ವಿಶೇಷ ಮತದಾರರ ಪರಿಷ್ಕರಣೆ ಕಾರ್ಯ ಯಶಸ್ವಿ: ಶಿಕ್ಷಕ ಬಸವಲಿಂಗ ಕುಂಬಾರರಿಗೆ ಸನ್ಮಾನ

ವಿಶೇಷ ಮತದಾರರ ಪರಿಷ್ಕರಣೆ ಕಾರ್ಯ ಯಶಸ್ವಿ: ಶಿಕ್ಷಕ ಬಸವಲಿಂಗ ಕುಂಬಾರರಿಗೆ ಸನ್ಮಾನ  Special Voter Revision Drive Successful: Teacher Basavalinga Kumbara Felicitated

ಕೊಲ್ಹಾರ, ಜು.14: ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಲ್ಹಾರ ತಾಲ್ಲೂಕಿನ ಬಾಗಾನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಬಸವಲಿಂಗ ಕುಂಬಾರ ಅವರು ವಿಶೇಷ ಮತದಾರರ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.  ತಾಲ್ಲೂಕಿನ ಮತಗಟ್ಟೆ ಸಂಖ್ಯೆ 190ರಲ್ಲಿ ಒಟ್ಟು 489 ಮತದಾರರ ವಿವರಗಳ ಸಮಗ್ರ ಪರೀಶೀಲನೆ ಕಾರ್ಯವನ್ನು ಕೇವಲ 10 ದಿನಗಳಲ್ಲಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಎಸ್‌.ಎಸ್‌. ಮ್ಯಾಗೇರಿ ಅವರು ಬಸವಲಿಂಗ ಕುಂಬಾರ ಅವರನ್ನು ತಮ್ಮ ಕಚೇರಿಗೆ ಆಹ್ವಾನಿಸಿ ಅಭಿನಂದಿಸಿದರು.  

ಶಿಕ್ಷಕರ ಕರ್ತವ್ಯನಿಷ್ಠೆ ಹಾಗೂ ಕಾರ್ಯಕ್ಷಮತೆಯನ್ನು ಜಿಲ್ಲಾಡಳಿತ ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಸಂದರ್ಭದಲ್ಲಿ ತಹಶೀಲ್ದಾರ್ ಎಸ್‌.ಎಸ್‌. ಮ್ಯಾಗೇರಿ ಅವರು ಬಸವಲಿಂಗ ಕುಂಬಾರ ಅವರನ್ನು ಸನ್ಮಾನಿಸಿ ವಿಶೇಷ ಅಭಿನಂದನೆ ಸಲ್ಲಿಸಿದರು.  ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ಕೆ.ಎಂ. ನಧಾಪ್, ಪಿ.ಎಸ್‌. ಹುಡೇದ, ಭಾಗ್ಯಶ್ರೀ ಪಾಟೀಲ್, ಶ್ರೀಶೈಲ ವಾಲೀಕಾರ, ಮಂಜುನಾಥ ಕಲ್ಲೂರ, ಬಿ.ಎಸ್‌. ಮಮದಾಪೂರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.