ಬ್ಲಾಕ್‌ಓಟ್ ಅಭ್ಯಾಸದ ಅಣಕು ಕಾರ್ಯಾಚರಣೆ ಪೋಲಿಸರಿಂದ ಜಾಗೃತಿ

Police conduct mock operation to raise awareness about blackout practice

ಬ್ಲಾಕ್‌ಓಟ್ ಅಭ್ಯಾಸದ ಅಣಕು ಕಾರ್ಯಾಚರಣೆ ಪೋಲಿಸರಿಂದ ಜಾಗೃತಿ

ಶಿಗ್ಗಾವಿ 16 : ಪಟ್ಟಣದ ರಾಣಿಚನ್ನಮ್ಮ ವೃತ್ತದಲ್ಲಿ ವಾರದ ಸಂತೆ ದಿನವಾದ ಬುಧವಾರ ರಾತ್ರಿ 8 ಗಂಟೆಗೆ ಸೈರನ್ ಸದ್ದು ಮೊಳಗುತ್ತಿದ್ದಂತೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ವ್ಯಾಪಾರಿಗಳು, ಸಾರ್ವಜನಿಕರು ಗಾಬರಿಯಿಂದ ಪೊಲೀಸ ವಾಹನದ ಕಡೆಗೆ ಜಮಾಯಿಸಿದರು.   ತಹಶೀಲ್ದಾರ ರವಿಕುಮಾರ ಕೊರವರ ಮಾತನಾಡಿ ಆಪರೇಷನ್ ಸಿಂಧೂರ ನಂತರ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಮುಂಬರುವ ತುರ್ತು ಪರಿಸ್ಥಿತಿಗಳನ್ನು ಜನಸಾಮಾನ್ಯರು ಎದುರಿಸಲು ಸಿದ್ದರಾಗುವಂತೆ ಮಾಡಲು ಮುಂಜಾಗೃತಾ ಕ್ರಮವಾಗಿ ಪಟ್ಟಣದಲ್ಲಿ ಬ್ಲಾಕ್‌ಓಟ್ ಆಪರೇಷನ್ ಅಭ್ಯಾಸದ ಅಣಕು ಕಾರ್ಯಾಚರಣೆಯನ್ನು ಜಿಲ್ಲಾಡಳಿತ ಮತ್ತು ಪುರಸಭೆ ಸಂಯೋಗದಲ್ಲಿ ಯಶಸ್ವಿಯಾಗಿ ಆಚರಿಸಲಾಗಿದೆ. ಪಟ್ಟಣದಲ್ಲಿ ರಾತ್ರಿ 8 ಗಂಟೆಯಿಂದ 8-15ರವರೆಗೆ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿತ್ತು. ಯುಪಿಯಸ್ ಬಳಕೆದಾರರು ಮತ್ತು ವಾಹನ ಸವಾರರು ಲೈಟ್‌ಗಳನ್ನು ಆರಿಸುವ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು ಎಂದು ಹೇಳಿದರು.   ಈ ಸಂದರ್ಭದಲ್ಲಿ ಡಿ.ವಾಯ್‌.ಎಸ್‌.ಪಿ. ಗುರುಶಾಂತಪ್ಪಾ ಕೆ.ವಿ. ಪಿ.ಎಸ್‌.ಆಯ್ ಎಸ್‌.ಬಿ.ಮಾಳಗೊಡ, ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ, ಪೊಲೀಸ ಇಲಾಖೆಯ ಹರೀಶ ಕರಜಗಿ, ಸಂಜೀವ ರಾಯಣ್ಣವರ, ಮಂಜುನಾಥ ಮಣ್ಣಣ್ಣವರ, ಮುಕ್ತಿಯಾರ ತಿಮ್ಮಾಪುರ, ರಹೀಂ ಮಲ್ಲೂರ ಇತರರಿದ್ದರು.