ರೋಪ್ ಜಂಪಿಂಗ್ (ಶಿಪ್ಪಿಂಗ್) ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ
Selected for the state level in rope jumping (shipping)
ಮಹಾಲಿಂಗಪುರ 26: ಸಮೀಪದ ಮದಬಾವಿ ಗ್ರಾಮದ ಶಾಂತಿನಿಕೇತನ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ರೋಪ್ ಜಂಪಿಂಗ್ (ಶಿಪ್ಪಿಂಗ್) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಗಲಕೋಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 14 ವಯೋಮಿತಿಯ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಬಾಲಕರ ವಿಭಾಗದ ಫ್ರೀ ಸ್ಟಾಯಿಲ್‌ನಲ್ಲಿ ಆದಿತ್ಯ ಭಜಂತ್ರಿ ಪ್ರಥಮ, ಸ್ಪೀಡ್ ರೋಪ್‌ನಲ್ಲಿ ಮಾನಿಂಗ ಉಪ್ಪಾರಟ್ಟಿ ಪ್ರಥಮ, ಫರಂಟ್ ಟು ಫ್ರಂಟ್‌ನಲ್ಲಿ ಕೈಲಾಸ್ ಕುರಿ, ಆಕಾಶ ಸಂಗಾನಟ್ಟಿ ಪ್ರಥಮ, ಥರೀ ಲೆಗ್ ರೋಪ್‌ನಲ್ಲಿ ಸಮರ್ಥ ತಿಮ್ಮಾಪೂರ, ಮಾನಿಂಗ ಉಪ್ಪಾರಟ್ಟಿ, ಸಮರ್ಥ ಬಿರಾಣಿ, ಆದಿತ್ಯಾ ಭಜಂತ್ರಿ ಪ್ರಥಮ ಸ್ಥಾನ ಪಡೆದಿದ್ದಾರೆ. ಬಾಲಕಿಯರ ಬಿಭಾಗದ ಫ್ರಂಟ್ ಟು ಫ್ರಂಟ್‌ನಲ್ಲಿ ಪ್ರತೀಕ್ಷಾ ಡುಮ್ಮನ್ನವರ, ಅಮೃತಾ ಮುಕುಂದ ದ್ವೀತೀಯ, ಒನ್ ಲೆಗ್ ಸ್ವಿಚ್‌ನಲ್ಲಿ ಚಂದ್ರವ್ವ ಹಲಗಿಗೌಡರ ದ್ವಿತೀಯ, ಲಕ್ಷ್ಮೀ ದಾಸರ, ಸುಚಿತ್ರಾ ಇಟ್ನಾಳ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 