ಕೃಷಿ ಮೇಳಕ್ಕೆ ಬರುವ ರೈತರ ವಾಹನಗಳಿಗೆ ಟೂಲ್ ಸಂಗ್ರಹ ಮಾಡದಂತೆ ಮನವಿ

Request not to collect tools for the vehicles of farmers coming to agricultural fair

ಕೃಷಿ ಮೇಳಕ್ಕೆ ಬರುವ ರೈತರ ವಾಹನಗಳಿಗೆ ಟೂಲ್ ಸಂಗ್ರಹ ಮಾಡದಂತೆ ಮನವಿ 

ವಿಜಯಪುರ 06: ಹಿಟ್ನಳ್ಳಿ ಕೃಷಿ ಮೇಳಕ್ಕೆ ಬರುವ ರೈತರ ವಾಹನಗಳಿಗೆ ಟೂಲ್ ಸಂಗ್ರಹ ಮಾಡದಂತೆ ಆದೇಶಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಪ್ರಗತಿಪರ ಸಂಘಟನೆಯಿಂದ ಮನವಿ ಸಲ್ಲಿಸಲಾಯಿತು.  

ಇದೇ ತಿಂಗಳು 11,12,13ರಂದು ಹಿಟ್ನಳ್ಳಿ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಆಗಮಿಸುವ ರೈತರು, ವಿದ್ಯಾರ್ಥಿಗಳು ವಿಜ್ಞಾನಿಗಳು ವಾಹನಗಳಿಗೆ ಟೂಲ್ ವಿಧಿಸಿದರೆ ಅವರು ದಂಡತೆತ್ತು ಮೇಳಕ್ಕೆ ಆಗಮಿಸಿದಂತಾಗುತ್ತದೆ. ಕಾರಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಟೂಲ್ ವಿಧಿಸಿದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.  

ಮತ್ತು ಕೃಷಿ ವಿಶ್ವಿವಿದ್ಯಾಲಯ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿದ್ದು, ನಿಯಮಾನುಸಾರಟೂಲ್ ಪಾಲಿಕೆ ವ್ಯಾಪ್ತಿಯಲ್ಲಿರಬಾರದು ಮತ್ತು ವರ್ಷ ವಿಡಿಅಲ್ಲಿ ವಿಚಾರ ಸಂಕೀರ್ಣಗಳು, ಮೇಳಗಳು ನಡೆಯುವುದರಿಂದಅಲ್ಲಿಗೆ ಬರುವಆಸಕ್ತರಿಗೆತೀವ್ರ ಹಿಂಸೆಯಾಗುತ್ತದೆ. ಕಾರಣಟೂಲ್ ಪ್ಲಾಜಾವನ್ನುಅಲ್ಲಿಂದಕಿತ್ತು ಮನಗೂಳಿ ಸಮೀಪ ಅಳವಡಿಸಬೇಕೆಂದು ಒತ್ತಾಯಿಸಿದರು.  

ಈ ಸಂದರ್ಭದಲ್ಲಿಅಹಿಂದ ಮುಖಂಡರಾದ ಸೋಮನಾಥ ಕಳ್ಳಿಮನಿ, ಅಸಪಾಕ ಮನಗೂಳಿ, ಸುಧಾಕರಕನಮಡಿ, ಸಂಜು ಕಂಬಾಗಿ, ಪ್ರಭುಗೌಡ ಪಾಟೀಲ, ಫಯಾಜಕಲಾದಗಿ, ದಾದಾಪೀರ ಮುಜಾವರ, ಮಲ್ಲು ಬಿದರಿ ಮುಂತಾದವರು ಇದ್ದರು.