ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಚಾಲನೆ
Road improvement works launched
ರಾಯಬಾಗ 28 : ಮತಕ್ಷೇತ್ರದ ಪ್ರತಿಯೊಂದು ಗ್ರಾಮಗಳ ತೋಟದ ರಸ್ತೆಗಳನ್ನು ಸುಧಾರಿಸುವುದರಿಂದ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು. ಶನಿವಾರ ತಾಲೂಕಿನ ಮೇಖಳಿ ಗ್ರಾಮದಲ್ಲಿ ಜಿ.ಪಂ.ಇಲಾಖೆಯಿಂದ ಮಂಜೂರಾದ 20 ಲಕ್ಷ ರೂ. ಅನುದಾನದಲ್ಲಿ ಮೇಖಳಿ ಮುಖ್ಯ ರಸ್ತೆಯಿಂದ ಜಾನ್ವೇಕರ್ ತೋಟದ ರಸ್ತೆ ಸುಧಾರಣೆ ಹಾಗೂ 20 ಲಕ್ಷ ರೂ.ಅನುದಾನದಲ್ಲಿ ಮೇಖಳಿ-ನಾಗರಮುನ್ನೋಳ್ಳಿ ರಸ್ತೆಯಿಂದ ಮುತಾರೆ ತೋಟದ ಸರ್ಕಾರಿ ಶಾಲೆವರೆಗೆ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ತೋಟದ ವ್ಯಾಪ್ತಿಯಲ್ಲಿರುವ ಶಾಲೆಗಳಿಗೆ ಹೋಗುವ ಮಕ್ಕಳಿಗೆ ಹೆಚ್ಚು ಅನುಕೂಲವಾಗಲಿದೆ. ಗುತ್ತಿಗೆದಾರರು ಗುಣಮಟ್ಟದ ರಸ್ತೆ ನಿರ್ಮಿಸಬೇಕೆಂದು ಸೂಚಿಸಿದರು. ಜೆಇ ರಾಕೇಶ ಕಟ್ಟೀಮನಿ, ಸದಾಶಿವ ಫೋರೆ್ಡ, ಸಂಗಣ್ಣ ದತ್ತವಾಡೆ, ಪಿ.ಎ.ನಾಯಿಕ, ಕುಮಾರ ಮರಭೀಮಗೋಳ, ಸಾತಪ್ಪ ಮುತಾರೆ, ಬೀರು ನಾಯಿಕ, ಭೀಮಶಿ ಸುತಾರ, ಮಹೇಶ ಮುತಾರೆ, ಭೀಮಸೇನ ಮುತಾರೆ, ರಾಜು ನಾಯಿಕ, ಮಂಜು ಮುತಾರೆ ಸೇರಿ ಅನೇಕರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 