ಲೋಕದರ್ಶನ ವರದಿ
ಸತ್ತೂರ28: ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆ (ರಿ) ಧಾರವಾಡ ತಾಲೂಕಿನ ಪ್ರಗತಿ ಬಂಧು/ ಸ್ವ-ಸಹಾಯ ಸಂಘದ ಸದಸ್ಯರಿಂದ ತಯಾರಿಸಲ್ಪಟ್ಟ ಸಿರಿ ಉತ್ಪನ್ನಗಳನ್ನು ಗ್ರಾಮೀಣ ಭಾಗದಜನರ ದಿನ ಬಳಕೆಗೆ ಉಪಯೋಗವಾಗುವಂತೆ, ಸ್ಥಳೀಯವಾಗಿ ದೊರಕುವ ಹಾಗೂ ಜನಸಾಮನ್ಯರು ಕೊಂಡುಕೊಳ್ಳುಬಹುದಾದ ಕಡಿಮೆದರದಲ್ಲಿ ಲಭ್ಯವಾಗುವಂತೆ ಮಾಡುವಉದ್ದೇಶದಿಂದಶ್ರೀ ಕ್ಷೇತ್ರ ಧರ್ಮಸ್ಥಳದ ಸಿರಿ ಗ್ರಾಮೋದ್ಯೋಗ ಸಂಸ್ಥೆಯು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆ (ರಿ)ಯಗ್ರಾಮೀಣ ಸೇವಾಕೇಂದ್ರದಲ್ಲಿಸಿರಿ ಉತ್ಪನ್ನವ್ಯಾಪಾರ ಮಳಿಗೆಯನ್ನು ಪ್ರಾರಂಭಿಸಿ ಚಾಲನೆ ನೀಡಿದರು.
ಜಿಲ್ಲೆಯಲ್ಲಿ ಎರಡು ಶಾಖೆಗಳನ್ನು ತೆರೆಯಲಾಗಿದ್ದು ಧಾರವಾಡದ ಸತ್ತೂರಿ ಆಂಜನೇಯ ದೇವಸ್ಥಾನದ ಹತ್ತಿರದ ಸೇವಾ ಕೇಂದ್ರ್ರದಲ್ಲಿಗ್ರಾಮೀಣ ವ್ಯಾಪಾರಸಿರಿ ಗ್ರಾಮೋದ್ಯೋಗ ಮಳಿಗೆಯನ್ನು ಸಂಸ್ಥೆಯ ನಿದರ್ೇಶಕರಾದ ಮನೋರಮಾ ಭಟ್ ಉದ್ಘಾಟಿಸಿ ಮಾತನಾಡಿದಅವರು ಸಿರಿ ಸಂಸ್ಥೆಯವ್ಯಾಪಾರ ಮಳಿಗೆಯಲ್ಲಿ ಕೊಬ್ಬರಿಎಣ್ಣೆ, ತೆಂಗಿನಎಣ್ಣೆ, ಸಿರಿಧಾನ್ಯಗಳಾದ(ನವಣೆ, ಹಾರಕ, ಸಜ್ಜೆ, ಸಾಮೆ, ಕೊರಲೆ, ರಾಗಿ, ಉದಲು, ಬರಗು, & ಜೋಳ), ಜೇನುತುಪ್ಪ, ಸಿರಿ ಪುಷ್ಟಿ, ಹಪ್ಪಳ ನಿಂಬೆ ಉಪ್ಪಿನಕಾಯಿ, ಮಾವಿ ಉಪ್ಪಿನಕಾಯಿ, ಹುಣಸೆಉಪ್ಪಿನಕಾಯಿ, ಫಿನಾಯಿಲ್(ವೈಟ್/ಬ್ಲಾಕ್), ಪ್ಲೋರ್ ವಾಶ್, ಹ್ಯಾಂಡ್ ವಾಶ್, ವೆಹಿಕಲ್ ವಾಶ್, ನೆಲ್ಲಿಕಾಯಿಎಣ್ಣೆ, ಪೇನ್ಎಣ್ಣೆ, ಕೇಷ ತೈಲ, ಅಗರಬತ್ತಿ, ವಿಭೂತಿ, ಶ್ರೀಗಂಧ, ಪಂಚಶ್ರಿ ತೈಲಗಳು ಗ್ರಾಮೀಣಜನತೆಗೆಕಡಿಮೆದರದಲ್ಲಿ ಲಭ್ಯವಿದೆಅದರ ಸದ್ವಿನಿಯೋಗವನ್ನು ಪಡೆದುಕೊಳ್ಳಿ ಎಂದು ಮಾಹಿತಿ ನೀಡಿದರು.
ಧಾರವಾಡ ಜಿಲ್ಲೆಯ ನಿದರ್ೇಶಕರಾದ ದಿನೇಶ್ಎಂ ಮಾತನಾಡಿ ಆರೋಗ್ಯಕರ ಉತ್ಪನ್ನಗಳ ಬಳಕೆಯು ಇತ್ತಿಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿದ್ದು. ಗ್ರಾಮೀಣ ಹಾಗೂ ನಗರ ಪ್ರದೇಶದ ಭಾಗದಲ್ಲಿ ಹೆಚ್ಚಾಗಿ ಕಲಬೆರಕೆ ಉತ್ಪನ್ನಗಳ ಬಳಕೆಯನ್ನು ಮಾಡುತ್ತಿದ್ದುಇದರಿಂದ ಹಲವಾರು ಖಾಯಿಲೆಗಳಿಗೆ ತುತ್ತಾಗುತ್ತಿರುವುದು ನಮ್ಮ ದೌಬರ್ಾಗ್ಯವಾಗಿದೆ.ಸಿರಿ ಉತ್ಪನ್ನಗಳ ಬಳಕೆಯಲ್ಲಿ ಯಾವುದೆರೀತಿಯ ಕಲಬೆರಕೆಯು ಇಲ್ಲದೆ ಆರೋಗ್ಯಕ್ಕೆ ಉತ್ತಮವಾದ ಉತ್ಪನ್ನಗಳು ದೊರೆಯುತ್ತವೆ. ಎಂದು ತಿಳಿಸಿದರು.
ಸತ್ತೂರಿನ ಊರಿನ ಗಣ್ಯರಾದ ಮಲ್ಲಯ್ಯ ಹಿರೇಮಠರವರು ಮಾತನಾಡಿ ಸಿರಿ ಧಾನ್ಯಗಳುಕಡಿಮೆ ಮಳೆಯಲ್ಲಿ ಬೆಳೆಯ ಬಹುದಾದ ಪದಾರ್ಥಗಳಾಗಿವೆ, ಹಿಂದಿನ ಕಾಲದಲ್ಲಿ ಈ ಪದಾರ್ಥಗಳ ಸೇವನೆಯಿಂದ ಹೆಚ್ಚು ಆರೋಗ್ಯದಾಯಕವಾಗಿ ಇರುತ್ತಿದ್ದರು.ಇತ್ತಿಚಿನ ದಿನಗಳಲ್ಲಿ ಹೈಬ್ರಿಡ್ ಪದಾರ್ಥಗಳ ಸೇವನೆಯಿಂದ ಹಲವಾರು ತೊಂದರೆಗಳು ಬಾದಿಸುತ್ತಿರುವುದಾಗಿದೆ. ಈ ಸಿರಿ ಉತ್ಪನ್ನಗಳ ಪುರ್ನಬಳಗೆ ಧಮರ್ಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯಾಪಾರ ಮಳಿಗೆ ಮೂಲಕ ಗ್ರಾಮೀಣ ಭಾಗದ ಜನರಿಗೆ ಮತ್ತೊಂದು ಕೊಡುಗೆಯನ್ನು ನೀಡಿದ್ದಾರೆ ಇದರ ಸದುಪಯೋಗವನ್ನು ಪಡೆದುಕೊಳ್ಳೊಣ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ನಾಗಪ್ಪಚಿಣಗಿಊರಿನಗಣ್ಯರು, ಆತ್ಮಾನಂದ ತಳವಾರ, ಮಂಜುನಾಥಕಟ್ಟಿ ನವಲೂರ, ಊರಿನಗಣ್ಯರು ಹಾಗೂ ಯೋಜನೆಯ ವಿದ್ಯಾಗಿರಿ ವಲಯದ ಮೇಲ್ವಿಚಾರಕಿಯಾದ ಪೂಣರ್ಿಮಾ, ವಲಯದ ಸೇವಾಪ್ರತಿನಿಧಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು