ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ವಿಶೇಷ ಕಾರ್ಯಾಗಾರ
Special workshop for SSLC students
ಯರಗಟ್ಟಿ 13: ‘ಪರೀಕ್ಷೆ ಬಗ್ಗೆ ಮನಸ್ಸಿನಲ್ಲಿ ಒಂದು ರೀತಿಯ ಆತಂಕವಿತ್ತು. ಮನೆಯಲ್ಲಿ ತಂದೆಹಿತಾಯಿ ಮತ್ತು ಶಾಲೆಯಲ್ಲಿ ಶಿಕ್ಷಕರು ನಿತ್ಯ ಓದು ಓದು ಎಂದು ಹೇಳುವ ಬುದ್ಧಿಮಾತು ಒತ್ತಡದ ಹೆಚ್ಚಿಸಿತ್ತು. ಎಷ್ಟೇ ಓದಿದರೂ ಆತಂಕ ಇದ್ದೇ ಇತ್ತು. ಆದರೆ, ಕಾರ್ಯಾಗಾರದಲ್ಲಿ ಭಾಗವಹಿಸಿದ ಬಳಿಕ ಆತಂಕ ಮತ್ತು ಒತ್ತಡ ತಗ್ಗಿ ಆತ್ಮವಿಶ್ವಾಸ ವೃದ್ಧಿಯಾಯಿತು. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಮೂಲಕ, ತಂದೆಹಿತಾಯಿ ಮತ್ತು ಶಿಕ್ಷಕರು ನನ್ನ ಮೇಲಿಟ್ಟಿರುವ ವಿಶ್ವಾಸ ಉಳಿಸಿಕೊಳ್ಳುವೆ.
ಸಮೀಪದ ಸತ್ತಿಗೇರಿ ಗ್ರಾಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಬಹುತೇಕ ವಿದ್ಯಾರ್ಥಿಗಳ ಮನದಾಳದ ಮಾತಿದು.
ಪರೀಕ್ಷಾ ಒತ್ತಡ ನಿರ್ವಹಣೆ, ಯೋಜಿತ ಅಧ್ಯಯನ, ಓದಿದ್ದನ್ನು ಸುಲಭವಾಗಿ ಜ್ಞಾಪಕವಿಟ್ಟುಕೊಳ್ಳುವ ತಂತ್ರಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ನೀಡಿದ ಮಾಹಿತಿಗಳನ್ನು ತದೇಕ ಚಿತ್ತದಿಂದ ಆಲಿಸುತ್ತಾ, ನೋಟ್ ಬುಕ್‌ನಲ್ಲಿ ಬರೆದುಕೊಂಡ ವಿದ್ಯಾರ್ಥಿಗಳು ತಮ್ಮೊಳಗಿದ್ದ ಅನುಮಾನಗಳನ್ನು ಪರಿಹರಿಸಿಕೊಂಡರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನೂಡಲ್ ಅಧಿಕಾರಿ ಸುಧೀರ ವಾಘೇರಿ ಅವರು ಯಾವುದೇ ಗೊಂದಲ ಅಥವಾ ಆತಂಕ ಇಟ್ಟುಕೊಳ್ಳದೇ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು. ಆಗ ಉತ್ತಮ ಅಂಕಗಳನ್ನು ಗಳಿಸುತ್ತೀರಿ. ಓದಿದೆಲ್ಲವೂ ಮತ್ತು ಪೂರ್ವ ಪರೀಕ್ಷೆಯಲ್ಲಿ ಬರೆದಿರುವುದೆಲ್ಲವೂ ಸ್ಮೃತಿಪಟಲದಲ್ಲಿ ಇರುತ್ತದೆ. ನಾವು ಖುಷಿಯಾಗಿದ್ದರೆ, ಪ್ರಶ್ನೆಗೆ ತಕ್ಕಂತೆ ಉತ್ತರಗಳು ಬರುತ್ತಾ ಹೋಗುತ್ತವೆ. ಭಯವನ್ನು ಪರೀಕ್ಷಾ ಕೇಂದ್ರಕ್ಕೆ ಒಯ್ಯಬಾರದು ಎಂದು ಧೈರ್ಯ ತುಂಬಿದರು.
ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿರುವ ಮುಖ್ಯ ಪರೀಕ್ಷೆಯಲ್ಲಿ ಇನ್ನೂ ಸುಧಾರಿಸುತ್ತೀರಿ, ಇದರಲ್ಲಿ ಅನುಮಾನವೇ ಬೇಡ. ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಿ ಎಂದು ಆತ್ಮವಿಶ್ವಾಸ ಮೂಡಿಸಿದರು.
ಅಧ್ಯಕ್ಷತೆ ವಹಿಸಿದ ಕೆಪಿಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಾಗರಾಜ ಕೆ, ಸಂಪನ್ಮೂಲ ವ್ಯಕ್ತಿ ಆಯ್. ಜಿ. ಸುಬ್ಬಾಪುರಮಠ, ಜೆ. ಎಂ. ಅನಿಗೋಳ, ಎ. ಎಂ. ಸಿಂಗಾಡೆ, ಪ್ರೌಢ ವಿಭಾಗದ ಉಪಪ್ರಾಂಶುಪಾಲ ವಿದ್ಯಾ ಕಲ್ಯಾಣಿ, ಶಿಕ್ಷಕರಾದ ವಾಯ್. ಆರ್ ಕೋಟಗಿ, ಆರ್. ಎಸ್ ಕಾಶಣ್ಣವರ, ಕೆ. ಎಂ. ಪತ್ತಾರ, ಆಯ್. ಎಫ್ ಬಾಗವಾನ, ಎಸ್. ಎಂ. ಪಾಟೀಲ, ಜಿ. ಬಿ ಪಾಟೀಲ, ವಿಧ್ಯಾರ್ಥಿಗಳ ದೀಪಾ ನಾವಿ, ಬಸವರಾಜ ಅಡಿ, ಪ್ರೀಯಾಂಕಾ ಪಾಟೀಲ, ಶ್ರಾವ್ಯಾ ಪವಾಡಿಗೌಡರ, ರಷ್ಮಿ ಹೊನಕುಪ್ಪಿ, ಪ್ರೀಯಾ ಮುನ್ಯಾಳ, ಸಮೀನಾ ಬಾಗವಾನ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 