ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಫ್ಲೋರ್ ಬಾಲ್ ಪಂದ್ಯಾಟಗಳು
ಗದಗ 21: ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಫ್ಲೋರ್ ಬಾಲ್ ಪಂದ್ಯಾಟಗಳು ಡಿಸೆಂಬರ್-23 ಹಾಗೂ 24 ರಂದು ಗದಗ ನಗರದ ಕೆ.ಹೆಚ್ ಪಾಟೀಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿದೆ. ಕ್ರೀಡಾಕೂಟವನ್ನ ಇಲಾಖೆಯು ಪ್ರತಿ ವರ್ಷದಂತೆ ಈ ವರ್ಷವು ನಮ್ಮ ಗದಗ ಜಿಲ್ಲೆಗೆ ರಾಜ್ಯ ಮಟ್ಟದ ಫ್ಲೋರ್ ಬಾಲ್ ಪಂದ್ಯಾವಳಿಯನ್ನು ಆಯೋಜಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕೆ ಇಲಾಖೆಗೆ ಧನ್ಯವಾದಗಳನ್ನ ಗದಗ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಸಿದ್ದಲಿಂಗ ಬಂಡು ಮಸನಾಯಿಕ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾನಾಡಿದ ಅವರು ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಬೆಂಗಳೂರು ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಗದಗ ಜಿಲ್ಲೆ.ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ(ರಿ) ಕರ್ನಾಟಕ ರಾಜ್ಯ ಪದವಿ ಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘ(ರಿ) ಧಾರವಾಡ,ಜಿಲ್ಲಾ ಘಟಕ ಗದಗ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ (ರಿ) ಜಿಲ್ಲಾ ಘಟಕ ಗದಗ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ ಜಿಲ್ಲಾ ಘಟಕ ಗದಗ ಪದವಿ ಪೂರ್ವ ಶಿಕ್ಷಣ ಇಲಾಖೆಯ ಭೋಧಕೇತರ ಸಂಘ (ರಿ) ಬೆಂಗಳೂರು, ಜಿಲ್ಲಾ ಘಟಕ ಗದಗ ರವರ ಸಹಯೋಗದಲ್ಲಿ ಈ ಪಂದ್ಯಾವಳಿಗಳನ್ನ ಆಯೋಜಿಸಿದ್ದು,ಹಿಂದಿನ ವರ್ಷ ನಮ್ಮ ಜಿಲ್ಲೆಗೆ ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿಗಳನ್ನು ಆಯೋಜನೆ ಮಾಡಲು ಅವಕಾಶ ಕಲ್ಪಿಸಿ ಆ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದು ನಮಗೆ ಹೆಮ್ಮೆ ತಂದಿದೆ ಎಂದರು.
ಅದರಂತೆ ನಮ್ಮ ರಾಜ್ಯದಲ್ಲಿ ಒಟ್ಟು 33 ಶೈಕ್ಷಣಿಕ ಜಿಲ್ಲೆಗಳಿದ್ದು ಎಲ್ಲಾ ಜಿಲ್ಲೆಗಳಿಂದ ಬಾಲಕರ ಮತ್ತು ಬಾಲಕಿಯರ ಫ್ಲೋರ್ ಬಾಲ್ ತಂಡಗಳು ಭಾಗವಹಿಸುವ ನೀರೀಕ್ಷೆಯಿದ್ದು, ಒಟ್ಟು 450 ಜನ ಆಟಗಾರರು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಈ ಒಂದು ಪಂದ್ಯದಲ್ಲಿ ಒಟ್ಟು 15 ಜನ ಆಟಗಾರರು ಭಾಗವಹಿಸುವರು ಅದರಲ್ಲಿ 5+1 ರಂತೆ ಆಟಗಾರರು ಕ್ರೀಡೆಯಲ್ಲಿ ಪಾಲ್ಗೊಳ್ಳುವರು. ಈ ಭಾರಿ ನಮ್ಮ ಜಿಲ್ಲೆಯಿಂದ ಪ್ಲೋರ್ ಬಾಲ್ ಪಂದ್ಯಾವಳಿಯಲ್ಲಿ ಆಟಗಾರರು ಪಾಲ್ಗೊಳ್ಳುವ ಭರವಸೆ ಇದೆ ಎಂದರು. ಫ್ಲೋರ್ ಬಾಲ್ ಪಂದ್ಯಾವಳಿಗೆ ಬೇರೆ ಬೇರೆ ಜಿಲ್ಲೆಗಳಿಂದ ಬಂದಂತಹ ತಂಡಗಳು ದಿನಾಂಕ 22-12-2024 ರಂದು ಮದ್ಯಾಹ್ನ 4ಘಂಟೆಯ ಒಳಗಾಗಿ ನಗರದ ಕೆ.ಹೆಚ್. ಪಾಟೀಲ್ ಜಿಲ್ಲಾ ಕ್ರೀಡಾಂಗಣ ಗದಗದಲ್ಲಿ ಪಂದ್ಯದ ಹೆಸರು ನೋಂದಾಯಿಸಲು ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ ನಂತರ ಬಾಲಕ ಮತ್ತು ಬಾಲಕಿಯರಿಗೆ ಗದಗ ನ ವಿವಿಧ ವಸತಿ ನಿಲಯಗಳಲ್ಲಿ ಪ್ರತ್ಯೇಕ ವಸತಿ ವ್ಯವಸ್ಥೆ ಮಾಡಲಾಗಿದೆ.ನೋಂದಾಯಿತ ತಂಡಗಳು ತಮ್ಮ ತಮ್ಮ ವಸತಿ ಸ್ಥಳಕ್ಕೆ ತೆರಳಲು ವಾಹನ ಸೌಕರ್ಯವನ್ನು ಕೂಡ ವ್ಯವಸ್ಥೆ ಮಾಡಲಾಗಿದೆ. ಬಾಲಕ ಮತ್ತು ಬಾಲಕಿಯರಿಗೆ ಬೇರೆ ಬೇರೆ ವಸತಿ ನಿಲಯಗಳನ್ನು ನಿಗದಿಪಡಿಸಿದ್ದು, ಅವುಗಳ ಮಾಹಿತಿಯನ್ನು ನೋಂದಣಿ ಸ್ಥಳದಲ್ಲಿ ಒದಗಿಸಲಾಗಿದೆ. ವಸತಿ ನಿಲಯಗಳಲ್ಲಿ ಎಲ್ಲಾ ವಿದ್ಯಾರ್ಥಿ/ನಿಯರಿಗೆ ಮೂಲ ಸೌಲಭ್ಯಗಳನ್ನು ಒದಗಿಸಲಾಗಿದ್ದು,ಪ್ರತಿ ನಿತ್ಯ ವಸತಿ ನಿಲಯದಿಂದ ಕ್ರೀಡಾಂಗಣಕ್ಕೆ ಬಂದು ಹೋಗಲು ಸೂಕ್ತ ಸಾರಿಗೆ ವ್ಯವಸ್ಥೆ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಬಾಲಕ-ಬಾಲಕಿಯರ ತಂಡ ಹಾಗೂ ಟೀಂ ಮ್ಯಾನೇಜರ್ ಗಳಿಗೆ ಲಘು ಉಪಹಾರ ಮತ್ತು ಊಟದ ವ್ಯವಸ್ಥೆಯನ್ನ ಒದಗಿಸಲಾಗಿದೆ. 2024-25 ನೇ ಸಾಲಿನ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಪ್ಲೋರ್ ಬಾಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭವು ಡಿಸೆಂಬರ್-22 ರ ಭಾನುವಾರ ಸಾಯಂಕಾಲ 5 ಗಂಟೆಗೆ ನಗರದ ಕೆ ಎಚ್ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಏರಿ್ಡಸಲಾಗಿದ್ದು,ಇದರ ಘನ ಉಪಸ್ಥಿತಿಯನ್ನ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರ್ಪ ವಹಿಸುವರು, ಕಾರ್ಯಕ್ರಮದ ಉದ್ಘಾಟನೆ ಮತ್ತು ಅಧ್ಯಕ್ಷತೆಯನ್ನ ಕಾನೂನು ನ್ಯಾಯ ಹಾಗೂ ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರು ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿಗಳು, ಹಾವೇರಿ ಲೋಕಸಭೆ ಹಾಲಿ ಸಂಸದರಾದ ಬಸವರಾಜ ಬೊಮ್ಮಾಯಿ, ಸರ್ಕಾರದ ಮುಖ್ಯ ಸಚೇತಕರು ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ್, ಕರ್ನಾಟಕ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು,ರೋಣ ಶಾಸಕರಾದ ಜಿ.ಎಸ್. ಪಾಟೀಲ, ಬಾಗಲಕೋಟ ಸಂಸದರಾದ ಪಿ ಸಿ ಗದ್ದಿಗೌಡರ, ವಿ.ಪ.ಸದಸ್ಯರಾದ ಎಸ್ ವಿ ಸಂಕನೂರ, ಪ್ರದೀಪ ಶೆಟ್ಟರ,ಶಾಸಕರಾದ ಸಿ ಸಿ ಪಾಟೀಲ,ಡಾ.ಚಂದ್ರು ಲಮಾಣಿ, ಗದಗ- ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ ಭಾಗವಹಿವುದಾಗಿ ತಿಳಿಸಿದರು.
ವಿಶೇಷ ಆಹ್ವಾನಿತರಾಗಿ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ರಮಣದೀಪ್ ಚೌಧರಿ,ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕರಾದ ಸಿಂಧು ಬಿ ರೂಪೇಶ,ಗದಗ ಜಿಲ್ಲಾಧಿಕಾರಿ ಗೋವಿಂದರಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಭಾಗವಹಿಸುವುದಾಗಿ ತಿಳಿಸಿದರು. ಪತ್ರಿಕಾ ಗೋಷ್ಠಿ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಜಿ ಎನ್ ಕುರ್ತಕೋಟಿ, ಎಮ್ ಸಿ ಕಟ್ಟಿಮನಿ, ಎನ್ ಎಮ್ ಪವಾಡಿಗೌಡ್ರ, ಅಶೋಕ ಅಂಗಡಿ, ಎಸ್ ಎಸ್ ಸೋಮಣ್ಣವರ, ವಾಯ್ ಸಿ ಪಾಟೀಲ, ಬಿ ಜಿ ಗಿರಿತಿಮ್ಮಣ್ಣವರ, ವ್ಹಿ ಎಮ್ ಪಾಟೀಲ, ವ್ಹಿ ಎಸ್ ದಲಾಲಿ, ಅರ್ಜುನ ಗೊಳಸಂಗಿ, ದತ್ತಪ್ರಸನ್ನ ಪಾಟೀಲ, ಎಮ್ ಕೆ ಲಮಾಣಿ, ಹೆಚ್ ಎಸ್ ಶಿವಪ್ಪಯ್ಯನಮಠ,ವಾಯ್ ಎಸ್ ಹುನಗುಂದ ಸೇರಿದಂತೆ ಇತರರು ಭಾಗಿಯಾಗಿದ್ದರು.