ಅಕ್ರಮ ಮಾವಾ ಮಾರಾಟ ಕೇಂದ್ರಗಳ ಮೇಲೆ ದಾಳಿ
Raids on illegal marijuana sales centers
ಅಕ್ರಮ ಮಾವಾ ಮಾರಾಟ ಕೇಂದ್ರಗಳ ಮೇಲೆ ದಾಳಿ
ಮುದ್ದೇಬಿಹಾಳ, 15 : ಪಟ್ಟಣದ ವಿವಿಧ ಪಾನ್ ಶಾಪ್ ಗಳು ಸೇರಿದಂತೆ ವಿವಿಧ ಕಡೆ ಅನಧೀಕೃತವಾಗಿ ಮಾವಾ ಮಾರಾಟದಲ್ಲಿ ತೊಡಗಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ವಿಜಯಪುರ ಪೋಲಿಸ್ ಸೈಬರ್ ವಿಭಾಗದ ಇಲಾಖೆ ಪೋಲಿಸರು ದಾಳಿ ನಡೆಸಿ ಮಾವಾ ತಯಾರಿಕೆ ಹಾಗೂ ಮಾರಾಟ ಮಾಡುತ್ತಿರುವ ವಸ್ತುಗಳ ಸಮೇತ ಇಬ್ಬರ ಮೇಲೆ ಪ್ರಕರಣ ದಾಳಿಸಿದ ಘಟನೆ ಮಂಗಳವಾರ ನಡೆದಿದೆ.
ಪಟ್ಟಣದಲ್ಲಿ ಹಲವು ವರ್ಷಗಳಿಂದ ಪಟ್ಟಣದಲ್ಲಿ ವಿವಿಧ ಪಾನ್ ಶಾಪ್ ಹಾಗೂ ಗೌಪ್ಯ ಸ್ಥಳದಲ್ಲಿ ಮನುಷ್ಯನ ಆರೋಗ್ಯ ದುಶ್ಪರಿಣಾಮ ಬೀರುವ ಕಳಪೆ ಮಟ್ಟದ ತಂಬಾಕು ಹಾಗೂ ಇತರೇ ವಸ್ತುಗಳನ್ನು ಬಳಸಿ ಮಾವಾ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಹದಿ ಹರೆಯದ ಯುವಕರು ಸೇರಿದಂತೆ ಸಾವಿರಾರು ಜನ ಮದ್ಯಮ ವಯಸ್ಸಿನವರು ಈ ಮಾವಾ ಖರಿಧಿಸಿ ಸೇವನೆ ಮಾಡಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವ ಘಟನೆಗಳು ಕೇಳಿಬಂದಿದ್ದವು.
ಈ ಹಿನ್ನೇಲೆಯಲ್ಲಿ ವಿಯಪುರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರ ಆದೇಶದಂತೆ ವಿಜಯಪುರ ಜಿಲ್ಲಾ ಹೆಚ್ಚುವರಿ ಪೋಲಿಸ್ ಅಧೀಕ್ಷಕರಾದ ರಾಮನಗೌಡ ಹಟ್ಟಿ, ರವರ ಮಾರ್ಗದರ್ಶನದಲ್ಲಿ ಸೈಬರ್ ವಿಭಾಗದ ಪೊಲೀಸ್ ಠಾಣೆಯ ಡಿಎಸ್‌ಪಿ ಸುನೀಲ ಕಾಂಬಳೆ, ಪಿ.ಐ ರವಿ ಯಡವನ್ನವರ, ನೇತೃತ್ವದಲ್ಲಿ ಪಟ್ಟಣದ ಪಾನ್ ಶಾಪ್ ಗಳು ಸೇರಿದಂತೆ ಇತರೆ ಕಡೆಗಳಲ್ಲಿ ದಾಳಿ ನಡೆಸಿ ಸಂಗಮೇಶ ನಗರ ಬಡಾವಣೆಯಲ್ಲಿ ಮಾರಾಟ ಮಾಡುತ್ತಿದ್ದ ಖುದಾನಸಾಬ ಪಡೇಕನೂರ, ರಮೇಶ ಗಣಪ್ಪ ಪೂಜಾರಿ ಎನ್ನುವರ ಅಂಗಡಿಗಳು ಸೇರಿದಂತೆ ಪಾನ್ ಶಾಪ್ ಗಳು, ಇತರೇ ಕಡೆಗಳಲ್ಲಿ ದಾಳಿ ನಡೆಸಿ 11,200, 14 ಕೆಜಿ ಕಚ್ಚಾ ಮಾವಾ, 6.210 ರೂಗಳ ವೆಚ್ಚದ 175 ಕೆಜಿ ತಯಾರಿಸಿದ ಮಾವಾ (207 ಪ್ಯಾಕೇಟ್‌ಗಳು) ಅಡಿಕೆ ಚೂರು 12 ಕೆಜಿ, ತಂಬಾಕು 5.8 ಕೆಜಿ, ಸುಣ್ಣದ ಡಬ್ಬಿ 300 ಗ್ರಾಂ, ಮಿಕ್ಸರ್ ಯಂತ್ರ, ಡಿಜಿಟಲ್ ತೂಕದ ಯಂತ್ರ ಸೇರಿದಂತೆ ಸುಮಾರು 27,840 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಈ ಕುರಿತು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ಮಾಹಿತಿಗಾಗಿ ತನಿಖೆ ಕೈಗೊಂಡಿದ್ದಾರೆ.
ಈ ವೇಳೆ ಎಎಸ್‌ಐ ಗಳಾದ ಬಿ.ಎಮ್. ಪವಾರ, ವಾಯ್.ಎಸ್.ಜಮಖಂಡಿ, ಪಿ.ಎಮ್.ಟಕ್ಕೋಡ, ಎಸ್.ಬಿ.ಬಿರಾದಾರ, ಆರ್.ಐ.ಲೋಣಿ, ಆರ್.ಡಿ.ಅಂಜುಟಗಿ, ಅಬುಬಕರ ಗದ್ಯಾಳ, ಡಿ.ಆರ್.ಪಾಟೀಲ, ಎಸ್.ಆರ್.ಬಡಚಿ ಸೇರಿದಂತೆ ಹಲವರು ದಾಳಿಯಲ್ಲಿ ಪಾಲ್ಗೊಂಡಿದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 