನು ಮಾಡಲಾಗುವುದು.
ವಿಶ್ವಾಸ ವೈದ್ಯ, ಶಾಸಕರು ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರ.