ಪಾಲಕರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ: ದುದಗಿ
Parents should emphasize on children's education: Dudagi
ಪಾಲಕರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ: ದುದಗಿ
ಜಮಖಂಡಿ 06: ಮಕ್ಕಳ ಶಿಕ್ಷಣಕ್ಕೆ ಶಾಲಾ ಶಿಕ್ಷಕರಷ್ಟೆ ಅಲ್ಲ ಪಾಲಕರದ್ದು ಜವಾಬ್ದಾರಿಯಾಗಿದೆೆ. ಪಾಲಕರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಮುಖ್ಯಶಿಕ್ಷಕಿ ಪಿ.ಎಚ್.ದುದಗಿ ಹೇಳಿದರು. ನಗರದ ಸರಕಾರಿ ಹಿರಿಯ ಪ್ರಾಥಮಿಕ ಮಹಾಂತೇಶನಗರ ಶಾಲೆಯಲ್ಲಿ 2025-26ನೇ ಸಾಲಿನ ಪ್ರೋತ್ಸಾಹದಾಯಕ ಯೋಜನೆಅಡಿಯಲ್ಲಿ ಮಕ್ಕಳಿಗೆ ಸಮವಸ್ತ್ರ ವಿತರಣೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಲೆಗೆ ಮಕ್ಕಳು ದೈನಂದಿನ ಶಾಲಾ ತರಗತಿಗಳಲ್ಲಿ ಭಾಗವಹಿಸುವದರಿಂದ ಅವರಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಳವಾಗುತ್ತದೆ, ಅದಕ್ಕೆ ಪಾಲಕರು ತಮ್ಮ ಮಕ್ಕಳ ಭವಿಷ್ಯ ಶೈಕ್ಷಣಿಕವಾಗಿ ಸುಧಾರಿಸಿಕೊಳ್ಳುವ ಕಟ್ಟು ನಿಟ್ಟು ಹಾಕಿಕೊಳ್ಳಬೇಕು. ಪ್ರತಿ ವರ್ಷ ಸರಕಾರ ಮಕ್ಕಳಿಗಾಗಿ ಉಚಿತ ಸಮವಸ್ತ್ರ ವಿತರಿಸುತ್ತಿದ್ದು ಅದನ್ನು ಪಡೆದು ಮಕ್ಕಳು ಶಿಕ್ಷಣ ಜೊತೆಗೆ ಶಿಸ್ತು ಕಾಪಾಡಿಕೊಳ್ಳಬೇಕು ಎಂದರು. ಸರಕಾರಿ ಪ್ರೌಢಶಾಲೆಯ ನಿವೃತ್ ಮುಖ್ಯ ಶಿಕ್ಷಕ ಸಿ.ಎಸ್ ಪಾಟೀಲ ಹಾಗೂ ಕಾನಿಪ ಅಧ್ಯಕ್ಷ ಲಕ್ಷ್ಮೀಕಾಂತ ದುದಗಿ, ವಿಜಯಲಕ್ಷ್ಮೀ ದುದಗಿ ಅವರನ್ನು ಸನ್ಮಾನಿಸಿದರು. ವೇದಿಕೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷೆ ಮಹಾದೇವಿ ತೆಳಗಡೆ, ಜಿಲಾನಿ ಶೇಖ್, ಹಣಮಂತ ಶಿವನಕ್ಕನವರ, ಎಸ್.ಎಸ್.ಹುಡೇದ, ಆರ್.ಜಿ ಪಂಚಾಳ, ಎಮ್,ಎಸ್,ಹಲಗಲಿ, ಐ.ಜಿ. ಮಾಗಿ, ಕೆ.ಜಿ. ಭಸ್ಮೆ, ಆರ್.ವ್ಹಿ. ಇಂಗಳಗಿ, ರೋಹಿಣಿ ಮಾಳಿ, ದೀಪಾ ಗಾಯಕವಾಡ ಇತರರು ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 