ಬೆಳೆ ಕಟಾವು ಮೇಲ್ವಿಚಾರಣೆ ಮಾಡಿದ:ಡಾ ಕನ್ನೂರ
Supervised the crop harvesting: Dr. Kannur
ಇಂಡಿ 10: ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ ಭೀಮಾಶಂಕರ ಕನ್ನೂರ ರವರು ಹಿಂಗಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರಗುಡಿ ಗ್ರಾಮದ ಮುಂಗಾರು ಹಂಗಾಮಿನ ತೋಗರಿ (ಮಳೆಯಾಶ್ರಿತ) ಬೆಳೆಯ ನಮೂನೆ 2ರ ಕಟಾವು ಪ್ರಕ್ರಿಯೆಯ ಮೇಲ್ವಿಚಾರಣೆ ಮಾಡಿದ ಅವರು 2025 - 2026 ನೇ ಸಾಲಿನ ಬೆಳೆ ಅಂದಾಜು ಸಮೀಕ್ಷೆ ಅಡಿಯಲ್ಲಿ ತಾಲೂಕಿನ ಹಿಂಗಣಿ ಗ್ರಾಮ ಪಂಚಾಯತ ವ್ಯಾಪ್ತಿಯ ಬರಗುಡಿ ಗ್ರಾಮದಲ್ಲಿ ತೊಗರಿ ಬೆಳೆಯ ಬೆಳೆ ಕಟಾವು ಪ್ರಯೋಗವನ್ನು ಮಾಡಿ.ಬೆಳೆ ಅಂದಾಜು ಸಮೀಕ್ಷೆ ಪ್ರಧಾನಮಂತ್ರಿ ಪಸಲ್ ಭೀಮಾ ಯೋಜನೆಯ ಹಾಗೂ ದೇಶದ ಆಮದು ರು್ತ ನಿರ್ಣಯಿಸುವಲ್ಲಿ ಪ್ರಮುಖ ಪಾತ್ರವಹಿಸುವುದರಿಂದ ಸಂಬಂಧಿಸಿದ ಅಧಿಕಾರಿಗಳು ನಿಯಮಾನುಸಾರವಾಗಿ ಪ್ರಯೋಗವನ್ನು ಕೈ ಗೊಳ್ಳಲು ಸೂಚನೆ ನೀಡಿದರು. ಈ ಸಮಯದಲ್ಲಿ ತಾಲೂಕ ಪಂಚಾಯತ್ ಸಿಬ್ಬಂದಿಗಳಾದ ರಾಜು ಚವ್ಹಾಣ ಎಂ ಬಿ ಕಲಾವಂತ, ಹಿಂಗಣಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ರಮೇಶ ಹೂಗಾರ, ಓರಿಯಂಟ್ ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿ ಮಲ್ಲಿಕಾರ್ಜುನ್ ಬಿರಾದಾರ ಗ್ರಾಮದ ರೈತರಾದ ಸುನೀಲ ಕ್ಷತ್ರಿ, ಸೋಮನಿಂಗ ಅಂಕಲಗಿ, ಲಕ್ಷ್ಮಣ ಶೆಂಡಗಿ, ಮಹಾದೇವ ಕಾಡಿಮಗೆರಿ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 