ದೇಶಿಯತೆಯ ಚೆಲುವಿನಿಂದ ಓದುಗರ ಗಮನ ಸೆಳೆಯುತ್ತದೆ: ಬಿರಾದಾರ

ಲೋಕದರ್ಶನವರದಿ

ಧಾರವಾಡ15 : ವಡ್ಡಾರಾಧನೆ ಬರುವ ಕಥೆಗಳು ತಮ್ಮ ಶಕ್ತಿ, ಸರಳತೆ, ದೇಶಿಯತೆಯ ಚೆಲುವಿನಿಂದ ಓದುಗರ ಗಮನ ಸೆಳೆಯುತ್ತವೆ ಎಂದು ಕನರ್ಾಟಕ ವಿದ್ಯಾವರ್ಧಕ ಸಂಘವು ದಿ. ಡಾ. ಶಿವಾನಂದ ಶಾಂತಪ್ಪ ಗಾಳಿ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ `ವಡ್ಡಾರಾಧನೆಯ ಒಂದು ಅವಲೋಕನ' ವಿಷಯದ ಮೇಲೆ ಉಪನ್ಯಾಸದಲ್ಲಿ ಕಲಘಟಗಿ ಗುಡ್ನ್ಯೂಜ್ ಕಾಲೇಜಿನ ಪ್ರಾಚಾರ್ಯರಾದ ಡಾ. ಬಿ. ಜಿ. ಬಿರಾದಾರ ಹೇಳಿದರು. 

ವಡ್ಡಾರಾಧನೆ 19 ಕಥೆಗಳ ಒಂದು ಗುಚ್ಚ, ಇದೊಂದು ಮಹೋನ್ನತ ಕೃತಿಯಾಗಿದೆ, ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದ ಗಾಳಿಯವರು ಅಜಾತ ಶತ್ರುವಾಗಿದ್ದರು. ಅವರು ಧಾರವಾಡ ಜಿಲ್ಲಾ ಕ.ಸಾ.ಪ ಅಧ್ಯಕ್ಷರಾಗಿ ನಾಲ್ಕು ಅವಧಿಗೆ ಆಯ್ಕೆಯಾಗಿ ಮರೆಯಲಾಗದ ಕಾರ್ಯ ಮಾಡಿದ್ದಾರೆ. ಅವರು ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಅಪಾರವಾಗಿ ಕಾರ್ಯಮಾಡಿ ತಮ್ಮದೆ ಆದ ಕೊಡುಗೆ ನೀಡಿದ್ದಾರೆ ಎಂದು ಗಾಳಿಯವರ ಜೊತೆಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡರು. 

ಧಾರವಾಡ ಕ.ವಿ.ವಿ.ಯ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕರು ಹಾಗೂ ಅಧ್ಯಕ್ಷ  ಡಾ. ಜೆ.ಎಂ. ನಾಗಯ್ಯ ಮಾತನಾಡಿ, ವಡ್ಡಾರಾಧನೆ 2500 ಶ್ಲೋಕ ಒಳಗೊಂಡ ಮೂಲಾರಾಧನೆ, ಇದನ್ನು ಜನ ವಡ್ಡಾರಾಧನೆ ಎಂದು ಕರೆಯುತ್ತಾರೆ. ಇದರಲ್ಲಿ ಸುಕುಮಾರಸ್ವಾಮಿಯ ಕಥೆ, ಸುಕೌಶಳಸ್ವಾಮಿಯ ಕಥೆ, ಗಜಕುಮಾರನ ಕಥೆ, ಸನತ್ಕುಮಾರ ಚಕ್ರವತರ್ಿಯ ಕಥೆ, ಭದ್ರಬಾಹು ಭಟ್ಟಾರರ ಕಥೆ, ಕಾತರ್ಿಕ ಋಷಿಯ ಕಥೆ ಸೇರಿದಂತೆ 19 ಕಥೆಗಳಿದ್ದು ಇವು ಜೈನ ಧರ್ಮದ ಸಂಸ್ಕೃತಿ, ಪರಂಪರೆ ರೀತಿ, ರಿವಾಜು, ಆಚರಣೆಗಳನ್ನು ತಿಳಿಸಿಕೊಡುತ್ತವೆ. 

  ವಡ್ಡಾರಾಧನೆ ಪಂಡಿತರಿಗಷ್ಟೇ ಅಲ್ಲದೇ ಪಾಮರರಿಗೂ ಸರಳವಾಗಿ ಅರ್ಥವಾಗುವ ಕೃತಿಯಾಗಿದೆ ಎಂದು ವಡ್ಡಾರಾಧನೆಯಲ್ಲಿ ಬರುವ ಕಥೆಗಳನ್ನು ಎಳೆ ಎಳೆಯಾಗಿ ವಿವರಿಸಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ದಿ. ಡಾ. ಶಿವನಂದ ಗಾಳಿಯವರ ಭಾವಚಿತ್ರಕ್ಕೆ ಪುಷ್ಪಾರ್ಪಣೆಯೊಂದಿಗೆ ಗೌರವ ಸಲ್ಲಿಸಲಾಯಿತು. ವೇದಿಕೆ ಮೇಲೆ ದತ್ತಿದಾನಿ ಡಾ. ಜಿನದತ್ತ ಅ. ಹಡಗಲಿ ಹಾಗೂ ಸುಜಾತಾ ಹಡಗಲಿ ದಂಪತಿಗಳು ಉಪಸ್ಥಿತರಿದ್ದರು. 

        ಪ್ರಾರಂಭದಲ್ಲಿ ಸೋನಾಲಿ ಗೋಗಿ ಪ್ರಾಥರ್ಿಸಿದರು. ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ಸ್ವಾಗತಿಸಿದರು ಕೋಶಾಧ್ಯಕ್ಷ ಕೃಷ್ಣ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರಫುಲ್ಲಾ ನಾಯಕ ನಿರೂಪಿಸಿದರು. ಶಾಂತೇಶ ಗಾಮನಗಟ್ಟಿ ವಂದಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ (ಇಟಗಿ) ಕಾಯರ್ಾಧ್ಯಕ್ಷ ಶಿವಣ್ಣ ಬೆಲ್ಲದ, ಕಾ.ಕಾ. ಸಮಿತಿ ಸದಸ್ಯರಾದ ಸತೀಶ ತುರಮರಿ, ವಿಶ್ವೇಶ್ವರಿ ಹಿರೇಮಠ, ಹಾಗೂ ಡಾ. ಲಿಂಗರಾಜ ಅಂಗಡಿ, ಡಾ. ಭಜಂತ್ರಿ, ಪ್ರೊ. ಎ.ಜಿ. ಸಬರದ, ವೀರಣ್ಣ ಒಡ್ಡೀನ, ಶ್ರೀನಿವಾಸ ವಾಡಪ್ಪಿ, ಬಸಲಿಂಗಯ್ಯ ಹಿರೇಮಠ, ಜಿ. ಬಿ. ಹೊಂಬಳ, ಎಂ. ವಾಯ್. ಸಿದ್ನಾಳ ಹಾಗೂ ಗಾಳಿ ಪರಿವಾರದವರು, ಅಭಿಮಾನಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು