ಸಂಗೊಳ್ಳಿ ರಾಯಣ್ಣನ 188ನೇ ಹುತಾತ್ಮ ದಿನಾಚರಣೆ
ಲೋಕದರ್ಶನ ವರದಿ
ಹೂವಿನಹಡಗಲಿ 29:ರೈತ ಮತ್ತು ಯೋಧ ನಮ್ಮ ದೇಶದ ಎರಡು ಕಣ್ಣುಗಳು. ನಮ್ಮೆಲ್ಲರ ಸುಭದ್ರ ಜೀವನಕ್ಕೆ ಈರ್ವರ ಕೊಡುಗೆ ಅನನ್ಯ ಎಂದು ಕುರುಬ ಸಮಾಜದ ಮುಖಂಡ ಹಾಗೂ ಹಿರಿಯ ವಕೀಲ ಎಂ.ಪರಮೇಶ್ವರಪ್ಪ ಹೇಳಿದರು. ಅವರು ಸಂಗೊಳ್ಳಿ ರಾಯಣ್ಣ ಜಾಗೃತ ಬಳಗ ತಾಲೂಕು ಘಟಕ ಶನಿವಾರ ಸಂಜೆ ಸರಕಾರಿ ನೌಕರರ ಸಂಘದ ಕಛೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂಗೊಳ್ಳಿ ರಾಯಣ್ಣನ 188ನೇ ಹುತಾತ್ಮ ದಿನಾಚರಣೆಯಲ್ಲಿ ಚಾಲನೆ ನೀಡಿ ಮಾತನಾಡಿದರು.
ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಸ್ವಾತಂತ್ರ ಪ್ರೇಮಿ ರಾಯಣ್ಣ ಬ್ರಿಟಿಷರನ್ನು ತೊಲಗಿಸಿ ಕಿತ್ತೂರನ್ನು ಸ್ವತಂತ್ರಗೊಳಿಸಬೇಕೆಂದು ಅವಿರತ ಶ್ರಮಿಸುತ್ತಿದ್ದ. ಆದರೆ ಕುತಂತ್ರಿಗಳ ಮೋಸದ ಜಾಲಕ್ಕೆ ಸಿಲುಕಿ ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟ. ಇಂತಹ ವೀರಪುತ್ರ ಎಲ್ಲರ ಮನೆಯಲ್ಲಿ ಜನಿಸಬೇಕೆಂದು ಹೆಣ್ಣುಮಕ್ಕಳು ಈಗಲೂ ರಾಯಣ್ಣನ ಸಮಾಧಿ ಮೇಲೆ ನೆಟ್ಟ ಆಲದ ಮರಕ್ಕೆ ತೊಟ್ಟಿಲು ಕಟ್ಟುತ್ತಿದ್ದಾರೆ ಎಂದು ಮುಖ್ಯ ಶಿಕ್ಷಕ ಡಿ.ವಿರುಪಣ್ಣ ಸಂಗೊಳ್ಳಿ ರಾಯಣ್ಣನ ತ್ಯಾಗ ಬಲಿದಾನ ಕುರಿತು ಉಪನ್ಯಾಸ ನೀಡುತ್ತಾ ತಿಳಿಸಿದರು. ಪ್ರೌಢಶಾಲಾ ಮುಖ್ಯಗುರುಗಳ ಸಂಘದ ಅಧ್ಯಕ್ಷ ಪಿ.ಪ್ರಕಾಶ್ ಅಧ್ಯಕ್ಷತೆವಹಿಸಿ ಮಾತನಾಡಿದರು.
ಈ ವೇಳೆ ನಿವೃತ್ತ ಯೋಧರಾದ ಮೈನಳ್ಳಿ ಮಹೇಶ್ವರ್, ಎಚ್.ಆರ್.ಮಹಮ್ಮದ್ ರಫಿ, ಕೋಗಳಿ ಕೊಟ್ರಪ್ಪ, ಯು.ಬಿ.ಫಕೃದ್ದೀನ್ ಇವರುಗಳಿಗೆ ಗೌರವ ಸನ್ಮಾನ ನೆರೆವೇರಿಸಲಾಯಿತು.
ತಾಲೂಕು ಕುರುಬ ಸಂಘದ ಅಧ್ಯಕ್ಷ ಎಚ್.ಬೀರಪ್ಪ, ತಾ.ಪಂ.ಮಾಜಿ ಅಧ್ಯಕ್ಷ ಬಿ.ಹುಲುಗಪ್ಪ, ಕನಕ ಪತ್ತಿನ ಬ್ಯಾಂಕ್ ಮಾಜಿ ಅಧ್ಯಕ್ಷ ಗುರುವಿನ ರವೀಂದ್ರ, ಬ್ಯಾಂಕನ ಸಹಕಾರ್ಯದಶರ್ಿ ಆರ್.ಕೃಷ್ಣ ಆರ್.ಎಸ್.ಎಸ್.ಎನ್ ಸೊಸೈಟಿ ಮಾಜಿ ಅಧ್ಯಕ್ಷ ಕೆ.ಲಕ್ಷ್ಮಣ, ವಕೀಲರಾದ ಕೆ.ಎಚ್.ಮಲ್ಲಪ್ಪ, ಎಚ್.ಅಂಜಿನಪ್ಪ, ಮುಖಂಡರಾದ ಈಟಿ.ವೀರಣ್ಣ, ಬಂದ್ರಕಳ್ಳಿ ಕೋಟೆಪ್ಪ, ಟೆಂಗೂರಿ ಮಲ್ಲಪ್ಪ, ಕೆ.ದ್ಯಾಮಜ್ಜ, ಮೇಟಿ ಪರಮೇಶ್, ಎಂ.ಮೈಲಾರಪ್ಪ, ಪ್ರಾಚಾರ್ಯರುಗಳಾದ ಕೆ.ದ್ಯಾಮಜ್ಜ, ಷಣ್ಮುಖಪ್ಪ ಬಾಗೇವಾಡಿ, ವೈದ್ಯಾಧಿಕಾರಿ ಕೆ.ಬಸವರಾಜ್ ಶಿಕ್ಷಣ ಸಂಯೋಜಕ ನಿಂಗಪ್ಪ, ಮುಖ್ಯಗುರು ಸಣ್ಣಲಕ್ಕಪ್ಪ ಉಪಸ್ಥಿತರಿದ್ದರು. ಚಂದ್ರಶೇಖರ ಕಲಾಬಳಗದ ಕಲಾವಿದರಾದ ಅಂಗೂರು ಪರಶುರಾಮ ಮತ್ತು ತಂಡದವರು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಸಂಚಾಲಕರುಗಳಾದ ಎಂ.ಚಿದಾನಂದ, ಕೆ.ದೊಡ್ಡಬಸಪ್ಪ, ಬನ್ನಿಕಲ್ ರವಿ, ಬಿ.ಉಯಕುಮಾರ್, ಕಾರ್ಯಕ್ರಮ ನಿರ್ವಹಿಸಿದರು.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 