ವಿಶೇಷ ಚೇತನರು ಸರಕಾರದ ಯೋಜನೆಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕು : ಖಾಜಾಹುಸೇನ ಕಾತರಕಿ

Special minds should take advantage of government schemes: Khajahusena Kataraki

ವಿಶೇಷ ಚೇತನರು ಸರಕಾರದ ಯೋಜನೆಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕು :  ಖಾಜಾಹುಸೇನ ಕಾತರಕಿ  

ಗದಗ14 ಃ ವಿಶೇಷಚೇತನರಲ್ಲಿಯೂ ಸಹ ಸಮಾಜ ಕಾರ್ಯ ಮನೋಭಾವನೆಗಳು ಇರುತ್ತವೆ ಅವುಗಳನ್ನು ಗೌರವಿಸ ಬೇಕಾಗಿರುವುದು ಜನಸಾಮಾನ್ಯರ  ಕರ್ತವ್ಯವಾಗಿದೆ ಅವರುಗಳ ಹಕ್ಕುಗಳಿಗೆ ನಾವುಗಳು ಮನ್ನಣೆಯನ್ನು ಕೊಡಬೇಕು. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾಕಷ್ಟು ಸವಲತ್ತುಗಳನ್ನು ನೀಡಿವೆ  ಅವುಗಳನ್ನು ತಿಳಿಸಿ ಅವರನ್ನು ಸಮಾಜ ಮುಖಿಯಾಗಿ ಕೆಲಸ ಮಾಡಲು ಪ್ರೇರೇಪಿಸುವದು ಮೊದಲ ಆಧ್ಯತೆಯಾಗಿದೆ ಎಂದು ಎಮ್‌ಆರ್‌ಡಬ್ಲೂ  ಖಾಜಾಹುಸೆನ್ ಕಾತರಕಿ ಹೇಳಿದರು.  

ತಾಲೂಕಿನ ನಾಗಾವಿ ಗ್ರಾಮದಲ್ಲಿ ನಡೆದ ವಿಶೇಷಚೇತರ ವಿಶೇಷ ಗ್ರಾಮ ಸಭೆಯಲ್ಲಿ  ಮಾತನಾಡಿ, ವಿಕಲಚೇತನರ ಯೋಜನೆಯ ರೂಪರೇಷಗಳು, ವಿಕಲಚೇತನರ ಇಲಾಖೆ ಹಾಗೂ ಇತರೆ ಇಲಾಖೆಗಳಿಂದ ದೊರಕುವ  ಸೌಲಭ್ಯಗಳ ಮಾಹಿತಿಯನ್ನು ನೀಡುತ್ತ  21 ವಿಕಲತೆಯ ಬಗ್ಗೆ ವಿವರಿಸಿ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಹಿರಿಯ ನಾಗರಿಕರಿಗೆ ಬರುವಂತ ಸೌಲಭ್ಯಗಳ ಮಾಹಿತಿಯನ್ನು ತಿಳಿಸಿದರು.   

 ಅಧ್ಯಕ್ಷತೆ ವಹಿಸಿದ್ದ  ಸುರೇಶ ಪವಾರ ಮಾತನಾಡಿ, ವಿಕಲತೆ ಎಂಬುದು ವಿಕಲಚೇತನರಿಗೆ ಶಾಪವಲ್ಲ ಅದೊಂದು ವರ ಎಂದು ನೀವೆಲ್ಲರೂ ಭಾವಿಸಬೇಕು. ಏಕೆಂದರೆ ಸಾಮಾನ್ಯ ವ್ಯಕ್ತಿಗಳ ಮಾಡದೇ ಇರುವ ಅನೇಕ ಸಾಧನೆಗಳನ್ನು ವಿಕಲಚೇತನರು ಮಾಡಿ ಸ್ವಾವಲಂಬನೆ  ಮತ್ತು ಆತ್ಮ ವಿಶ್ವಾಸದಿಮದ ಸಾಕಷ್ಟು ಸಧನೆ ಮಾಡಿದ್ದಾರೆ.  2016 ಕಾಯ್ದೆ  ನಂತರ ಅವರು ಸಹ ಸಾಮಾನ್ಯರಂತೆ ಜೀವನ ಪ್ರಾರಂಭಿಸಲು ಸಾಧ್ಯವಾಗಿದೆ. ವಿಕಲ ಚೇತನರನೂ ಸಹ ಸಮಾಜದ ಮುಖ್ಯವಾಹಿನಿಗೆ ಕರೆ ತರಲು ಸರ್ಕಾರದ ಪ್ರತಿಯೊಂದು ಯೋಜನೆಯಲ್ಲಿ ಮೀಸಲಾತಿ, ಸಾಧನ ಸಲಕರಣೆ ಶೇ. 5ಅ ಅನುಧಾನದಲ್ಲಿ  ಹಲವು ಯೋಜನೆಗಳನ್ನು ವಿತರಿಸಲು ಅವಕಾಶವಿರುವದರಿಂದ  ನಮ್ಮ ಗ್ರಾಮ ಪಂಚಾಯತದ ಹಿರಿಯ ನಾಗರಿಕರು ವಿಶೇಷ ಚೇತನರು ಸರ್ಕಾರದ. ಯೋಜನೆಗಳನ್ನು ಸದುಪಯೋಗ ಪಡಿಸಿಕೂಳ್ಳಬೇಕು ಎಂದರು.ಕಾರ್ಯಕ್ರಮವನ್ನು ವಿಆರ್‌ಡಬ್ಲೂ ಶಿವನಗೌಡ ಪಾಟೀಲ ನಿರೂಪಿಸಿದರು.  ಈ    ಗ್ರಾಮ ಸಭೆಯಲ್ಲಿ ಗ್ರಾ.ಪಂ. ಸದ್ಯಸರಾದ ಸುಮಾ ತಳವಾರ, ಪಾರವ್ವ ಗೊರವರ, ಸರಸ್ವತಿ ಮರಬರಡ್ಡಿ, ಮೀರಾಬಾಯಿ ಲಮಾಣಿ, ಗೌರಿ ತೋಟದ, ಯಮನಪ್ಪ ಬಾಗಲಕೋಟ, ಪಿಡಿಓ ಬಿ.ಎಚ್‌.ಬಚ್ಚೇನಹಳ್ಳಿ, ಕಾರ್ಯದರ್ಶಿ ಗಣೇಶ ಪೂಜಾರ ಸೇರಿದಂತೆ  ನಾಗಾವಿಯ ಹಿರಿಯ ನಾಗರಿಕರು ಮತ್ತು ವಿಶೇಷಚೇತನರ, ಸಾರ್ವಜನರು  ಭಾಗವಹಿಸಿದ್ದರು.