ವಿಶೇಷ ಮತದಾರರ ನೋಂದಣಿ ಅಭಿಯಾನಕ್ಕೆ ತಹಸೀಲ್ದಾರ್ ಪ್ರಾಣೇಶ್ ಎಚ್ ಚಾಲನೆ

ನೋಂದಣಿ, ತಿದ್ದುಪಡಿ ಮಾಡಿಕೊಳ್ಳು ಚುನಾವಣಾ ಆಯೋಗ ಅವಕಾಶ

ಕುಕನೂರ : ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಕೊಪ್ಪಳ, ಜಿಲ್ಲಾ ಪಂಚಾಯತ್ ಕೊಪ್ಪಳ ಹಾಗೂ ತಾಲೂಕ ಪಂಚಾಯತ ಕುಕನೂರ ಮತ್ತು ತಾಲೂಕ ಆಡಳಿತ ಕುಕನೂರ ಇವರ ಸಂಯುಕ್ತ ಆಶ್ರಯದಲ್ಲಿ ಹೊಸ ಮತದಾರರ ನೊಂದಣಿ ಅಭಿಯಾನಕ್ಕೆ ಕುಕನೂರ ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ತಾಲೂಕ ದಂಡಾಧಿಕಾರಿಗಳಾದ ಪ್ರಾಣೇಶ್ ಎಚ್ ಚಾಲನೆ ನೀಡಿದರು.ನಂತರ ತಾಲೂಕ ತಹಶೀಲ್ದಾರರಾದ ಎಚ್ ಪ್ರಾಣೇಶ್ ರವರು  ಭಾರತ ಚುನಾವಣಾ ಆಯೋಗ ಮಾತನಾಡಿಇದೇ ಡಿಸೆಂಬರ್-3 ರಿಂದ ಹೊಸ ಮತದಾರರ ನೊಂದಣಿ ಅಭಿಯಾನಕ್ಕೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದ್ದು ಇದಕ್ಕಾಗಿ 18 ವರ್ಷ ತುಂಬಿದ ಪ್ರತಿಯೋಬ್ಬ ನಾಗರೀಕರು ಮತದಾರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳು ನಮೂನೆ-6 ಅನ್ನು ತುಂಬಿ ತಮ್ಮ ವಾರ್ಡ BLO ಹತ್ತಿರ ಕೊಡಬೇಕು, ಅಥವಾ *Voter help line* ಮೋಬೈಲ್ ಆಪ್ ನಲ್ಲಿ ನೊಂದಣಿ ಮಾಡಿಕೊಳ್ಳಬಹುದು ಎಂದರು.ನಂತರ ಕುಕನೂರ ತಾಲೂಕ ಪಂಚಾಯತಿಯ ಸಹಾಯಕ ನಿರ್ದೇಶಕರು ಪಂಚಾಯತ್ ರಾಜ್ ವೆಂಕಟೇಶ್ ವಂದಾಲ್ ರವರು,ಮಾತನಾಡಿ ನಮ್ಮದು ಪ್ರಜಾ ಪ್ರಭುತ್ವ ದೇಶ ಇಲ್ಲಿ ಪ್ರಜೇಗಳೆ ಪ್ರಭುಗಳು ಪ್ರತಿಯೋಂದು ಚುನಾವಣೆಯಲ್ಲಿ ಉತ್ತಮ ಜನಪ್ರತಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಗುರುತರ ಜವಬ್ದಾರಿ ಮತದಾರರ ಕೈಯಲ್ಲಿ ಇರುತ್ತದೆ. ಅದಕ್ಕಾಗಿ, ಪ್ರಜ್ಞಾವಂತ  ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಲ್ಲಿ ಯುವಕರು ಹೆಚ್ಚು  ಪ್ರಭಾವ ಬೀರುತ್ತಾರೆ. ಅದಕ್ಕಾಗಿ 18 ವರ್ಷ ತುಂಬಿದ ಪ್ರತಿಯೋಬ್ಬರು ಮತದಾನದ ಹಕ್ಕು ಪಡೆಯಲು ಮತದಾರರ ಗುರುತಿನ ಚೀಟಿ ಹೊಂದಬೇಕು. ಅದಕ್ಕಾಗಿ * ಹೊಸ ನೊಂದಣಿಗಾಗಿ ಅರ್ಜಿ ನಮೂನೆ-6.*SSLC ಅಂಕ ಪಟ್ಟಿ/ ವರ್ಗಾವಣೆ * ಪ್ರಮಾಣ ಪತ್ರ. * ಆಧಾರ ಕಾರ್ಡ ಪ್ರತಿ.*ಪಾಸ್ ಪೋರ್ಟ ಸೈಜ್ ಪೋಟೋ. ಒಂದೆ ಕುಟುಂಬದ ಸದಸ್ಯರು ಒಂದೆ ಕಡೆ ಮತದಾರ ಪಟ್ಟಿಯಲ್ಲಿ ಬರಲು ಕುಟುಂಬದ ಒಬ್ಬರ ಮತದಾರರ ಗುರುತಿನ ಚೀಟಿ ಪ್ರತಿಗಳನ್ನು ಅಡಕಗೊಳಿಸಿBLO ಗಳಿಗೆ ನೀಡಬೇಕು ಮತ್ತು ಎಲ್ಲರ ಹತ್ತಿರ ಮೊಬೈಲ್ ಇವೆ ಅದರಲ್ಲಿ voter help line Mobile app ಮೂಲಕ ತುರ್ತು ನೊಂದಣಿ ಹೊಂದಲು ಅವಕಾಶ ಇದೆ ಎಂದರು.ಕಾರ್ಯಕ್ರಮದಲ್ಲಿ ಸರ್ಕಾರಿ ಕೈಗಾತಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಚೆನ್ನವಸಪ್ಪ ಬಳ್ಳಾರಿ, ಶಿಕ್ಷಕರಾದ ಮಂಜುನಾಥ ಶ್ಯಾವಿಯಾರ, ಫ್ರಭು ರಾಠೋಡ, ಚಿದಾನಂದ ಬಿ, ಮಂಜುನಾಥ ಗಾಣಿಗೇರ, ಮಹಮ್ಮದ್ ಅಸರದ, ಶಿವಲೀಲಾ ಇತರೆ ಸಿಬ್ಬಂದಿಗಳು ತಾಲೂಕ ಐ.ಇ.ಸಿ ಸಂಯೋಜಕರಾದ ಲಕ್ಷ್ಮಣ ಕೆರಳ್ಳಿ, ಕೈಗಾರಿಕ ತರಬೇತಿ ಸಂಸ್ಥೆಯ 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು