ಧಾರವಾಡ.14: ಅಕಾಲಿಕ ಮಳೆ, ಸಿಡಿಲು, ನೆರೆಹಾವಳಿ, ಆಲಿಕಲ್ಲು, ಮಳೆಗಳಿಂದಾಗಿ ಕೃಷಿಕರು ಬೆಳೆ ನಷ್ಟದಿಂದ ಹಾನಿ ಅನುಭವಿಸುತ್ತಿದ್ದಾರೆ. ಕೃಷಿಕರಿಗೆ, ಕೃಷಿ ಕಾರ್ಯನಿರತರಿಗೆ ಸಕಾಲಕ್ಕೆ ಅಗತ್ಯ ಮಾಹಿತಿ ಮತ್ತು ಮುಂಜಾಗೃತಾ ಕ್ರಮಗಳನ್ನು ತಿಳಿಸಲು ಕೃಷಿ ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಲಾಗಿದ್ದು, ಉತ್ತರ ಕನರ್ಾಟಕ ರೈತರಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂವಿಜ್ಞಾನ ಸಚಿವ ಡಾ.ಹರ್ಷವರ್ಧನ ಹೇಳಿದರು.
ಅವರು ಇಂದು ಮಧ್ಯಾಹ್ನ ಧಾರವಾಡ ಕೃಷಿವಿಶ್ವವಿದ್ಯಾಲಯ ಆವರಣದಲ್ಲಿನ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಸ್ಥಾಪಿಸಿರುವ ಉತ್ತರ ಕನರ್ಾಟಕ ಕೃಷಿ ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಈ ನೂತನ ಕೇಂದ್ರದಿಂದ ಪ್ರತಿ ರೈತರಿಗೆ ಹವಾಮಾನ ಬದಲಾವಣೆ, ವೈಪರೀತ್ಯಗಳ ಕುರಿತು ಕಾಲಕಾಲಕ್ಕೆ ಎಸ್ಎಂಎಸ್ಗಳ ಮೂಲಕ ಮಾಹಿತಿ ನೀಡಲಾಗುತ್ತದೆ. ಮತ್ತು ಮಾಧ್ಯಮಗಳ ಸಹಾಯದಿಂದ ಕೃಷಿ ಕಾರ್ಯಗಳಿಗೆ ಅಗತ್ಯವಿರುವ ಹವಾಮಾನ ವರದಿಯನ್ನು ಸಕಾಲಕ್ಕೆ ಪ್ರಚುರಪಡಿಸಲಾಗುತ್ತದೆ ಎಂದು ಅವರು ಹೇಳಿದರು.
ಹವಾಮಾನ ವೈಪರೀತ್ಯಗಳಿಂದಾಗಿ ಉತ್ತರ ಕನರ್ಾಟಕದಲ್ಲಿ ದನ, ಕರುಗಳು, ಕೃಷಿ, ತೋಟಗಾರಿಕೆ ಬೆಳೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಷ್ಟ ಉಂಟಗಿದೆ. ಇಂತಹ ನಷ್ಟಗಳನ್ನು ಕಡಿಮೆ ಮಾಡಲು ಸಮಯಕ್ಕನುಗುಣವಾಗಿ ಮುನ್ನೆಚ್ಚರಿಕೆಯನ್ನು ಸಕರ್ಾರ ಮತ್ತು ರೈತರಿಗೆ ಸೂಕ್ತ ಮಾಧ್ಯಮದಿಂದ ತಲುಪಿಸಲು ಈ ಕೇಂದ್ರದಿಂದ ಕ್ರಮವಹಿಸಲಾಗುತ್ತದೆ.
ಕಾಲ್ಸೆಂಟರ್ ಮೂಲಕ ಮಾಹಿತಿಯನ್ನು ರೈತರಿಗೆ ಮುಟ್ಟಿಸುವ ಮತ್ತು ಹೆಚ್ಚಿನ ನಿಖರತೆಯಿಂದ ಹವಾಮಾನ ಮುನ್ಸೂಚನೆ, ಹವಾಮಾನ ಆಧಾರಿತ ಕೃಷಿ ಸಲಹೆಗಳನ್ನು ಕೃಷಿಕರಿಗೆ ತಲುಪಿಸಲು ಕೇಂದ್ರ ನೆರವಾಗಲಿದೆ ಎಂದು ಸಚಿವರು ತಿಳಿಸಿದರು.
ಸಂಸದ ಪ್ರಹ್ಲಾದ ಜೋಶಿ ಅವರು ಮಾತನಾಡಿ, ಕೇಂದ್ರ ಸಕರ್ಾರ ಕೃಷಿ, ಕೃಷಿಕರಿಗೆ ಹೆಚ್ಚಿನ ಆಧ್ಯತೆ ನೀಡಿದೆ. ಕೃಷಿ ಸಮ್ಮಾನ ಮೂಲಕ ಸಣ್ಣ ಮತ್ತು ಮಧ್ಯಮ ರೈತರಿಗೆ ಪ್ರತಿ ವರ್ಷ ಆರು ಸಾವಿರ ನೀಡುವ ಕ್ರಮ ಕೈಗೊಂಡಿದೆ. ಬಿತ್ತನೆ ಕೊಯ್ಲು ಸಂದರ್ಭಗಳಲ್ಲಿ ರೈತರಿಗೆ ಆಥರ್ಿಕ ಸಹಾಯವಾಗಲಿ ಎಂಬ ಸದುದ್ದೇಶದಿಂದ ಈ ಯೋಜನೆ ಜಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಈ ಸಹಾಯಧನ ಮೊತ್ತ ಹೆಚ್ಚಳವಾಗುತ್ತದೆ.
ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ಕೇಂದ್ರದಿಂದ ರೈತರಿಗೆ ಸಕಾಲಕ್ಕೆ ಹವಾಮಾನದ ನಿಖರ ಮಾಹಿತಿ ನೀಡುವ ಮೂಲಕ ಕೃಷಿ ಕಾರ್ಯಗಳಿಗೆ ನೆರವಾಗಲಿದೆ ಎಂದು ಹೇಳಿದರು.
ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಎಂ.ಬಿ. ಚಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಭಾರತೀಯ ಭೂವಿಜ್ಞಾನ ಮಂತ್ರಾಲಯದ ಕಾರ್ಯದಶರ್ಿ ಡಾ.ಎಂ.ಎನ್. ರಾಜೀವ್, ಭಾರತ ಹವಾಮಾನ ಇಲಾಖೆ ಮಹಾನಿದರ್ೆಶಕ ಡಾ.ಕೆ.ಜೆ. ರಮೇಶ, ಡಾ.ಜಿ.ಎನ್. ಶ್ರೀನಿವಾಸ ರೆಡ್ಡಿ, ಡಾ.ಎಸ್. ಬಾಲಚಂದ್ರನ್, ಡಾ.ಕೆ.ಕೆ. ಸಿಂಗ್, ಕೃಷಿ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಸದಸ್ಯರು, ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರೈತರು, ರೈತ ಮಹಿಳೆಯರು ವಿದ್ಯಾಥರ್ಿಗಳು ಮತ್ತು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಪಾಲ್ಗೊಂಡಿದ್ದರು.