ದೆಹಲಿಯಲ್ಲಿ ನಡೆಯಲಿರುವ ‘ಲೈನ್‌ಮನ್ ದಿವಸ’ ಕ್ಕೆ ಉಗಾರ ಹೆಸ್ಕಾಂ ಉಪವಿಭಾಗದ ಪವರ್‌ಮನ್ ಆನಂದ ಹೇರವಾಡೆ ಆಯ್ಕೆ..!
Powerman Anand Herwade of Ugara Hescom sub-division has been selected for the 'Lineman's Day' to be
ದೆಹಲಿಯಲ್ಲಿ ನಡೆಯಲಿರುವ ‘ಲೈನ್‌ಮನ್ ದಿವಸ’ ಕ್ಕೆ ಉಗಾರ ಹೆಸ್ಕಾಂ ಉಪವಿಭಾಗದ ಪವರ್‌ಮನ್ ಆನಂದ ಹೇರವಾಡೆ ಆಯ್ಕೆ..!
ಕಾಗವಾಡ 19 : ತಾಲೂಕಿನ ಉಗಾರ ಹೆಸ್ಕಾಂ ಉಪ ವಿಭಾಗದ ಪವರ್‌ಮನ್ ಆನಂದ ಆರ್. ಹೇರವಾಡೆ ದೆಹಲಿಯಲ್ಲಿ ಮಾ. 04 ರಂದು ನಡೆಯಲಿರುವ ಲೈನ್‌ಮನ್ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ರಾಜ್ಯದಿಂದ ಆಯ್ಕೆಗೊಂಡಿರುವ ಐವರ ಪೈಕಿ ಇವರು ಒಬ್ಬರಾಗಿದ್ದಾರೆ. ಕೇಂದ್ರ ವಿದ್ಯುತ್ ಪ್ರಾಧಿಕಾರದ ವತಿಯಿಂದ ದೆಹಲಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳ ವಿದ್ಯುತ್ ಇಲಾಖೆಯ ಅಧಿಕಾರಗಳು ಮತ್ತು ಲೈನ್‌ಮನ್‌ಗಳು ಭಾಗವಹಿಸಲಿದ್ದು, ಕರ್ನಾಟಕದಿಂದ 5 ಜನರು ಆಯ್ಕೆಗೊಂಡಿದ್ದಾರೆ. ಈ ಪೈಕಿ ಬೆಳಗಾವಿ ಗ್ರಾಮಾಂತರ ಕಾಕತಿ ಹೆಸ್ಕಾಂ ಉಪವಿಭಾಗದ ಗ್ರೇಡ್-2 ಮೆಕ್ಯಾನಿಕ್ ಉತ್ತಮ ಕುಮನಾಚೆ ಮತ್ತು ಉಗಾರ ಹೆಸ್ಕಾಂ ಉಪವಿಭಾಗದ ಪವರ್‌ಮನ್ ಆನಂದ ಹೇರವಾಡೆ ಬೆಳಗಾವಿ ಜಿಲ್ಲೆಯಿಂದ ಆಯ್ಕೆಗೊಂಡಿದ್ದು ಜಿಲ್ಲೆಯ ಹೆಸ್ಕಾಂನ 659 ಸಂಘಟನೆಯ ಕಾರ್ಯದರ್ಶಿ ಮಾರುತಿ ದೊಡಮನಿ ಮತ್ತು ಪದಾಧೀಕಾರಿಗಳು ಅಭಿನಂದಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 