38 ವರ್ಷಗಳ ಬಳಿಕ ಮುಸ್ಲಿಂ ಪ್ರತಿನಿಧಿಯಾಗಿ ಆಯ್ಕೆ: ಪ್ರೀರಾ ಖಾದಿ
Preera Khadi elected as Muslim representative after 38 years
ಲೋಕದರ್ಶನ ವರದಿ
ಜಮಖಂಡಿ 8 : ನಗರದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನೂತನ ನೂತನ ಅಧ್ಯಕ್ಷರಾಗಿ ಪ್ರೀರಾ ಖಾದ್ರಿ ಮತ್ತು ಮಾರುತಿ ಮಾನೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷ ಪ್ರೀರಾ ಖಾದ್ರಿ ಮಾತನಾಡಿ, 38 ವರ್ಷಗಳ ಬಳಿಕ ಮುಸ್ಲಿಂ ಸಮುದಾಯದ ಪ್ರತಿನಿಧಿಯಾಗಿ ನಾನು ಅಧ್ಯಕ್ಷರಾಗಿದ್ದೇನೆ. ನಮ್ಮ ನೂತನ ಆಡಳಿತ ಮಂಡಳಿಯವರು ಬ್ಯಾಂಕಿನ ಸೇವೆಯನ್ನು ಮತ್ತು ರೈತರ ಪರವಾಗಿ ಪ್ರಾಮಾಣಿಕವಾಗಿ ಕೆಲಸವನ್ನು ಮಾಡುತ್ತೇನೆ. ಉನ್ನತ ಮಟ್ಟಕ್ಕೆ ಬ್ಯಾಂಕ್ ಅಭಿವೃದ್ದಿಗೆ ಮಾಡಲು ಬದ್ಧವಾಗಿದೆ. ಗ್ರಾಮೀಣ ಅಭಿವೃದ್ಧಿ ಮತ್ತು ಕೃಷಿ ಕ್ಷೇತ್ರದಲ್ಲಿ ಉತ್ತಮ ಸೇವೆ ನೀಡುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದರು.ಇದೇ ಸಂದರ್ಭದಲ್ಲಿ ರಾಹುಲ ಕಲೂತಿ, ಸುಶೀಲಕುಮಾರ ಬೆಳಗಲಿ, ಎಸ್ಪಿ ನೀಲೆ, ಸಂತೋಷ ಬೋಸಲೆ, ಮುಕುಬುಲ್ ಅಥಿಕರ, ಫಕೀರಸಾಬ್ ಭಗವಾನ, ಅಪ್ಪಸಾಬ ಮನಗೂಳಿ, ಸಾಧಿಕ್ ಪಂಡಾರಿ ಮತ್ತು ಗಫುರ್ ಪಾರ್ಥನಳ್ಳಿ ಸೇರಿದಂತೆ ಅನೇಕರು ಇದ್ದರು.ಪೋಟೋ : ಜಮಖಂಡಿ ನಗರದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನೂತನ ನೂತನ ಅಧ್ಯಕ್ಷರಾಗಿ ಪ್ರೀರಾ ಖಾದ್ರಿ ಮತ್ತು ಮಾರುತಿ ಮಾನೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 