ಅಖಂಡ ಭಾರತಕ್ಕಾಗಿ ಶ್ರಮಿಸಿದ ಅಪ್ರತಿಮ ದೇಶಭಕ್ತ-ಸರ್ದಾರ ವಲ್ಲಭಭಾಯಿ ಪಟೇಲ್...

ಸರ್ದಾರ್  ಪಟೇಲರು "ಪ್ರತಿಯೊಬ್ಬ ನಾಗರೀಕ ಅಥವಾ ಭಾರತೀಯತನ್ನ ರಾಷ್ಟ್ರದ ಐಕ್ಯತೆ, ಸಮಗ್ರತೆ, ಸುಭದ್ರತೆ ಮತ್ತು ಸುರಕ್ಷತೆಗಾಗಿ ಪ್ರಯತ್ನಿಸಬೇಕು ಮತ್ತುಚಿಂತಿಸಬೇಕು. ಆ ನಿಟ್ಟಿನಲ್ಲಿರಾಷ್ಟ್ರದಲ್ಲಿನ ಸರ್ವಜನಾಂಗದ ಜನರು ಶಾಂತಿಯಿಂದ ಬದುಕಿ, ನಾವೆಲ್ಲರೂಒಂದೇ ಎಂಬ ಐಕ್ಯತೆಯು ಒಡಮೂಡಬೇಕು. ಅಂದಾಗ ಮಾತ್ರ ನಾವು ಭಾರತೀಯರಾಗಿದ್ದಕ್ಕೂ ಸಾರ್ಥಕ" ಎಂದು ಹೇಳಿದ್ದಾರೆ.ಅಪ್ರತಿಮ ದೇಶಭಕ್ತಮ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಉಕ್ಕಿನ ಮನುಷ್ಯಎಂದೇ ಪ್ರಸಿದ್ಧಿ ಪಡೆದಿದ್ದ ವಲ್ಲಭಭಾಯಿ ಪಟೇಲರು ಅಕ್ಟೋಬರ 31, 1875 ರಲ್ಲಿಗುಜರಾತ ರಾಜ್ಯದ ಖೇಡ್ಜಿಲ್ಲೆಯಕರ ಮಸಾಡ್ ಎಂಬ ಪುಟ್ಟ ಹಳ್ಳಿಯಲ್ಲಿ ಲೇವಾ ಪಟೇಲ್ ಪಾಟೀದಾರ ಸಮುದಾಯಕ್ಕೆ ಸೇರಿದ ಸುಸಂಸ್ಕೃತ ಕುಟುಂಬದಲ್ಲಿ ಝವೇರಭಾಯಿ ಮತ್ತು ಲಾಡಬಾ ದಂಪತಿಗಳಿಗೆ ನಾಲ್ಕನೇಯ ಸುಪುತ್ರನಾಗಿ ಜನಿಸಿದರು. ಅವರು ಇತರರಂತೆ ಒಬ್ಬ ಸಾಮಾನ್ಯ ವಿದ್ಯಾರ್ಥಿಯಾಗಿದ್ದು, ತಮ್ಮ 22 ನೇಯ ವಯಸ್ಸಿನಲ್ಲಿ ತಮ್ಮ ಮೆಟ್ರಿಕ್ ಶಿಕ್ಷಣವನ್ನು ಪೂರೈಸಿದರು. ನಂತರ ಕಾನೂನು ವಿಷಯದ ಮೇಲೆ ಪದಬಿ ಪಡೆಯಬೇಕೆಂಬ ಅಪಾರವಾದ ಹಂಬಲ ಹೊಂದಿದ್ದಅವರು ಮುಂದೆದೇಶದಜನಪ್ರೀಯ ಬ್ಯಾರಿಸ್ಟರ್ಆದರು. ಅವರು 35 ನೇಯ ವರ್ಷದವರಾಗಿದ್ದಾಗ ತಮ್ಮ ಪ್ರೀತಿಯ ಮಡದಿ ಜವೇರಾ ನಿಧನರಾದರು. ತಮ್ಮ ಮಡದಿಯ ನಿಧನದ ಟೆಲಿಗ್ರಾಮ ವಾರ್ತೆ  ಬಂದಾಗ ಕೋರ್ಟ್ನ ಲ್ಲಿ ವಾದ ಮಂಡಿಸುತ್ತಿದ್ದಅವರು ಟೆಲಿಗ್ರಾಮನ್ನು ಕಿಸೆಯಲ್ಲಿಟ್ಟುಕೊಂಡು ವಾದ ಮಂಡಿಸುವಲ್ಲಿಕಾರ್ಯಮಗ್ನರಾಗಿರುವದು ಅವರ ಕಾರ್ಯನಿಷ್ಠೆಗೆ ಹಿಡಿದ ಕೈಗನ್ನಡಿಯಾಗಿದೆ. 

1918 ರಲ್ಲಿತಮ್ಮ ವಕೀಲಿ ವೃತ್ತಿ, ಗೌರವ, ಮನೆ-ಸಂಪತ್ತುಎಲ್ಲವನ್ನು ತ್ಯಜಿಸಿದ ಪಟೇಲರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರೀಯವಾಗಿತಮ್ಮನ್ನು ತೊಡಗಿಸಿಕೊಂಡರು. ಆರಂಭದಲ್ಲಿತಮ್ಮ ಸ್ನೇಹಿತರೊಂದಿಗೆಕೂಡಿಗಾಂಧೀಜಿಯವರರೀತಿ-ನೀತಿಗಳನ್ನು ಹಾಗೂ ರಾಜಕೀಯ ನೀತಿಗಳನ್ನು ಲೇವಡಿ ಮಾಡುತ್ತಿದ್ದರು. ನಂತರಗಾಂಧೀಜಿಯವರ ಸತ್ಯ, ಶಾಂತಿ, ಅಹಿಂಸೆ, ಸತ್ಯಾಗ್ರಹ, ತ್ಯಾಗಗಳೆಂಬ ಸ್ವಾತಂತ್ರ್ಯ ಹೋರಾಟದ ಮೂಲ ಮಂತ್ರಗಳಿಂದ ಪಟೇಲರು ಪ್ರಭಾವಿತರಾಗಿತಮ್ಮ ಮನಪರಿವರ್ತನೆ ಮಾಡಿಕೊಂಡರು. ಅದೇರೀತಿಚಂಪಾರಣ್ಯ ಸತ್ಯಾಗ್ರಹದಲ್ಲಿ ಗಾಂಧೀಜಿಯವರುಒಬ್ಬ ಸಮರ್ಥ ನಾಯಕರೆಂದುಒಪ್ಪಿಕೊಂಡು ಅವರಲ್ಲಿರುವ ರಾಷ್ಟ್ರೀಯತೆ, ಶ್ರದ್ಧೆ ಮತ್ತು ಸರಳ ಜೀವನವನ್ನುಕಂಡುತಾವೂ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರೀಯರಾದರು. 1919 ರಿಂದ 1928 ರವರೆಗೆರಾಷ್ಟ್ರದಲ್ಲಿರುವ ಮದ್ಯಪಾನ, ಅಸ್ಪೃಶ್ಯತೆ, ಬಡತನದಂತಹ ಸಾಮಾಜಿಕ ಸಮಸ್ಯೆಗಳ ನಿರ್ಮೂಲನೆಗಾಗಿ ಹೋರಾಡಿದರು. 

ತಮ್ಮ ವಕೀಲಿ ವೃತ್ತಿಯಿಂದ ಪ್ರಸಿದ್ಧಿ ಪಡೆದ ಪಟೇಲ್ರುಗುಜರಾತ್ನಗ್ರಾಮಾಂತರ ಭಾಗದಲ್ಲಿಖೇಡಾ, ಬೊರಸಾದ್ ಮತ್ತು ಬರ್ಡೋಲಿ ಜಿಲ್ಲೆಗಳಲ್ಲಿ ರೈತರ ಮೇಲೆ ಬ್ರಿಟಿಷರಿಂದಆಗುತ್ತಿರುವ ಶೋಷಣೆಯ ವಿರುದ್ಧ ಹೋರಾಡಲು ಮತ್ತು ವಿಮುಕ್ತಿಗೊಳಿಸಲು ಅಹಿಂಸಾತ್ಮಕವಾದ ಮತ್ತು ನಾಗರೀಕಅಸಹಕಾರ ಚಳುವಳಿಗಾಗಿ ಸಂಘಟಸಿದರು. ಅತ್ಯಂತ ಪ್ರಭಾವಶಾಲಿ ಮತ್ತು ಸಂಘಟನಾಚತುರರಾಗಿದ್ದ ಪಟೇಲರು ಭಾರತೀಯರಾಷ್ಟ್ರೀಯಕಾಂಗ್ರೆಸ್ಸಿನ ಅಧ್ಯಕ್ಷರಾಗಿಆಯ್ಕೆಯಾದರು. ನಂತರದೇಶದಲ್ಲಿಕ್ವಿಟ್ಇಂಡಿಯಾ ಚಳುವಳಿಯಲ್ಲಿ ಜನರನ್ನು ಪ್ರೇರೇಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು 1934 ಹಾಗೂ 1937 ರಲ್ಲಿ ಚುನಾವಣೆಗಳಲ್ಲಿ ಕಾಂಗ್ರೆಸ್ಸ್ ಪಕ್ಷವನ್ನು ಮುನ್ನಡೆಸಿದರು. 

ದೇಶದ ಮೊಟ್ಟ ಮೊದಲ ಗೃಹ ಸಚಿವ ಹಾಗೂ ಉಪ ಪ್ರಧಾನಿಯಾಗಿಆಯ್ಕೆಯಾದ ಸದರ್ಾರ ಪಟೇಲರು ಭಾರತದ ವಿಭಜನೆಯಿಂದಉಂಟಾದ ಹಿಂಸಾಚಾರದ ಸಮಯದಲ್ಲಿ ಪಂಜಾಬ ಮತ್ತುದೆಹಲಿಯಲ್ಲಿಜನರಲ್ಲಿ ಪುನಃ ಮರುಸ್ಥಾಪಿಸಲು ಹೋರಾಡಿದ ನಾಯಕರಲ್ಲಿ ಮುಂಚೂಣಿಯಲ್ಲಿದ್ದರು. ಇಂಡಿಯನ್ಇಂಡೆಪೆಂಡೆನ್ಸ ಆಕ್ಟ್-1947 ರ ಪ್ರಕಾರ ಭಾರತಕ್ಕೆ ಹಂಚಿಕೆಯಾದ 565 ಬ್ರಿಟಿಷ್ ವಸಾಹತುಶಾಹಿ ಪ್ರಾಂತ್ಯಗಳನ್ನು ಒಗ್ಗೂಡಿಸುವಲ್ಲಿ ಹಾಗೂ ಹೊಸದಾಗಿ ಸ್ವಾತಂತ್ರ ಪಡೆದ ಭಾರತವನ್ನುಒಂದು ಸಂಯುಕ್ತಏಕೀಕರಣರಾಷ್ಟ್ರವನ್ನಾಗಿಸಲು ಬಹಳ ಶ್ರಮಿಸಿದವರಲ್ಲಿ ಅಗ್ರಪಂಕ್ತಿಯವರೇ ನಮ್ಮ ಹೆಮ್ಮೆಯ ವಲ್ಲಭಭಾಯಿ ಪಟೇಲರುಎಂದು ಹೇಳಬಹುದು. ತಮ್ಮ 72 ನೇಯ ವಯಸ್ಸಿನಲ್ಲಿ ದೇಶದ 565 ಕ್ಕಿಂತ ಹೆಚ್ಚು ರಾಜ ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸಿ, ಭಾರತವುಒಂದು ಯಶಸ್ವಿ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದರಾಷ್ಟ್ರವನ್ನಾಗಿಸಲು ಪ್ರಯತ್ನಿಸಿದರು ಹಾಗೂ ಭಾರತವನ್ನುಒಗ್ಗಟ್ಟಾದದೇಶವನ್ನಾಗಿಕಟ್ಟುವ ಮಹತ್ತರವಾದ ಜವಾಬ್ದಾರಿಯನ್ನು ಹೊತ್ತವರು ಮತ್ಯಾರೂಅಲ್ಲಅವರೇ ನಮ್ಮ ಉಕ್ಕಿನ ಮನುಷ್ಯಎಂದೇ ಹೆಸರುವಾಸಿಯಾದ ಸರ್ದಾರ  ವಲ್ಲಭಭಾಯಿ ಪಟೇಲರು.

ಪಟೇಲರುಒಬ್ಬ ಶ್ರೇಷ್ಠ ರಾಜ ನೀತಿಜ್ಞ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಅಗ್ರಪಂಕ್ತಿಯ ನಾಯಕರಾಗಿದ್ದು, ರಾಷ್ಟ್ರದಚಿತ್ರಣವನ್ನೇ ಬದಲಿಸಬೇಕೆಂಬ ಕನಸು ಕಂಡದೇಶಭಕ್ತರಾಗಿದ್ದರು. ಅವರುದೇಶದಲ್ಲಿ ಹರಿದು ಹಂಚ ಹೋಗಿದ್ದ ಸುಮಾರು 500 ಕ್ಕೂ ಹೆಚ್ಚು ಪ್ರಾಂತ್ಯಗಳನ್ನು ಒಟ್ಟುಗೂಡಿಸಿ ಭಾರತದಐಕ್ಯತೆಯನ್ನು ಗಟ್ಟಿಗೊಳಿಸಿದವರು ಪಟೇಲರು. ಆದ್ದರಿಂದ ನಾವೆಲ್ಲರೂ ಭಾರತೀಯರೆಂಬ ಐಕ್ಯತಾ ಮಂತ್ರವನ್ನು ಪಠಿಸುತ್ತಾ ನಮ್ಮಲ್ಲಿರುವಜಾತಿ, ಮತ, ಪಂಥ, ಪಂಗಡ, ಮೇಲು-ಕೀಳುಗಳೆಂಬ ಅನಿಷ್ಟಗಳನ್ನು ತೊಲಗಿಸಿ ನಾವೆಲ್ಲರೂಒಂದೇ, ಜಾತಿಒಂದೇ, ಮತಒಂದೇ ನಾವು ಮನುಜರುಎಂಬಂತೆ ಸದ್ಭಾವನೆಯನ್ನುಹೊಂದಬೇಕು. ಸರ್ದಾರ ವಲ್ಲಭಭಾಯಿಪಟೇಲರು Manpower without Unity is not a strength unless it is harmonized and united properly, then it becomes a spiritual power”ಎಂದು ಹೇಳಿದ್ದಾರೆ.

ಸದರ್ಾರ ವಲ್ಲಭಭಾಯಿ ಪಟೇಲರ ನಾಯಕತ್ವ, ಕ್ರೀಯಾಶೀಲತೆ, ದೂರದೃಷ್ಟಿ, ಏಕತೆ ಹಾಗೂ ರಾಷ್ಟ್ರಭಕ್ತಿ ಗುಣಗಳನ್ನು ನಾವೆಲ್ಲರೂಒಂದು ಎಂಬ ಮನೋಭಾವದಿಂದ ನಮ್ಮಜೀವನದಲ್ಲಿ ಅಳವಡಿಸಿಕೊಂಡು ರಾಷ್ಟ್ರರಕ್ಷಣೆಯಲ್ಲಿ ಸಕ್ರೀಯವಾಗಿ ಪಾಲ್ಗೋಂಡುರಾಷ್ಟ್ರದಋಣವನ್ನುತೀರಿಸಬೇಕು. ಅಂದಾಗ ಮಾತ್ರರಾಷ್ಟ್ರದಲ್ಲಿಏಕತೆಯು ನೆಲೆಗೊಳ್ಳಲು ಶ್ರಮಿಸಿದ ಪಟೇಲರಿಗೆಗೌರವ ನೀಡಿದಂತಾಗುತ್ತದೆ.ಸರ್ದಾರ  ವಲ್ಲಭಭಾಯಿ ಪಟೇಲ್ರ ಸ್ಮರಣಾರ್ಥದೇಶದಲ್ಲಿಗುಜರಾತರಾಜ್ಯದ ನರ್ಮದಾ ನದಿಯತಟದಲ್ಲಿಜಗತ್ತಿನಅತಿಎತ್ತರದಅಂದರೆ ಸುಮಾರು 182 ಮೀಟರ (597 ಅಡಿ) ಎತ್ತರದ ಉಕ್ಕಿನ ಮನುಷ್ಯ ಸರ್ದಾರ  ವಲ್ಲಭಭಯಿ ಪಟೇಲ್ರಏಕತಾ ಪ್ರತಿಮೆಯನ್ನು ದಿನಾಂಕ: ಅಕ್ಟೋಬರ 31, 2018 ರಂದು ಸ್ಥಾಪಿಸಲಾಗಿದೆ.

ದೇಶಕಂಡಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಹಾಗೂ ರಾಷ್ಟ್ರದಐಕ್ಯತೆಗಾಗಿ ಶ್ರಮಿಸಿದ ಉಕ್ಕಿನ ಮನುಷ್ಯನೆಂದೇ ಹೆಸರುವಾಸಿಯಾದ ಸದರ್ಾರ ವಲ್ಲಭಭಾಯಿ ಪಟೇಲರಜೀವನ, ತತ್ವಾದರ್ಶ, ಸಿದ್ದಾಂತಗಳು, ವೈಚಾರಿಕತೆ, ರಾಷ್ಟ್ರಪ್ರೇಮ ಮತ್ತು ನಾವೆಲ್ಲರೂಒಂದೇ ಎಂಬ ರಾಷ್ಟ್ರದಏಕತೆ, ಸಮಗ್ರತೆ, ಸುಭದ್ರತೆ ಮತ್ತುಸುರಕ್ಷತೆಯಂತಹ ವಿಚಾರಧಾರೆಗಳು ನಮ್ಮೆಲ್ಲರಿಗೆ ದಾರಿದೀಪವಾಗಬೇಕು.ಹೀಗಾಗಿ ಪ್ರತಿ ವರ್ಷ ಅಕ್ಟೋಬರ31 ರಂದುರಾಷ್ಟ್ರೀಯಏಕತೆಗಾಗಿ ಶ್ರಮಿಸಿದ ನಮ್ಮ ಸರ್ದಾರ ಪಟೇಲರಜನ್ಮದಿನವನ್ನುಏಕತಾ ದಿನವನ್ನಾಗಿ ದೇಶದಾದ್ಯಂತ ಆಚರಿಸಲಾಗುತ್ತಿದೆ. ದೇಶದಲ್ಲಿ ನಾವೆಲ್ಲರೂ ಭಾರತೀಯರು ನಾವೆಲ್ಲ ಒಂದೇ ಎಂಬ ಐಕ್ಯತಾ ಮಂತ್ರ ಜಪಿಸುತ್ತಾ ಪಟೇಲರ ಈ ಜನ್ಮದಿನವನ್ನುಒಂದುಅರ್ಥಪೂರ್ಣವನ್ನಾಗಿಸಬೇಕು. ಇಂತಹ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರನಿಗೆ ನಾವೆಲ್ಲರೂ ನಮ್ಮಲ್ಲಿರುವ ಮೇಲು-ಕೀಳು, ಜಾತಿ-ಮತ-ಪಂಥಗಳೆಂಬ ಭೇದಗಳನ್ನು ತೊರೆದು ನಾವೆಲ್ಲರೂ ಭಾರತೀಯರೆಂಬ ಐಕ್ಯತೆಯ ಕಹಳೆಯನ್ನು ಮೊಳಗಿಸಿದರೆ ಅದುವೇ ನಾವು ನೀಡುವಗೌರವ.   ನಮ್ಮದೇಶದಲ್ಲಿ ಪುನಃ ಸರ್ದಾರ  ಪಟೇಲ್ರಐಕ್ಯತೆಯ ಮಂತ್ರ ಜಪಿಸುವಂತಾಗಲಿ ಮತ್ತುರಾಷ್ಟ್ರದ ಸಮಗ್ರತೆ ಮತ್ತು ಸುಭದ್ರತೆ, ಸುರಕ್ಷತೆಗಾಗಿ ನಾವೆಲ್ಲರೂ ಪ್ರಯತ್ನಿಸೋಣಎಂಬುದೇ ನನ್ನಆಶಯ.