ಪಂಚಮಸಾಲಿ ಸಮಾಜದ ಹಕ್ಕಿಗಾಗಿ ಹೋರಾಟ ತೀವ್ರ: ಬಸವಜಯ ಮೃತ್ಯುಂಜಯ ಸ್ವಾಮೀಜಿ
Struggle for Panchamasali community's rights intensifies: Basavajaya Mrutyunjaya Swamiji
ಇಂಡಿ 02 : ಪಂಚಮಸಾಲಿ ಸಮಾಜದ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಲಾಗಿದ್ದು, ಸಮಾಜ ಬಾಂಧವರು ಜಾಗೃತರಾಗಬೇಕು ಎಂದು ಪಂಚಮಸಾಲಿ ಸಮಾಜದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ತಾಲೂಕಿನ ಸಾತಲಗಾಂವ ಗ್ರಾಮದ ಶಿವಯೋಗೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಮೇನೆಮನೆಗಳಲ್ಲಿ ಕೂಡಲಸಂಗಮ ಹಾಗೂ ಸಾಮೂಹಿಕ ಇಷ್ಟಲಿಂಗ ಅಭಿಯಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಷ್ಟಲಿಂಗ ಪೂಜೆ ಮೂಲಕ ಭಕ್ತರು ಹಾಗೂ ಸಮಾಜದ ಮುಖಂಡರು ಮೀಸಲಾತಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದು, ಸರ್ಕಾರದ ಮೇಲೆ ಒತ್ತಡ ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಸರ್ಕಾರ ಸಮಾಜದ ಸಹನೆಯನ್ನು ಪರೀಕ್ಷಿಸದೆ ತಕ್ಷಣ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಸಮಾಜದ ಜನರು, ಮಠಾಧೀಶರು, ಯುವಕರು ಹಾಗೂ ಮಹಿಳೆಯರು ಮುಂದಿನ ಹೋರಾಟದಲ್ಲಿ ಭಾಗವಹಿಸಲಿದ್ದು, ಸರ್ಕಾರಕ್ಕೆ ಮತ್ತೊಮ್ಮೆ ಸಮಾಜದ ಒಗ್ಗಟ್ಟಿನ ಶಕ್ತಿ ಪ್ರದರ್ಶಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಮಾಜದ ತಾಲೂಕು ಅಧ್ಯಕ್ಷ ವಿ.ಹೆಚ್. ಬಿರಾದಾರ, ಉಮೇಶ ಬಲಬಟ್ಟಿ, ಶಿವಾನಂದ ಚಾಳೀಕಾರ, ಬಾಳು ಮುಳಜಿ, ಶರಣಗೌಡ ಬಂಡಿ, ಅನೀಲ ಏಳಗಿ, ಈರನಗೌಡ ಪಾಟೀಲ, ಶ್ಯಾಮಗೌಡ ಬಿರಾದಾರ, ಶಂಕರಗೌಡ ಪಾಟೀಲ, ನೀಲಕಂಠ ಬಿರಾದಾರ, ನಾಗೇಶ ಖಂಡಾಳ, ರಮೇಶ ಬಿರಾದಾರ, ಶಿವಯೋಗಪ್ಪ ಬಿರಾದಾರ, ಶಿವಕುಮಾರ ಬಿರಾದಾರ, ರಾಜು ಕಾಮಗೊಂಡ, ರಾಜು ಬಿರಾದಾರ, ಉಮೇಶ ಖಂಡಾಳ, ಆನಂದ ಪಾರಶೆಟ್ಟಿ, ಎಸ್.ಕೆ. ಕಾಮಗೊಂಡ, ಶ್ರೀಶೈಲ ಕೋರಳ್ಳಿ, ರಮೇಶ ಬರಡೋಲ ಸೇರಿದಂತೆ ನೂರಾರು ಮಹಿಳೆಯರು ಹಾಗೂ ಭಕ್ತರು ಉಪಸ್ಥಿತರಿದ್ದರು.ಸಚಿನ್ ಬಿರಾದಾರ ಭಕ್ತರಿಗೆ ಅನ್ನಸಂತರೆ್ಣ ನೆರವೇರಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 