14ರಂದು ಅನುದಾನಿತ ಶಾಲಾ ಶಿಕ್ಷಕರ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ
State-level Teachers' Day celebration for aided school teachers on the 14th
14ರಂದು ಅನುದಾನಿತ ಶಾಲಾ ಶಿಕ್ಷಕರ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ
ರಾಣೇಬೆನ್ನೂರು 11: ಉತ್ತರ ಕರ್ನಾಟಕದ ಹೆಬ್ಬಾಗಿಲು ವಾಣಿಜ್ಯ ನಗರದಲ್ಲಿ ಸೆಪ್ಟೆಂಬರ್ 14, 2025 ರಂದು ರವಿವಾರ ಮುಂಜಾನೆ 9:30 ಗಂಟೆಗೆ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ, ಪ್ರತಿಭಾ ವಿದ್ಯಾರ್ಥಿ ಪ್ರಶಸ್ತಿ ಪ್ರಧಾನ ಸಮಾರಂಭವು. ಮೃತುಂಜಯ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ, ನಾಗರಾಜ ನೆಲವಾಗಲ ಹೇಳಿದರು. ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು. ಕಳೆದ ಮೂರು ವರ್ಷಗಳಿಂದ ರಾಜ್ಯಸಂಘಟನೆಯಿಂದ ಬೆಂಗಳೂರು ನಗರದಲ್ಲಿ ಮಾತ್ರ ಇಂತಹ ಸಮಾವೇಶ ಆಯೋಜಿಸು ತ್ತಾ ಬರಲಾಗುತ್ತಿತ್ತು. ತಾಲೂಕಿನ ಮತ್ತು ಜಿಲ್ಲೆಯ ಶಿಕ್ಷಕರ ಸಮುದಾಯದ ಓತ್ತಾಸೆ, ಅಪೇಕ್ಷೆ ಕಾರಣದಿಂದಾಗಿ ರಾಜ್ಯ ಸಂಘಟನೆ ಅಧ್ಯಕ್ಷರಾದ ಎನ್.ರಾಜ ಗೋಪಾಲ್ ಅವರು, ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಇಂತಹ ಸಮಾವೇಶವೂ ನಡೆಯಬೇಕು ಎನ್ನುವ ಸದೀಚ್ಛತೆಯಂತೆ ಹಾವೇರಿ ಜಿಲ್ಲೆಗೆ ಪ್ರಥಮ ಆದ್ಯತೆ ಸಿಕ್ಕಿದೆ ಎಂದರು.
ಅದ್ದೂರಿ ಸಮಾವೇಶ ನಡೆಸಲು ಈಗಾಗಲೇ, ರಾಜ್ಯ ಸಂಘಟನೆಯ ಮಾರ್ಗದರ್ಶನದಲ್ಲಿ ಜಿಲ್ಲೆ ಮತ್ತು ತಾಲೂಕಿನ ಎಲ್ಲಾ ಸಂಘಟನೆಯ ಗಣ್ಯರು ನಿರಂತರ ಶ್ರಮಿಸುತ್ತಿದ್ದಾರೆ ಇದರಿಂದಾಗಿ ಈ ಸಮ್ಮೇಳನವು ನಾ ಭೂತೋ, ನಾ ಭವಿಷ್ಯತೋ ಎನ್ನುವ ರೀತಿಯಲ್ಲಿ ನಡೆಯುವ ವಿಶ್ವಾಸ ನಮ್ಮೆಲ್ಲರದಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮತ್ತು ತಾಲೂಕ ಸಂಘದ ಮುಖಂಡರಾದ ಮಾಲತೇಶ್ ಎಂ, ಎಸ್.ಹೆಚ್. ಪಾಟೀಲ್, ಮಾರುತಿ ಲಮಾಣಿ, ಬಸವರಾಜ ನಾಯಕ್, ಎಮ್ ಎಸ್ ಪಾಟೀಲ್, ಎಸ್. ಸಿ. ಹಿರೇಮಠ, ಅಹಮ್ಮದ್ ಖತಿಬ್, ಚಂದ್ರಶೇಖರ ಗ್ಯಾನಗೌಡ್ರ, ಬಸವರಾಜ ಶಾಮನೂರ, ಮಧು ಅಳಲಗೇರಿ, ಸುಧಾ ಕೋಟಿಹಾಳ, ಸೇರಿದಂತೆ ಜಿಲ್ಲಾ ಮತ್ತು ತಾಲೂಕ ಸಂಘದ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 