ಉತ್ತರ ಕನ್ನಡ ಧಾರವಾಡ ಪೀಠದ ವ್ಯಾಪ್ತಿಯಲ್ಲೇ ಇರಲಿ: ವಕೀಲರ ಒತ್ತಾಯ
ದಾಂಡೇಲಿ 04: ಮಂಗಳೂರಿನಲ್ಲಿ ಹೊಸ ಹೈಕೊರ್ಟ ಪೀಠ ಸ್ಥಾಪನೆಗೆ ವಿರೋದವಿಲ್ಲ. ಆದರೆ ಈಗಾಗಲೇ ಧಾರವಾಡ ಪೀಠದ ವ್ಯಾಪ್ತಿಯಲ್ಲಿರುವ ಉತ್ತರ ಕನ್ನಡ ಜಿಲ್ಲೆಯನ್ನು ಬೇರಿ್ಡಸುವದು ನ್ಯಾಯಸಮ್ಮತವಲ್ಲ. ಈ ಕುರಿತು ಸರ್ಕಾರ ಅಚಿತಿಮ ನಿರ್ಧಾರ ಕೈಗೊಳ್ಳುವ ಮುನ್ನ ಜನಪ್ರತಿನಿಧಿಗಳು, ವಕೀಲರು ಹಾಗೂ ಸಾರ್ವಜನಿಕರ ಅಭಿಪ್ರಾಯಗಳನ್ನು ಪರಿಗಣಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ಶಾಸಕ ಆರ್.ವಿ ದೇಶಪಾಂಡೆ ಅವರನ್ನು ಬೇಟಿ ಮಾಡಿ ಆಲ್ ಇಂಡಿಯಾ ಲಾಯರಸ್ ಯುನಿಯನ್ ಸದಸ್ಯರು ಮತ್ತು ಹೈ ಕೊರ್ಟ ವಕೀಲರು ವಿರೋಧ ವ್ಯಕ್ತ ಪಡಿಸಿ ಮನವಿ ಸಲ್ಲಿಸಿರುತ್ತಾರೆ.
ಭೌಗೋಳೀಕವಾಗಿ ಉತ್ತರ ಕನ್ನಡ ಬಹುತೇಕ ತಾಲೂಕುಗಳಿಗೆ ಮಂಗಳೂರಿಗಿಂತ ಧಾರವಾಡವೇ ಸಮೀಪದಲ್ಲಿರುತ್ತಿದ್ದು ರಸ್ತೆ ಸಂಪರ್ಕ, ನ್ಯಾಯಾಂಗ ವ್ಯವಹಾರಗಳ ದೃಷ್ಟಿಯಿಂದಲೂ ಹೆಚ್ಚು ಅನುಕೂಲಕರವಾಗಿದೆ. ಈ ಸಂದರ್ಭದಲ್ಲಿ ಮಂಗಳೂರು ಪೀಠಕ್ಕೆ ಜಿಲ್ಲೆಯನ್ನು ಸೇರಿಸುವದು ಅವೈಜ್ಞಾನಿಕ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ದವಾದ ನಿರ್ಧಾರವಾಗಲಿದೆ ಎಂದು ವಕೀಲರು ಅಭಿಪ್ರಾಯ ಪಟ್ಟರು. ಮನವಿ ಸಲ್ಲಿಸಿದ ನಿಯೋಗದಲ್ಲಿ ಎ.ಐ.ಎಲ್.ಯೂ ಸದಸ್ಯರಾದ ರತ್ನ ದೀಪ, ಆಫ್ರೀನ್ ಕಿತ್ತುರು, ಗೀರೀಶ ಭಟ್ಟ, ವಿಶ್ವನಾಥ ಹೆಗಡೆ, ಪ್ರವೀಣ ತರೇಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.