ನಾಳೆ ವಿಶೇಷ ಲ್ಯಾಬ್ ಗಳ ಉದ್ಘಾಟನೆ!
ನಾಳೆ ವಿಶೇಷ ಲ್ಯಾಬ್ ಗಳ ಉದ್ಘಾಟನೆ!
ಮಹಾಲಿಂಗಪುರ: ಪಟ್ಟಣದ ಖ್ಯಾತ ವೆಂಕಟೇಶ ಆಸ್ಪತ್ರೆಯಲ್ಲಿ ಕಾರ್ಡಿಯೋ ಥೋರಾಸಿಕ್ ಮತ್ತು ವ್ಯಾಸ್ಕ್ಯುಲರ್ ಸರ್ಜರಿ ಆಪರೇಷನ್ ಥಿಯಟರ್ ಮತ್ತು ಕಾರ್ಡಿಯಾಕ ಕ್ಯಾಥ್ ಲ್ಯಾಬ್ (ನಾರಾಯಣ ಹೆಲ್ತ್ ಸಹಯೋಗದೊಂದಿಗೆ) ಹಾಗೂ ಡಾ. ವಿ.ಪಿ ಕನಕರಡ್ಡಿ ಮೆಮೋರಿಯಲ್ ಕಾಲೇಜ್ ಆಫ್ ನಸಿಂರ್ಗ್ ಉದ್ಘಾಟನಾ ಸಮಾರಂಭ ಆ.31 ರವಿವಾರದಂದು ನಡೆಯಲಿದೆ.
ದಿವ್ಯ ಸಾನಿಧ್ಯ ಶ್ರೀ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ.ಅಧ್ಯಕ್ಷತೆ ಆರ್ ಬಿ ತಿಮ್ಮಾಪುರ,ಉದ್ಘಾಟಕರಾಗಿ ಎಚ್ ಕೆ ಪಾಟೀಲ,ಎಂ ಬಿ ಪಾಟೀಲ, ಪಿ ಸಿ ಗದ್ದಿಗೌಡರ,ಮುಖ್ಯ ಅತಿಥಿಗಳಾಗಿ ಜೆ ಬಿ ಪಾಟೀಲ, ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಕ ಸವದಿ, ನಾರಾಯಣ ನಡಮನಿ,ಗೌರವಾನ್ವಿತ ಅತಿಥಿಗಳಾಗಿ ಡಾ.ಸುರೇಶ್ ದುಗ್ಗಾಣಿ, ಡಾ.ಆರ್ ಟಿ ಪಾಟೀಲ, ಡಾ.ರವಿವರ್ಮ ಜಿ ಪಾಟೀಲ ಹಾಗೂ ಆಸ್ಪತ್ರೆಯ ವಿಶೇಷ ತಜ್ಞರು ಭಾಗವಹಿಸಲಿದ್ದಾರೆ ಎಂದು ಖ್ಯಾತ ವೈದ್ಯರಾದ ಡಾ.ಅಜಿತ್ ವಿ ಕನಕರಡ್ಡಿ ಹಾಗೂ ಶರ್ವಾಣಿ ಅ ಕನಕರಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 08350- 271236, 6363762926, 9448132236 ಸಂಪರ್ಕಿಸಿರಿ.