ಸ್ವಾರ್ಥಿ ಪತ್ನಿಗೆ ಶೀಘ್ರ ವಿಚ್ಛೇದನ: ಮುಲಾಯಂ ಪುತ್ರ ಪ್ರತೀಕ್
Quick divorce for selfish wife: Mulayam's son Prateek
ಲಕ್ನೋ: ಕುಟುಂಬದೊಳಗಿನ ಸಂಬಂಧಗಳನ್ನು ಹಾಳು ಮಾಡಿರುವ ಪತ್ನಿಗೆ ಅಪರ್ಣಾ ಯಾದವ್ ಗೆ (ಬಿಜೆಪಿ ನಾಯಕಿ) ಶೀಘ್ರವೇ ವಿಚ್ಛೇದನ ನೀಡುವುದಾಗಿ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಸೋದರ, ಮುಲಾಯಂ ಸಿಂಗ್ 2ನೇ ಪತ್ನಿ ಪುತ್ರನಾಗಿರುವ ಪ್ರತೀಕ್ ಯಾದವ್ ಘೋಷಿಸಿರುವುದಾಗಿ ವರದಿ ತಿಳಿಸಿದೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪರ್ಣಾ ಫೋಟೊವನ್ನು ಪೋಸ್ಟ್ ಮಾಡಿ, ಕುಟುಂಬದ ಸಂಬಂಧ ನಾಶ ಮಾಡಿದವಳು, ಸ್ವಾರ್ಥಿಯಾಗಿರುವ ಈಕೆ ತುಂಬಾ ಕೆಟ್ಟ ಮನಸ್ಥಿತಿಯನ್ನು ಹೊಂದಿರುವುದಾಗಿ ಪ್ರತೀಕ್ ಆರೋಪಿಸಿದ್ದಾರೆ.
“ನಾನು ಆದಷ್ಟು ಶೀಘ್ರ ಈ ಸ್ವಾರ್ಥಿ ಮಹಿಳೆ(ಪತ್ನಿ)ಗೆ ವಿಚ್ಛೇದನ ನೀಡುತ್ತೇನೆ. ಈಕೆ ನಮ್ಮ ಕುಟುಂಬದೊಳಗಿನ ಸಂಬಂಧವನ್ನೇ ಹಾಳುಗೆಡವಿದ್ದಾಳೆ. ತಾನು ಜನಪ್ರಿಯಳಾಗಬೇಕೆಂಬ ಬಯಕೆಯಿಂದ ಅಪರ್ಣಾ ಯಾರನ್ನೂ, ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ನಾನೆಂದು ಇಂತಹ ಕೆಟ್ಟ ಮನಸ್ಥಿತಿಯವರನ್ನು ಕಂಡಿಲ್ಲ. ನನ್ನ ದುರಾದೃಷ್ಟಕ್ಕೆ ನಾನು ಈಕೆಯನ್ನು ವಿವಾಹವಾಗಿದ್ದೇನೆ ಎಂದು ಪ್ರತೀಕ್” ಅಳಲು ತೋಡಿಕೊಂಡಿರುವುದಾಗಿ ವರದಿ ವಿವರಿಸಿದೆ.
ಈತನ್ಮಧ್ಯೆ ಅಪರ್ಣಾ ಸೋದರ ಅಮಾನ್ ಬಿಸತ್, ಪ್ರತೀಕ್ ಅವರ ಇನ್ಸ್ಟಾಗ್ರಾಮ್ ಹ್ಯಾಕ್ ಆಗಿರುವುದಾಗಿ ಸಮಜಾಯಿಷಿ ನೀಡಿದ್ದಾರೆ. ಪ್ರತೀಕ್ ಯಾದವ್ ಮತ್ತು ಅಪರ್ಣಾ 2011ರಲ್ಲಿ ವಿವಾಹವಾಗಿದ್ದು, ದಂಪತಿಗೆ ಒಬ್ಬಳು ಮಗಳಿದ್ದಾಳೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 