ಲೋಕದರ್ಶನ ವರದಿ
ಧಾರವಾಡ 29 : ತಾಲೂಕಿನ ತಡಕೋಡ ಗ್ರಾಮದ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಕನ್ನಡ ಸಕರ್ಾರಿ ಪಾಠಶಾಲೆಯ ಅಧ್ಯಾಪಕ ಬಸವರಾಜ ಕರೂರ ಬೆಂಗಳೂರಿನಲ್ಲಿ ಜರುಗಿದ 2018-19ನೇ ಸಾಲಿನ ರಾಜ್ಯಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪಧರ್ೆಗಳಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಪ್ರಾಥಮಿಕ ಶಿಕ್ಷಣದ ಟಿ.ಎಲ್.ಎಂ. ವಿಭಾಗದಲ್ಲಿ ಬಸವರಾಜ ಕರೂರ ಸಿದ್ಧಪಡಿಸಿದ್ದ 'ಸರಳ ಗಣಿತ ಪಾಠೋಪಕರಣ'ದ ಮೂಲಕ ಸುಮಾರು 100 ಗಣಿತ ಕಲಿಕಾಂಶದ ಪರಿಕಲ್ಪನೆಗಳನ್ನು ಬೋಧಿಸಬಹುದೆಂಬುದನ್ನು ಇವರು ಸಾಬೀತುಪಡಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ, ಕನರ್ಾಟಕ ರಾಜ್ಯ ವಿದ್ಯಾಥರ್ಿಗಳ ಕ್ಷೇಮಾಭಿವೃದ್ಧಿ ನಿಧಿ, ಶಿಕ್ಷಕರ ಕಲ್ಯಾಣ ನಿಧಿ, ಶಿಕ್ಷಕರ ಸದಸ , ಬೆಂಗಳೂರು ದಕ್ಷಿಣ ಜಿಲ್ಲೆಯ ಡಿಡಿಪಿಐ ಕಛೇರಿಯ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಈ ಸ್ಪಧರ್ೆಗಳು ಬೆಂಗಳೂರಿನಲ್ಲಿ ಜರುಗಿದವು. ಶಾಲೆಯ ಮುಖ್ಯಾಧ್ಯಾಪಕ ಕೆ.ಎಲ್. ಕರ್ಚಕಟ್ಟಿ ಹಾಗೂ ಎಸ್.ಡಿ.ಎಂ.ಸಿ. ಪದಾಧಿಕಾರಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಶಿಕ್ಷಕ ಬಸವರಾಜ ಕರೂರ ಅವರನ್ನು ಅಭಿನಂದಿಸಿದ್ದಾರೆ.
ಅಧ್ಯಾಪಕ ಬಸವರಾಜ ಕರೂರ ಬೆಂಗಳೂರಿನಲ್ಲಿ ಪ್ರದರ್ಶನಗೊಂಡು ರಾಜ್ಯಕ್ಕೇ ಪ್ರಥಮ ಸ್ಥಾನದ ಗೌರವಕ್ಕೆ ಪಾತ್ರವಾದ ತಮ್ಮ 'ಸರಳ ಗಣಿತ ಪಾಠೋಪಕರಣ'ದೊಂದಿಗೆ.