ದುರ್ಗಾದೇವಿಯ ಪುರಾಣ ಮಂಗಲೋತ್ಸವ, ಆಕರ್ಷಣೆಗೊಂಡ ಅಂಬಾರಿ ಮೆರವಣಿಗೆ

ಲೋಕದರ್ಶನ ವರದಿ

ಯಲಬುರ್ಗಾ : ಪಟ್ಟಣದಲ್ಲಿ ವಿಜಯ ದುರ್ಗಾದೇವಿ ಜಾತ್ರೆ ನಿಮಿತ್ತ ಮಂಗಳವಾರ ಪುರಾಣ ಮಹಾ ಮಂಗಳಗೊಂಡಿತು. ಬೆಳಗ್ಗೆ ದೇವಿಗೆ ವಿಶೇಷ ಪೂಜೆ ನಡೆಯಿತು. ಶ್ರೀಧರ ಮುರಡಿ ಹಿರೇಮಠದ ಬಸಲಿಂಗೇಶ್ವರ ಸ್ವಾಮೀಜಿ ಹಾಗೂ ಸಂಸ್ಥಾನ ಹಿರೇಮಠದ ಸಿದ್ಧರಾಮೇಶ್ವರ ಸ್ವಾಮೀಜಿ ಅವರು, ಅಂಬಾರಿ ಮೆರವಣಿಗೆಗೆ ಚಾಲನೆ ನೀಡಿದರು.ಕುಂಭ, ಕಳಸ, ಡೊಳ್ಳು ಕುಣಿತ, ವೀರಗಾಸೆ ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ನಂತರ ಅನ್ನಸಂತರ್ಪಣೆ ನಡೆಯಿತು. ಸುತ್ತಮುತ್ತಲಿನ ಗ್ರಾಮಗಳಾದ ಸಂಗನಾಳ, ಹೊಸಳ್ಳಿ, ಕಲ್ಲೂರು, ರಾಜೂರು, ಮುಧೋಳ, ಗೆದಗೇರಿ, ಚಿಕ್ಕಮ್ಯಾಗೇರಿ ಗ್ರಾಮದಿಂದ ಭಕ್ತರು ಆಗಮಿಸಿ, ದೇವಿ ದರ್ಶನ ಪಡೆದರು.ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಪ್ರಮುಖರಾದ ವೀರಣ್ಣ ಹುಬ್ಬಳ್ಳಿ, ಪಪಂ ಸದಸ್ಯ ಅಂದಯ್ಯ ಕಳ್ಳಿಮಠ, ಸಿದ್ದರಾಮೇಶ ಬೆಲೇರಿ, ದೇವಸ್ಥಾನ ಸಮಿತಿ ಅಧ್ಯಕ್ಷ ಬಸಪ್ಪ ಕಮ್ಮಾರ್, ಮುಖಂಡರಾದ ಅಂದಾನಗೌಡ ಉಳ್ಳಾಗಡ್ಡಿ, ಶಿವಬಸಪ್ಪ ಗಡಾದ್, ಅಮರಪ್ಪ ಕಲಬುಗರ್ಿ, ಸಂಗಣ್ಣ ಟೆಂಗಿನಕಾಯಿ, ವಿರೂಪಾಕ್ಷಯ್ಯ ಗಂಧದ, ಸಂಗಪ್ಪ ಕೊಪ್ಪಳ, ಕೊಟ್ರಪ್ಪ ಚವಡಿ, ಸಂಗಪ್ಪ ಹಳ್ಳಿ, ಸಂಗಪ್ಪ ರಾಮತಾಳ್ ಝೆಡ್ ಫಕೀರಪ್ಪ ಉಪ್ಪಾರ, ಕಳಕಪ್ಪ ಕೊತ್ತಲ, ಶರಣಪ್ಪ ಹೊಸಳ್ಳಿ, ಸುರೇಶ ಬಡಿಗೇರ, ಸುರೇಶ ಬಡಿಗೇರ, ಮಲ್ಲನಗೌಡ ಹೊಸಮನಿ ಹಾಗೂ ಪೊಲೀಸ್ ಸಿಬ್ಬಂದಿಗಳು ಸೇರಿ ನೂರಾರು ಭಕ್ತಾದಿಗಳಿದ್ದರು.