ಇಂದಿನಿಂದ ಸಮೀಕ್ಷೆ ಕಾರ್ಯ: ಸಹಕರಿಸಲು ಮನವಿ

Survey work to begin today: Request for cooperation

ಇಂದಿನಿಂದ ಸಮೀಕ್ಷೆ ಕಾರ್ಯ: ಸಹಕರಿಸಲು ಮನವಿ 

ಮುದ್ದೇಬಿಹಾಳ, 04 : ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಸಮೀಕ್ಷೆ ಕಾರ್ಯ ಮೇ 5ರಿಂದ ಆರಂಭಗೊಳ್ಳಲಿದ್ದು,  ಸಂಬಂಧಿಸಿದ ಗಣತಿದಾರೆಲ್ಲರೂ  ಕುಟುಂಬದ ಜಾತಿ ಮತ್ತು ಇತರೆ ಮಾಹಿತಿಯನ್ನು ಗಣತಿದಾರರಿಗೆ ನಿಖರವಾಗಿ ನೀಡಬೇಕು ಎಂದು ತಹಶಿಲ್ದಾರ ಬಲರಾಮ ಕಟ್ಟಿಮನಿ ಹೇಳಿದರು. 

ಪಟ್ಟಣದ ಅಭ್ಯೂದ ಪಿಯು ಸಾಯನ್ಸ್‌ ಕಾಲೇಜಿನಲ್ಲಿ ತಾಲ್ಲೂಕು ಆಡಳಿತ ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು ಪಂಚಾಯಿತಿ, ಶಿಕ್ಷಣ ಇಲಾಖೆಯಿಂದ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಕಾರ್ಯದ ಗಣತಿದಾರರು ಮತ್ತು ಮೇಲ್ವಿಚಾರಕರ ತಾಲ್ಲೂಕು ಮಟ್ಟದ ತರಬೇತಿ ಕಾರ್ಯಾಗಾರವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಟಿಸಿ ಅವರು ಮಾತನಾಡಿದರು. ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ 246 ಬೂತ್ ಗಳಲ್ಲಿ  303ಕ್ಕೂ ಹೆಚ್ಚು ಗಣತಿದಾರರನ್ನು ಸಮೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಸಮೀಕ್ಷಾ ಕಾರ್ಯವನ್ನು ಯಾವುದೇ ಗೊಂದಲಗಳಿಲ್ಲದೆ ಪೂರ್ಣಗೊಳಿಸಬೇಕು ಎಂದರು. 

ಈ ವೇಳೆ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಬಿ ಎಸ್ ಸಾವಳಗಿ ಹಾಗೂ ತಾಲೂಕಾ ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ಧೇಶಕಿ ಬಸಂತಿ ಮಠ ಅವರು ಮಾತನಾಡಿ ಪರಿಶಿಷ್ಟ ಜಾತಿ ಒಳಪಂಗಡಗಳ ಸಮಗ್ರ ಮಾಹಿತಿ ಪಡೆದು  ನಮಗೆ ನ್ಯಾಯ ಒದಗಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದ ಹಿನ್ನೇಲೆಯಲ್ಲಿ ಸಧ್ಯ ಸರಕಾರ ಪರಿಶಿಷ್ಟ ಜಾತಿ ಒಳಪಂಗಡಗಳ  ದತ್ತಾಂಶ ಸಂಗ್ರಹಕ್ಕೆ ಸಮೀಕ್ಷೆ ನಡೆಸಲಾಗುತ್ತಿದೆ. ಮೇ. 5ರಿಂದ ಮೇ. 17ರವರೆಗೆ  ಸಮೀಕ್ಷೆದಾರರು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಕೈಗೊಳ್ಳುವರು.  ಮೆ 17ರಿಂದ 19 ರವರೆಗೆ ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮೀಕ್ಷೆ ಕೈಗೊಳ್ಳಲಾಗುವುದು ಮೇ. 19ರಿಂದ ಮೇ. 21ರವರೆಗೆ ಸಮೀಕ್ಷೆ ಬ್ಲಾಕ್‌ಗಳಲ್ಲಿ ವಿಶೇಷ ಶಿಬಿರಗಳನ್ನು ಕೈಗೊಂಡು ಭೇಟಿ ಅವಧಿಯಲ್ಲಿ ಬಿಟ್ಟು ಹೋದ ಪರಿಶಿಷ್ಟ ಜಾತಿ ಕುಟುಂಬಗಳ ಮಾಹಿತಿಯನ್ನು ಸಂಗ್ರಹಿಸಲಾಗುವುದು ಕಾರಣ ಗಣತಿದಾರರು ಸರ್ಕಾರದ ಸೌಲಭ್ಯಗಳು ಪರಿಶಿಷ್ಟ ಜಾತಿಯ ಒಳಪಂಗಡಗಳಿಗೆ ಸಮಾನವಾಗಿ ತಲುಪಬೇಕು ಎನ್ನುವ ಹಿನ್ನೆಲೆಯಲ್ಲಿ ಈ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಮನೆ ಮನೆಗೆ ಹೋಗಿ ಸಮೀಕ್ಷೆದಾರರು ಸಮೀಕ್ಷೆ ಮಾಡುವಾಗ ಸಹನೆ, ತಾಳ್ಮೆಯಿಂದ ಕಾರ್ಯನಿರ್ವಹಿಸಬೇಕು  ಸಮರ​‍್ಕ ಹಾಗೂ ಎಲ್ಲಿಯೂ ಲೋಪವಾಗದಂತೆ ಯಾವೂದೇ ಆರೋಪ ಬರದಂತೆ ಸತ್ಯ ಮತ್ತು ವಸ್ತು ನಿಷ್ಠ ಸಮೀಕ್ಷೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು. 

  ಈ ವೇಳೆ  ತಾಲೂಕಾ ಕ್ಷೇತ್ರ ಸಮನ್ವಯಾಧಿಕಾರಿ ಯು ಬಿ ಧರಿಕಾರ, ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ ಎಚ್ ಮುದ್ನೂರ, ಕಾರ್ಯದರ್ಶಿ ಎಸ್ ಆರ್ ಪಾಟೀಲ, ಆಯ್ ಯ ಮಠ, ಮಹಾದೇವ ಗುಡಗುಂಟಿ, ಬಿ ಎಚ್ ಭಗವತಿ, ಸಿ ಆರ್ ಪಿ ಗುಂಡು ಚವ್ಹಾಣ, ಪರಮೇಶ ಹೊಸಮನಿ, ಐ ಎ ಹಿರೇಮಠ ಸೇರಿದಂತೆ ಹಲವರು ಇದ್ದರು.