ಹಿರಿಯ ವಕೀಲ ಅಜಿತ್ ನಾಯ್ಕ ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ
Senior lawyer Ajit Naik's murder convict gets life sentence
ಕಾರವಾರ 13 : ಖ್ಯಾತ ವಕೀಲ, ದಾಂಡೇಲಿ ತಾಲೂಕು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ದಾಂಡೇಲಿಯ ಅಜಿತ ನಾಯ್ಕ ಅವರ ಕೊಲೆ ಅಪರಾಧಿ ಪಾಂಡುರಂಗ ಮಾರುತಿ ಕಾಂಬಳೆ ಅಲಿಯಾಸ್ ದೀಪ್ಯಾಗೆ ಶಿರಸಿಯ 1 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಅವರು ಜೀವಾವಧಿ ಶಿಕ್ಷೆ ವಿಧಿಸಿದರು ಹಾಗೂ ವ 25 ಸಾವಿರ ರೂಪಾಯಿ ದಂಡ ಹಾಕಿದರು .ಶಿರಸಿಯ 1 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಮಂಗಳವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿತು. ವಕೀಲ ಅಜಿತ್ ನಾಯ್ಕರನ್ನು ಕತ್ತಿಯಿಂದ ಕೊಚ್ಚಿ ಬರ್ಭರವಾಗಿ 2018 ಜುಲೈ 27 ರಂದು ಕೊಲೆ ಮಾಡಿದ್ದು ಸಾಬೀತಾದ ಹಿನ್ನಲೆಯಲ್ಲಿ ಅಪರಾಧಿ ಪಾಂಡುರಂಗ ಕಾಂಬಳೆಗೆ ಜೀವಾವಧಿ ಶಿಕ್ಷೆ ವಿಧಿಸಿತು.
ಹಾಗೂ 25 ಸಾವಿರ ರೂಪಾಯಿ ದಂಡ, 50 ಸಾವಿರ ರೂಪಾಯಿ ಮೃತನ ಕುಟುಂಬಕ್ಕೆ ಪರಿಹಾರ ಮತ್ತು ಹೆಚ್ಚಿನ ಪರಿಹಾರವನ್ನುಜಿಲ್ಲಾ ಕಾನೂನು ಸೇವಾ ಸಮಿತಿಯಿಂದ ಪಡೆಯಬಹುದು ಎಂದು ಮಂಗಳವಾರ ತೀಪು ಪ್ರಕಟಿಸಿದರು. ವಕೀಲ ಅಜಿತ್ ನಾಯ್ಕ ಅವರನ್ನು ದಾಂಡೇಲಿ ಜೆ.ಎನ್.ರಸ್ತೆಯ ಅವರ ಕಚೇರಿ ಎದುರು ಬರ್ಬರ ಹತ್ಯೆ ಮಾಡಲಾಗಿತ್ತು. ಕೊಲೆಗಾರ ಪಾಂಡುರಂಗ ಕಾಂಬಳೆ ಆ ದಿನ ನೀಲಿ ಬಣ್ಣದ ಜರ್ಕಿನ್ ಧರಿಸಿ ಅದರೊಳಗೆ ಕತ್ತಿ ಅಡಗಿಸಿಟ್ಟುಕೊಂಡಿದ್ದ .
ಅಜಿತ ನಾಯ್ಕ ಅವರು ಕಚೇರಿಯಿಂದ ಹೊರಬರುವದನ್ನು ಕಾಯುತ್ತಿದ್ದರು. ರಮೇಶ ನಾಯ್ಕ ಮತ್ತು ಹನುಮಂತ ಕುಂಬಾರ, ವಕೀಲ ಅಜಿತ್ ನಾಯ್ಕ ಜೊತೆ ಕಚೇರಿಯಿಂದ ಇಳಿದು ಬಂದು ,ಕಾರಿನ ಬಳಿ ಬಂದಾಗ ಅವರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿ, ನಂತರ ಸಂಡೆ ಮಾರುಕಟ್ಟೆ ಒಳಗಿನಿಂದ ಓಡಿ ಹೋಗಿ ,ಕತ್ತಿಯನ್ನು ಜರ್ಕಿನ್ ನಲ್ಲಿ ಸುತ್ತಿ ಹಾಳಾಗಿ ನಿಂತಿದ್ದ ಕಾರಿನ ಅಡಿ ಅಡಗಿಸಿಟ್ಟಿದ್ದರು . ದಾಂಡೇಲಿ ಮೀನು ಮಾರುಕಟ್ಟೆ ಬಳಿಯಿದ್ದ ಬೈಕಿನಲ್ಲಿ ಎರಡನೇ ಆರೋಪಿಯ ಮನೆಗೆ ಹೋಗಿ, ಹತ್ಯೆಯ ಸಂದರ್ಭದಲ್ಲಿ ಧರಿಸಿದ್ದ ಉಡುಪುಗಳನ್ನು ಬಿಚ್ಚಿಟ್ಟು ಅಲ್ಲಿಂದ ಬೇರೆ ಉಡುಪು ಧರಿಸಿ ಬೈಕಿನಲ್ಲಿ ಪಾಂಡುರಂಗ ಪರಾರಿಯಾಗಿದ್ದ.
ವಕೀಲ ಅಜಿತ್ ನಾಯ್ಕ ಕೊಲೆಗೆ ಕಾರಣ :ದಾಂಡೇಲಿ ಮಾವಂಳಗಿಯಲ್ಲಿರುವ ಜಮೀನೊಂದರ ವಿವಾದಕ್ಕೆ ಸಂಬಂಧಿಸಿ ಕಕ್ಷಿದಾರ ರಾಮಕುಮಾರ ಮಾಳಗೆ ಪರವಾಗಿ ವಕೀಲ ಅಜಿತ್ ನಾಯ್ಕ ವಕಾಲತ್ತು ವಹಿಸಿದ್ದು, ಪಾಂಡುರಂಗ ಕಾಂಬಳೆ ಹಾಗೂ ಭೂಮಾಫಿಯಾ ಸಂಗಡಿಗರು ಸಹಿಸಿರಲಿಲ್ಲ. ಈ ಜಮೀನು ಅಕ್ರಮವಾಗಿ ವಶಪಡಿಸಿಕೊಳ್ಳಲೆತ್ನಿಸಿ , ಎರಡು ಬಾರಿ ಧಾರವಾಡ ಜೈಲಿಗೆ ಹೋಗಿದ್ದರು. ಜೈಲಿನಲ್ಲೇ ಕೊಲೆಗೆ , ಅಲ್ಲಿದ್ದ ಅನ್ಯ ಪ್ರಕರಣದ ಕೊಲೆ ಅಪರಾಧಿಯೊಂದಿಗೆ ಮಾತುಕತೆ ನಡೆದ ಬಗ್ಗೆ, ಬೇರೊಂದು ಪ್ರಕರಣದ ಕೊಲೆ ಆರೋಪಿ ಸಂದೀಪ ಜಾನ್ ಅಜಿತ ನಾಯ್ಕರೊಟ್ಟಿಗೆ ಮೊಬೈಲ್ ಮೂಲಕ ನಡೆಸಿದ ಸಂಭಾಷಣೆಯನ್ನು ತನಿಖಾಧಿಕಾರಿ ಸಾಕ್ಷ್ಯ ಕ್ಕಾಗಿ ಸಂಗ್ರಹಿಸಿದ್ದರು. ಧಾರವಾಡದ ಜೈಲಿನಲ್ಲಿದ್ದ ಕೊಲೆ ಆರೋಪಿಯನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಿದ್ದರು.
ತನಿಖಾಧಿಕಾರಿ ಸಿಪಿಐ ಅನಿಸ್ ಮುಜಾವರ, ಪಿ.ಸಿ.ಮಂಜುನಾಥ ಶೆಟ್ಟಿ ಬಳ್ಳಾರಿ ಜೈಲಿಗೆನ್ಯಾಯಾಲಯದ ಅನುಮತಿಯೊಂದಿಗೆ ಹೋಗಿ ಕೊಲೆ ಅಪರಾಧಿಯ ಧ್ವನಿ ಸ್ಯಾಂಪಲ್ ಪಡೆದು, ಅಜಿತ್ ನಾಯ್ಕ ಅವರ ಧ್ವನಿಯೊಟ್ಟಿಗೆ ಮ್ಯಾಚಿಂಗ್ ಮಾಡಲು ಎಫ್.ಎಸ್.ಎಲ್. ಗೆ ಕಳಿಸಿದ್ದರು. ಎಫ್.ಎಸ್.ಎಲ್ ವರದಿಯಲ್ಲಿ ಧ್ವನಿ ಹೊಂದಾಣಿಕೆಯಾಗಿದೆ. ಈ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪಾಂಡುರಂಗ ಕಾಂಬಳೆಗೆ ಶಿಕ್ಷೆ ಕೊಡಿಸುವಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ ಮಳಗೀಕರ ಸಮರ್ಥ ವಾದ ಸಾಕ್ಷ್ಯಾಧಾರಗಳ ಸಮೇತ ವಾದ ಮಂಡಿಸಿದ್ದರು. ಇನ್ನುಳಿದ ಆರೋಪಿಗಳ ಕುರಿತು ತೀರ್ಿನ ಬಗ್ಗೆ, ತೀಪು ಪ್ರತಿ ಸಿಕ್ಕ ನಂತರ ಪರೀಶೀಲಿಸಿ ,ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಮರು ಪರೀಶೀಲನೆ ಮಾಡಲು ಸರ್ಕಾರಕ್ಕೆ ಮನವಿ ಮಾಡಲಾಗುವಯದೆಂದು ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಮಳಗೀಕರ್ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 