ಬಿ.ಬೆಳಗಲ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ಶ್ರೀನಿವಾಸ್ ಅವಿರೋಧ ಆಯ್ಕೆ
ಬಳ್ಳಾರಿ 25: ತಾಲೂಕಿನ ಬಿ.ಬೆಳಗಲ್ಲು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ) ಚುನಾವಣೆಯಲ್ಲಿ ಶ್ರೀನಿವಾಸ್ ಹಾಗೂ ಉಪಾಧ್ಯಕ್ಷರಾಗಿ ಜಾನೇಕುಂಟೆ ಗವಿಸಿದ್ದ ಅವರನ್ನು ಅವಿರೋಧ ಆಯ್ಕೆ ಮಾಡಲಾಗಿದ್ದು.ಡಿಸೆಂಬರ್ 20 ರಂದು ಸಂಘದ ಕಛೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಯ್ಕೆ ಮಾಡಲಾಗಿದೆ ಎಂದು ರಿಟರ್ನಿಂಗ್ ಅಧಿಕಾರಿ ನಾಗರಾಜ ಅದಿಕೃತ ಆದೇಶ ಹೊರಡಿಸಿದ್ದಾರೆ.ಸಂಘದ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರುಗಳಾದ ಜಾನೇಕುಂಟಿ ಸಣ್ಣ ಬಸವರಾಜ, ಹೆಚ್.ಶಿವರಾಮರೆಡ್ಡಿ, ವಿ.ಮಲ್ಲಿಕಾರ್ಜುನಗೌಡ, ಯರಿಸ್ವಾಮಿ.ಓ., ಬಿ.ಶಿವಾರೆಡ್ಡಿ , ಹುಲಿಗೆಮ್ಮ, ಸಿದ್ದಪ್ಪ ಎ.ಕೆ, ನೀಲಾಬಾಯಿ, ಬೋಜನಾಯ್ಕ ಭೋಜನಾಯ್ಕ ಸೇರಿ ಸಭೆಯಲ್ಲಿ ಚರ್ಚಿಸಿ ಅಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಬೆಳಗಲ್ಲು ಗ್ರಾಮಪಂಚಾಯತಿ ಮಾಜಿ ಅಧ್ಯಕ್ಷ ವೈ.ಪಾಲಾಕ್ಷಿಗೌಡ, ಮಾಜಿ ಹಂಗಾಮಿ ಅಧ್ಯಕ್ಷರಾದ ಶ್ರೀ.ಜಿ.ಜಂಬುನಾಥ ಹಾಗೂ ಬೆಳಗಲ್ಲು ಗ್ರಾಮದ ಊರಿನ ಮುಖಂಡರಾದ ಪಂಪನಗೌಡ, ಕೆ.ಎಂ.ಭೋಗೇಶಸ್ವಾಮಿ, ವೈ.ಸೋಮಶೇಖರ, ಬಿ.ಯಲ್ಲಪ್ಪ, ಪಂಪಾರೆಡ್ಡಿ, ತಿಮ್ಮಪ್ಪ, ಹುಲುಗಪ್ಪ, ಹಾಗೂ ಗ್ರಾಮದ ಮುಖಂಡರೆಲ್ಲಾ ಭಾಗವಹಿಸುದ್ದರು.