ಸ್ವಯಂ ಉದ್ಯೋಗ, ಪ್ರೇರಣಾ ಶಿಬಿರ ಕಾರ್ಯಕ್ರಮ

ಧಾರವಾಡ 13: ಮನುಷ್ಯನ  ಬದುಕಿಗೆ ಸ್ವಯಂ ಉದ್ಯೋಗವಾಗುದ್ದು, ಸನಾವಶ್ಯಕವಾಗಿ ಜೀವನವನ್ನು ಕಾಲಹರಣ ಮಾಡದೇ ತಮಗಿಷ್ಟವಾದ   ಸ್ವಯಂ ಉದ್ಯೋಗಗಳಲ್ಲಿ ತೋಡಗಿಸಿಕೋಂಡು ಆಥರ್ಿಕವಾಗಿ ಸಬಲರಾಗಿ ಬಿಡುಗಡೆಯ ಅಧೀಕ್ಷಕರಾದ ಡಾ.ಅನಿತಾ.ಆರ್  ರವರು ಕರೆ  ನೀಡಿದರು.

    ಕೇಂದ್ರ ಕಾರಾಗೃಹ ಧಾರವಾಡ,ವೇದಾ ಸಂಸ್ಥೆ   ಧಾರಾವಾಡ   ಹಾಗೂ ಜವಳಿ ಇಲಾಖೆ ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಫೆ. 12, ರಂದು ಮಂಗಳವಾರದಂದು ಸಾಯಂಕಲ  4  ಗಂಟೆಗೆ  ಕಾರಗೃಹದ ಗಾಂಧಿ ಭವನದಲ್ಲಿ "ಸ್ವಯಂ ಉದ್ಯೋಗ  ಮತ್ತು  ಪ್ರೇರಣಾ ಶಿಬಿರ"  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.      ಮುಂದಉವರೆದು  ಮಾತನಾಡುತ್ತಾ  ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಜನರ ಆಸಕ್ತಿಗೆ ಅನುಗುಣವಾಗಿ ಉತ್ಪನ್ನಗಳ  ಅವಶ್ಯಕತೆ ಇದ್ದು ಅಂತಹ ಉದ್ಯೋಗಳಲ್ಲಿ ಸಂಸ್ಥೆ ಬಂದಿಗಳನ್ನು ತೋಡಗಿಸಿ ಅವರು ಆಥರ್ಿಕವಾಗಿ ಸಬಲರನ್ನಾಗಿ ಮಾಡಲ್ಲು ಇಂತಹ ಸ್ವಯಂ ಉದ್ಯೋಗ ತರಬೇತಿಗಳು ಅವಶ್ಯಕ ಎಂದು ತಿಳಿಸಿದರು.

ಕಾರ್ಯಕ್ರಮದ ಉದ್ಟಾಟನೆಯನ್ನು ಕಿಟಲ್ ಕಾಲೇಜ್ ಧಾರವಾಡ ಪ್ರಾಧ್ಯಾಪಕರಾದ ಡಾ.ಎಂ.ವೈ ಸಾವಂತ್ ನೆರವೇರಿಸಿದರು ಹಾಗೂ ತಮ್ಮ ಉದ್ಘಾಟನಾಪರ ಮಾತುಗಳನ್ನಾಡುತ್ತಾ ಯಾವುದೊ ತಪ್ಪಿನಿಂದಾಗಿ ಸೆರೆವಾಸ ಅನುಭವಿಸುತ್ತಿರುವ ಬಂದಿಗಳು ಆತ್ಮಸ್ಥೈರ್ಯ ಕಳೆದುಕೋಳ್ಳದೆ ಇದನ್ನೆ ಸವಾಲಾಗಿ ಸ್ವಿಕರಿಸಿ ಇಲ್ಲಿಂದ ಹೊಸದೋಂದು ಜೀವನ ಕಂಡುಕೊಳ್ಳಲು ಕರೆ ನೀಡಿದರು.

  ವೇದಾ ಸಂಸ್ಥೇಯ ಮುಖಾಂತರ ಕೈಗೊಳ್ಳುವ ಎಲ್ಲಾ ಸ್ವಯಂ ಉದ್ಯೋಗ ತರಬೆತಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಆಥರ್ಿಕ ಸಬಲರಾಗಲು ಮಾರ್ಗದರ್ಶನ ನೀಡಿದರು. ಇನ್ನೊರ್ವ ಮುಖ್ಯ ಅತಿಥಿ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿದರ್ೇಶಕರಾದ ವಿ.ಎಸ್ ಡವಳೆಯವರು ಮಾತನಾಡುತ್ತಾ ಸಂಸ್ಥೆಯ ಬಂದಿಗಳಲ್ಲಿ ಆತ್ಮಸ್ತೈರ್ಯ ತುಂಬಿ ಅವರನ್ನು ಸ್ವಾವಲಂಬಿದಳನ್ನಾಗಿಸಲು ಜವಳಿ ಇಲಾಖೆಯ ಮುಖಾಂತರ ಹಲವಾರು ಕಾರ್ಯಕ್ರಮವನ್ನು ಅನುಷ್ಟಾನಗೊಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು. ಶ್ರೀಮತಿ ರತಿ ಶ್ರೀನಿವಾಸನ್ ಮಾತನಾಡುತ್ತಾ ಸಂಸ್ಥೆಯ ಬಂದಿಗಳಲ್ಲಿ ಅನೇಕ ಕೌಶಲ್ಯಗಳು ಅಡಕವಾಗಿದ್ದು ಅವರ ಆಸಕ್ತಿಗಳಿಗೆ ಅನುಗುಣವಾಗಿ ವೇದಾ ಸಂಸ್ಥೆಯ ಮುಖಾಂತರ ಸ್ವಯಂ ಉದ್ಯೋಗ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದ್ದು ಎಲ್ಲಾ ಬಂದಿಗಳು ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿ ಕೊಳ್ಳಲು ಕರೆ ನಿಡಿದರು.

  ಪ್ರಾರ್ಥನೆಯನ್ನು ಯಶೋಧಾ ಯರಿಕೊಪ್ಪ ಹೇಳಿದರು. ಸ್ವಾಗತ ಹಾಗೂ ನಿರೂಪಣೆಯನ್ನು ಸಂಸ್ಥೆಯ ಶಿಕ್ಷಕರಾದ ಪಿ.ಬಿ.ಕುರಬೆಟ್ ನಿರ್ವಹಿಸಿದರು