ವಕೀಲರ ಸಂಘದ ಉಪಾಧ್ಯಕ್ಷ ಮಾಲಿಪಾಟೀಲ್ಗೆ ವಿಶೇಷ ಸನ್ಮಾನ
Special felicitation for Advocates' Association Vice-President Malipatil
ಕೊಪ್ಪಳ, ಸೆ.16: ಜಿಲ್ಲಾ ವಕೀಲರ ಸಂಘದ ನೂತನ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ನ್ಯಾಯವಾದಿ ಎ.ಎಸ್. ಮಾಲಿಪಾಟೀಲ್ ಅವರಿಗೆ ‘ಕರುನಾಡ ಚೇತನ’ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಕಾರಣಾಂತರಗಳಿಂದ ಅನುಪಸ್ಥಿತರಾಗಿದ್ದ ಹಿನ್ನೆಲೆಯಲ್ಲಿ, ಅವರ ಕಚೇರಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್ ಆನಂದ ಹಳ್ಳಿಯವರ ನೇತೃತ್ವದಲ್ಲಿ ಮಾಲಿಪಾಟೀಲ್ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ‘ವಿಶಾಲ ಪ್ರಕಾಶನ’ದ ಪ್ರಕಾಶಕ ಹಾಗೂ ಹಿರಿಯ ಪತ್ರಕರ್ತ ಜಿ.ಎಸ್. ಗೋನಾಳ, ಹಿರಿಯ ಪತ್ರಕರ್ತ ಎಂ. ಸಾಧಿಕ್ ಅಲಿ, ಕೆಡಬ್ಲ್ಯುಜೆ ಜಿಲ್ಲಾ ಖಜಾಂಚಿ ಫಕೀರ್ಪ ಗೋಠೂರ, ಹಿರಿಯ ನ್ಯಾಯವಾದಿ ಬಿ. ಶರಣಪ್ಪ, ಯುವ ನ್ಯಾಯವಾದಿಗಳಾದ ಅಂಜುಮನ್ ಎಸ್.ಎಂ., ಸೋಮರಾಜ್ ರೆಡ್ಡಿ ಗೋನಾಳ, ನಿಂಗಪ್ಪ ಮಜ್ಜಗಿ, ಕಚೇರಿ ಸಹಾಯಕ ಮಂಜುನಾಥ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 