ರಸ್ತೆ ಸುರಕ್ಷತೆ- ಜೀವದ ರಕ್ಷೆ ಘೋಷ ವಾಕ್ಯದಡಿ ಫೆ. 4 ರಿಂದ 10 ವರೆಗೆ ರಸ್ತೆ ಸುರಕ್ಷತಾ ಸಪ್ತಾಹ ಆಚರಣೆ: ಡಿಸಿ ಚೋಳನ್

ಧಾರವಾಡ 28: "ರಸ್ತೆ ಸುರಕ್ಷತೆ- ಜೀವದ ರಕ್ಷೆ ಘೋಷ ವಾಕ್ಯದಡಿ 30 ನೇಯ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹವನ್ನು ಜಿಲ್ಲೆಯಲ್ಲಿ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ವಿವಿಧ ಇಲಾಖೆೆಗಳ ಸಮನ್ವಯ ಹಾಗೂ ಸಹಯೋಗದಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಇಲಾಖೆ ಅಧಿಕಾರಿಗಳು ನೆಪಮಾತ್ರಕ್ಕೆ ಪಾಲ್ಗೋಳ್ಳದೇ ಇದು ಮಹತ್ವದ ಕಾರ್ಯಕ್ರಮ ಆಗಿರುವದರಿಂದ ಮನಪರ್ೂವಕವಾಗಿ ಪಾಲ್ಗೋಳ್ಳಬೇಕು ಮತ್ತು ಸಪ್ತಾಹದ ನಂತರ ಇಲಾಖಾವಾರು ವರದಿ ನೀಡಬೇಕೆಂದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

   ಜಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

    ಧಾರವಾಡ ಕಲಾಭವನದಲ್ಲಿ ಸಪ್ತಾಹದ ಉದ್ಘಾಟನಾ ಸಮಾರಂಭ ಆಯೋಜಿಸಲಾಗುವುದು. ತಜ್ಞರಿಂದ ವಿಶೇಷ ಉಪನ್ಯಾಸ, ಕರಪತ್ರ ವಿತರಣೆ, ಸಂಚಾರ ಜಾಗೃತಿಯ ಕಿರು ಚಲನಚಿತ್ರ ಪ್ರದರ್ಶನ ಮತ್ತು ಕಾರ್ಯಕ್ರಮದ ನಂತರ ಜನಜಾಗೃತಿ ಜಾಥಾ ನಡೆಯಲಿದೆ.

        ಸಪ್ತಾಹದ ಏಳು ದಿನಗಳಕಾಲ ಪ್ರತಿದಿನ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ವಾತರ್ಾ ಮತ್ತು ಪ್ರಸಾರ ಇಲಾಖೆ, ಶಿಕ್ಷಣ ಇಲಾಖೆ, ಲೋಕೋಪಯೋಗಿ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮಹಾನಗರ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ, ಎನ್.ಡಬ್ಲೂ.ಕೆ.ಆರ್.ಟಿ.ಸಿ., ಪೆಟ್ರೋಲ್ ಪಂಪ್ ಮಾಲೀಕರು, ವಾಹನ ಚಾಲನಾ ತರಬೇತಿ ಶಾಲೆಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಿವೆ.

ಫೆಬ್ರವರಿ ಹತ್ತರಂದು ಸಪ್ತಾಹದ ಸಮಾರೋಪ ಸಮಾರಂಭ  ಹುಬ್ಬಳ್ಳಿಯ ಸಾಂಸ್ಕೃತೀಕ ಭವನದಲ್ಲಿ ಜರುಗಲಿದ್ದು, ಅಂದು ವಿಶೇಷ ಉಪನ್ಯಾಸ ಹಾಗೂ ಅಪಘಾತ ರಹಿತ ಸೇವೆ ಸಲ್ಲಿಸಿರುವ ವಿವಿಧ ರೀತಿ ವಾಹನ ಚಾಲಕರಿಗೆ ಸನ್ಮಾನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು.

     ಸಭೆಯಲ್ಲಿ ಉಪ ಸಾರಿಗೆ ಆಯುಕ್ತ ರವೀಂದ್ರ ಕವಲಿ, ಎನ್.ಡಬ್ಲೂ.ಕೆ.ಆರ್.ಟಿ.ಸಿ. ಡಿ.ಸಿ. ಮಂಜುಳಾ ನಾಯಕ, ಆಹಾರ ಇಲಾಖೆ ಉಪ ನಿದರ್ೆಶಕ ಸದಾಶಿವ ಮಜರ್ಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಆರ್.ಎಮ್.ದೊಡ್ಡಮನಿ, ಅಬಕಾರಿ ಇಲಾಖೆ ಜಿಲ್ಲಾ ಅಧಿಕಾರಿ ಬಿ.ಆರ್. ಹಿರೇಮಠ, ಡಿವಾಯ್.ಎಸ್.ಪಿ ರಾಮನಗೌಡ ಹಟ್ಟಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.