ಮುದ್ದೆಬಿಹಾಲ್

ನಾಳೆಯಿಂದ ಶ್ರೀ ಬನಶಂಕರಿ ದೇವಿ ಜಾತ್ರಾಮಹೋತ್ಸವ

ನಾಳೆಯಿಂದ ಶ್ರೀ ಬನಶಂಕರಿ ದೇವಿ ಜಾತ್ರಾಮಹೋತ್ಸವ

ಮುದ್ದೇಬಿಹಾಳ, 28 : ಇದೇ ಡಿ, 30ರಿಂದ ಜನೇವರಿ 4ರವೆಗೆ ಪಟ್ಟಣದ ಶಕ್ತಿ ದೇವತೇ ಶ್ರೀ ಬನಶಂಕರಿ ದೇವಿ ಜಾತ್ರಾಮಹೋತ್ಸವ ಜರುಗಲಿದೆ. ಡಿ.30 ಮಂಗಳವಾರದಂದು ಮುಂಜಾನೆ 8 ಗಂಟೆಗೆ ಗೋಮಾತಾ ಪೂಜೆಯೊಂದಿಗೆ ಶ್ರೀ ಬನಶಂಕರಿ ದೇವಿ ಜಾತ್ರೆ ಚಾಲನೆ ನೀಡಲಿದೆ ಸಂಜೆ5 ಗಂಟೆಗೆ ಲೇಶಪ್ಪ ಪ್ಯಾಟಿಗೌಡ ಅವರ ಮನೆಯಿಂದ ಬಾಜಾ ಭಜಂತ್ರಿಯೊಂದಿಗೆ ಹುಚ್ಚಯ್ಯನ  ಕಳಶವನ್ನು ತರಲಾಗುವುದು ಸಂಜೆ 7 ಗಂಟೆಗೆ  ಹುಚ್ಚಯ್ಯನ ಉತ್ಸವ ಜರುಗಲಿದೆ. 

7.30ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಪುರ ಇವರ ಸಹಯೋಗದಲ್ಲಿ ಧಾರವಾಡದ ವೀಣಾವಾಣಿ ಸಂಗೀತ ವಿದ್ಯಾಲಯದ ಸಂಚಾಲಕಿ  ಚೈತ್ರಾ ಡಂಬಳ ಹಾಗೂ ಸಂಗಡಿಗರಿಂದ ಸುಗಮ ಸಂಗೀತ ಕಾರ್ಯಕ್ರಮ ಹಾಗೂ ವಿವಿಧ ದಾನಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ. ಡಿ,31ಬುಧವಾರ  ಮುಂಜಾನೆ ಶ್ರೀದೇವಿಗೆ ವಿವಿಧ ಬಣ್ಣಗಳಿಂದ ಹೂ ಹಾಗೂ ಬಳೆಗಳಿಂದ ಅಲಂಕಾರ ಪೂಜೆ,  10.30ಕ್ಕೆ  ಎತ್ತು ಕುದುರೆ ಜೋಡಿ ಓಟಗಳ ಸ್ಪರ್ಧೇ ಮದ್ಯಾಹ್ನ  3 ಗಂಟೆಗೆ ಜೋಡು ಎತ್ತಿನ ಗಾಡಿ ಓಟದಸ್ಪರ್ಧೇ,ಜ, 1 ಗುರುವಾರದಂದು  ಮುಂಜಾನೆ 7 ಗಂಟೆಗೆ ಶ್ರೀದೇವಿಗೆ ವಿವಿಧ ಹೂ, ಹಣ್ಣು ಹಾಗೂ ತರಕಾರಿಗಳಿಂದ  ಅಲಂಕಾರದೊಂದಿಗೆ ಶಾಕಾಂಭರಿ ಉತ್ಸವ ಜರುಗಲಿದೆ. 

ದಿ, 2 ಶುಕ್ರವಾರದಂದು  ಬೆಳಿಗ್ಗೆ 4 ಗಂಟೆಗೆ ಶ್ರೀದೇವಿಗೆ ಮಹಾರುದ್ರಾಭಿಷೇಕ ಹಾಗೂ ಬೆಳಿಗ್ಗೆ 5.30ಕ್ಕೆ ಚಂಡಿ ಹವನ ಸಂಕಲ್ಪ ಪೂಜಾ, ಹಾಗೂ ಚಂಡಿ  ಹೋಮ ಹವನ ಕಾರ್ಯಕ್ರಮ, ಮದ್ಯಾನ 2.30ಕ್ಕೆ ಅಗ್ನಿ ಸ್ಪರ್ಶ ಪುಟು ಮಾಡುವುದು, ಸಂಜೆ 5 ಗಂಟೆಗೆ ಪ್ರಮುಖ ಬೀದಿಗಳಲ್ಲಿ ಬಾಜಾಭಜಂತ್ರಿಯೊಂದಿಗೆ ಪಲ್ಲಕ್ಕಿ ಜತೆಗೆ  ಪುರವಂತರ ಸೇವೆಯೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಮರಳಿ ರಾತ್ರಿ 8.30ಕ್ಕೆ ಅಗ್ನಿ ಪ್ರವೇಶ ನಡೆಯಲಿದೆ.  

ದಿ, 3 ಶನಿವಾರ ಸಂಜೆ 6 ಗಂಟೆಗೆ ಶ್ರೀದೇವಿ ಬೃಹತ್ ರಥೋತ್ಸವ. ಬಳಿಕ ರಾತ್ರಿ 9 ಗಂಟೆಗೆ ಕಿರುತೆರೆ ಹಾಸ್ಯ ಕಲಾವಿಧರಾದ ಶ್ರೀಶೈಲ ಹೂಗಾರ ಹಾಗೂ ಗೋಪಾಲ ಹೂಗಾರ ನೇತೃತ್ವದಲ್ಲಿ ಹಾಸ್ಯ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ದಿ, 4 ಭಾನುವಾರ  ಮುಂಜಾನೆ ಹೋಕಳಿ ಹಬ್ಬ ಜರುಗಲಿದೆ  ಜಾತ್ರೇಯ ಐದು ದಿಗಳವರೆಗೆ ಭಕ್ತರಿಗೆ ನಿರಂತರ ಅನ್ನ ಪ್ರಸಾದ ನಡೆಯಲಿದೆ ಎಂದು ಜಾತ್ರಾ ಮುಖ್ಯಸ್ಥ ಚನಬಸ್ಸು ಗಡೇದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ