ಲೋಕದರ್ಶನ ವರದಿ
ಹುಬ್ಬಳ್ಳಿ 12: ಹಾಲು ಉತ್ಪಾದಕರ ಸಹಕಾರ ಸಂಘಗಳು ಸಾಮಾಜಿಕ ಸೇವೆ ನೀಡುವಲ್ಲಿ ಸನ್ನದ್ದರಾಗಬೇಕು. ಖಾಸಗಿ ಹೈನುಗಾರಿಕೆಗಳ ಹಾವಳಿ ಹೆಚ್ಚಾಗದಂತೆ ಅವುಗಳ ನಿಯಂತ್ರಣವನ್ನು ಮಾಡಲು ಎಲ್ಲರೂ ಶ್ರಮಿಸಬೇಕೆಂದು ಎಂದು ಹುಬ್ಬಳ್ಳಿ, ಕುಂದಗೋಳ ಹಾಗೂ ಕಲಘಟಗಿ ತಾಲೂಕುಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದಶರ್ಿಗಳ ಧಾರವಾಡ ಹಾಲು ಒಕ್ಕೂಟದ ನಿದರ್ೇಶಕರಾದ ಜಿ.ಎಂ.ಮೊರಬದ ಹೇಳಿದರು.
ಅವರು ವಿಶೇಷ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯದಶರ್ಿಗಳು ತಮ್ಮ ಸಂಘದ ಏಳಿಗೆಗೆ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ತಿಳಿಯಲು ಆರಂಭದ ಕೊರತೆಯಿದ್ದು ಸಂಘದ ದಿನ ನಿತ್ಯದ ವ್ಯವಹಾರಗಳನ್ನು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಇಂತಹ ತರಬೇತಿಯ ಅವಶ್ಯಕತೆ ಬಹು ಮುಖ್ಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಧಾರವಾಡ ಹಾಲು ಒಕ್ಕೂಟದ ನಿದರ್ೇಶಕರಾದ ವಾಯ್.ಬಿ. ದಾಸನಕೊಪ್ಪಅವರು ಮಾತನಾಡುತ್ತಾ ಅವಿದ್ಯಾವಂತ ಯುವಕರು. ಮಹಿಳೆಯರು ಸಹಕಾರ ಕ್ಷೇತ್ರದಿಂದ ತಮ್ಮನ್ನು ಗುರುತಿಸಿಕೊಳ್ಳಲು ಅನೇಕ ಅವಕಾಶಗಳುಂಟು .
ಗ್ರಾಮೀಣ ಪ್ರದೇಶದ ಮಹಿಳೆಯರು ಸಂಘಟಿತರಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸಿಕೊಂಡು ತಮ್ಮ ಆಥರ್ಿಕ ಅಭಿವೃದ್ಧಿಯನ್ನು ಹೊಂದುವುದರ ಜೊತೆಗೆ ಸಮುದಾಯದ ಅಭಿವೃದ್ಧಿ ಹೊಂದಲು ಪ್ರಯತ್ನಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಧಾರವಾಡ ಜಿಲ್ಲಾ ಸಹಕಾರಯೂನಿಯನ್ ಮತ್ತು ಕೆ.ಸಿ.ಸಿ.ಬ್ಯಾಂಕಿನ ಅಧ್ಯಕ್ಷರಾದ ಬಾಪುಗೌಡ ಡಿ. ಪಾಟೀಲ ಅವರು ಹಾಲು ಒಕ್ಕೂಟಕ್ಕೆ ಸಂಗ್ರಹಣೆಯಾಗುವ ಹಾಲು ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಸಾಲದಾಗಿದೆ.ಇದರಕೊರತೆಯನ್ನು ನೀಗಿಸಲು ಹೆಚ್ಚಿನದರತೆತ್ತು ಹೊರಗಿನಿಂದ ಹಾಲು ಖರೀದಿಸುವ ಪರಿಸ್ಥಿತಿ ಬಂದೊದಗಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳು ತಮ್ಮ ಸದಸ್ಯರಿಗೆ ಸುಧಾರಿಸಿದ ಹೈನುಗಾರಿಕೆಯ ಬಗ್ಗೆ ತಿಳುವಳಿಕೆ ನೀಡಿ ಹೆಚ್ಚು ಹಾಲು ಉತ್ಪಾದನೆ ಮತ್ತು ಸಂಗ್ರಹಣೆಗೆ ಕಾರಣಿ ಬೂತರಾಗಬೇಕೆಂದು ಈ ವಿಶೇಷ ತರಬೇತಿ ಶಿಬಿರದಲ್ಲಿ ವಿಷಯ ತಜ್ಞರುಗಳಿಂದ ಉಪನ್ಯಾಸ ತಿಳಿ ಹೇಳಿದರು.
ಜಿಲ್ಲಾ ಸಹಕಾರಿಯೂನಿಯನ್ದ ಮುಖ್ಯಕಾರ್ಯ ನಿರ್ವಹಣಾಧಿಕಾರಗಳಾದ ಆನಂದ ತಳವಾರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಕೊನೆಯಲ್ಲಿ ಸವಿತಾ ಹಿರೇಮಠ ವಂದಿಸಿದರು.ಕಾರ್ಯಕ್ರಮವನ್ನು ಕನರ್ಾಟಕರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಹಾಗೂ ಧಾರವಾಡಜಿಲ್ಲಾ ಸಹಕಾರಯೂನಿಯನ್ ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿತ್ತು.
ಧಾರವಾಡ ಹಾಲು ಒಕ್ಕೂಟದ ನಿದರ್ೇಶಕರಾದ ಜಿ.ಎಂ.ಮೊರಬದಅವರು ಹುಬ್ಬಳ್ಳಿ, ಕುಂದಗೋಳ ಹಾಗೂ ಕಲಘಟಗಿ ತಾಲೂಕುಗಳ ಹಾಲು ಉತ್ಪಾಧಕರ ಸಹಕಾರ ಸಂಘಗಳ ಕಾರ್ಯದಶರ್ಿಗಳ ಜಿಲ್ಲಾ ವಿಶೇಷ ತರಬೇತಿ ಶಿಬಿರದ ಉದ್ಘಾಟಿಸುತ್ತಿರುವರು. ಕೆ.ಸಿ.ಸಿ. ಬ್ಯಾಂಕಿನಅಧ್ಯಕ್ಷರಾದ ಬಾಪುಗೌಡ ಡಿ. ಪಾಟೀಲ, ವಾಯ್.ಬಿ. ದಾಸನಕೊಪ್ಪ, ಎಸ್.ಎನ್. ರಾಯನಾಳ, ರಂಗಸ್ವಾಮಿ ಮತ್ತುಎಂ.ಜಿ.ಪಾಟೀಲ ಉಪಸ್ಥಿತರಿರುವರು.