ಪಠ್ಯೇತರ ಚಟುವಟಿಕೆಗಳಿಂದ ಶರೀರ ಸದೃಢ: ಯತೀಶ್ವರಾನಂದಶ್ರೀ

ಲೋಕದರ್ಶನ ವರದಿ

ಶೇಡಬಾಳ 02: ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವದರಿಂದ ಕಟ್ಟುಮಸ್ತಾದ ಶರೀರದೊಂದಿಗೆ ಆರೋಗ್ಯವಂತರಾಗಿರುತ್ತಿರಿ. ಎಲ್ಲಿ ಸದೃಢ ಶರೀರ ಇರುತ್ತದೆಯೋ ಅಲ್ಲಿ ಸದೃಢ ಮನಸ್ಸು ಇರುತ್ತದೆ ಎಂದು ಕಾಗವಾಡ ಗುರುದೇವಾಶ್ರಮದ ಏಕನ್ಯಾಸಧಾರಿ ಯತೀಶ್ವರಾನಂದ ಸ್ವಾಮಿಜಿ ಹೇಳಿದರು.

ಅವರು ಶುಕ್ರವಾರ ದಿ. 1ರಂದು ಕಾಗವಾಡ ಪಟ್ಟಣದ ಶಿವಾನಂದ ಇಂಗ್ಲಿಷ್ ಮೇಡಿಯಂ ಸ್ಕೂಲ್ನಲ್ಲಿ ಜಿಲ್ಲಾ ಪಂಚಾಯತ ಬೆಳಗಾವಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಮಲ್ಲಿಕಾರ್ಜುನ ಆಶ್ರಮ ಟ್ರಸ್ಟ್ ಹಾಗೂ ಬೆಳಗಾವಿ ಜಿಲ್ಲಾ ರಾಣಿ ಚೆನ್ನಮ್ಮ ಸೆಲ್ಫ್ ಡಿಫೆನ್ಸ್ ಮತ್ತು ಕರಾಟೆ ಸ್ಪೋಟ್ಸ್  ಅಸೋಸಿಯೆಶನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ತಾಲೂಕಾ ಮಟ್ಟದ ಕರಾಟೆ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ವಿದ್ಯಾರ್ಥಿಗಳು ಕ್ರೀಡಾಕೂಟಗಳಲ್ಲಿ ಭಾಗವಹಿಸುವಾಗ ಗೆಲ್ಲುವ ಛಲ ನಿಮ್ಮದಾಗಿರಲಿ. ದ್ವೇಷ, ಅಸೂಹೆಗೆ ಆಸ್ಪದ ನೀಡಬೇಡಿ. ನಿಣರ್ಾಯಕರು ನಿಸ್ವಾರ್ಥದಿಂದ ನಿರ್ಣಯ ಕೈಗೊಳ್ಳುವಂತೆ ಕರೆ ನೀಡಿದರು. 

ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ವಲಯದ ದೈಹಿಕ ಪರಿವೀಕ್ಷಕ ಎಂ.ವಾಯ್.ಪೂಜಾರಿ, ಶಿವಾನಂದ ಕಾಲೇಜ ಕಾರ್ಯದರ್ಶಿ ಬಿ.ಎ.ಪಾಟೀಲ, ಬೆಳಗಾವಿ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಂತೋಷ, ಬೆಳಗಾವಿ ಜಿಲ್ಲಾ ರಾಣಿ ಚೆನ್ನಮ್ಮ ಸೆಲ್ಫ್ ಡಿಫೆನ್ಸ್ ಮತ್ತು ಕರಾಟೆ ಸ್ಪೋಟ್ಸ್  ಅಸೋಸಿಯೆಶನ್ ಅಧ್ಯಕ್ಷ ರಾಜು ಪಾಟೀಲ ಮೊದಲಾದವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. 

ಕಾರ್ಯಕ್ರಮಕ್ಕೆ ಮುಂಚೆ ಸರಸ್ವತಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಸಿಗೆ ನೀರು ಹಾಕಿ ಮೈದಾನಕ್ಕೆ ಪೂಜೆ ಸಲ್ಲಿಸುವದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. 

ಎಂ.ವಾಯ್.ಪೂಜಾರಿ, ಆರ್.ಸಂತೋಷ, ನಿರ್ದೇಶಕರಾದ ಅನಿಲ ಭಜಂತ್ರಿ, ಕಿರಣ ಭಜಂತ್ರಿ, ರೋಹಿತ ಮಾಳಿ, ಕುಮಾರ ಭಜಂತ್ರಿ, ಅಭಿಷೇಕ ಅನೂರೆ, ದೀಪಕ ಪಾಟೀಲ, ಪ್ರೀಯಂಕಾ ಪಾಟೀಲ, ಪ್ರಶಾಂತ ಅಗಸರ, ಚೇತನ ಭಜಂತ್ರಿ, ಗಣೇಶ ಸಾಳುಂಕೆ, ಕಾಂಬಳೆ ಶಾಲೆಗಳ ದೈಹಿಕ ಶಿಕ್ಷಕರು, ನಿರ್ಣಾಯಕರು, ಕೋಚ್ಗಳು ಕರಾಟೆ ಪಟುಗಳು ಅಪಾರ ಸಂಖ್ಯೆಯಲ್ಲಿ ಇದ್ದರು.

ಮುಖ್ಯಾಧ್ಯಾಪಕ ಎಸ್.ಆರ್.ಪಂಡರಾಪೂರೆ ಸ್ವಾಗತಿಸಿದರು. ಎಸ್.ಎಂ.ಘರ್ೋಪಡೆ ವಂದಿಸಿದರು. ಬಿ.ಬಿ.ಪಾಟೀಲ ಮತ್ತು ಎಂ.ಆರ್. ಮಗದುಮ ನಿರೂಪಿಸಿದರು