ಪಂಚಕಲ್ಯಾಣ ಮಹೋತ್ಸವ: ತೀರ್ಥಂಕರರ ಜನ್ಮ ಕಲ್ಯಾಣ ಮಹೋತ್ಸವ

ಲೋಕದರ್ಶನ ವರದಿ

ಬೆಳಗಾವಿ.1: ಬೆಳಗಾವಿಯ ಹಿಂದವಾಡಿಯಲ್ಲಿನ ಜೈನ ಬಸದಿಯ  ನೂತನೀಕರಣ ಮತ್ತು ಶ್ರೀ 1008 ಚಂದ್ರಪ್ರಬ, ಆದಿನಾಥ ಹಾಗೂ 24 ತೀಥಂಕರರ ಪಂಚಕಲ್ಯಾಣ ಮಹಾ ಮಹೋತ್ಸವದ ಎರಡನೇಯ ದಿನವಾದ ಸೋಮವಾರದಂದು ಭ.1008 ಚಂದ್ರಪ್ರಭ , ಭ,ಭರತ ಭ, ಬಾಹುಬಲಿ ಮತ್ತು 24 ತೀರ್ಥಂಕರರ ಜನ್ಮ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ಅತೀ ವಿಜೃಂಭಣೆಯಿಂದ ನಡೆಯಿತು. 

ಹಿಂದವಾಡಿ ಜೈನ ಮಂದಿರದ ಭವ್ಯವಾದ ಪ್ರಾಂಗಣದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂದಿತ್ತು.  ಸೋಮವಾರ ಬೆಳಿಗ್ಗೆ ಮಂಗಲವಾದ್ಯದ  ಮೂಲಕ ಚಾಲನೆ ಪಡೆದ ಕಾರ್ಯಕ್ರಮಗಳು ಕ್ರಮೇಣವಾಗಿ ಧಾಮರ್ಿಕ ಕಾರ್ಯಕ್ರಮಗಳು ನಡೆದವು. ಯಜಮಾನರ ಆಗಮನ,ಮಂಗಲ ಕುಂಭಾನಯನ,ನಿತ್ಯ ವಿಧಿ,ಪಂಚಾಮೃತ ಅಭಿಷೇಕ,ಶಾಂತಿ ಮಂತ್ರ, ಜನ್ಮ ಕಲ್ಯಾಣ ಸಂಸ್ಕಾರ ವಿಧಿ, ಜನ್ಮ ಕಲ್ಯಾಣ ಪೂಜಾ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಸೌಧರ್ಮ ಇಂದ್ರ- ಇಂದ್ರಾಣಿಗಳಿಂದ ತೀರ್ಥಂಕರ ದರ್ಶನ ಪಡೆಯುವ ಪ್ರಸಂಗ ಜನರ ಮನಸೆಳೆಯಿತು.

ಅದರಂತೆ ರವಿವಾರ ಸಾಯಂಕಾಲ ಜಲಯಾತ್ರಾ ಮಹೋತ್ಸವ, ಭದ್ರಕುಂಭಾನಯನ, ಮೆರವಣಿಗೆ, ಸಂಗೀತಾರತಿ, ಜಾಪ್ಯ, ಸವಾಲ, ಭೇರಿತಾಡನ, ಗರ್ಭ ಕಲ್ಯಾಣ ಸಂಸ್ಕಾರ ವಿಧೀ, ಇಂದ್ರಸಭಾ, ಧನಪತಿ ಕುಬೇರರಿಂದ ರತ್ನವೃಷ್ಠಿ, ಷೋಡಶ ಸ್ವಪ್ನ ದರ್ಶನ, ತೀರ್ಥಂಕರರ ಮಾತೆಯ ಸೇವೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.  

ಶ್ರೀ 108 ಆಚಾರ್ಯ ಧರ್ಮಸೇನ ಮತ್ತು ಶ್ರೀ 105 ಕ್ಷುಲ್ಲಕ ಚಂದ್ರಸೇನ ಮಹಾರಾಜರ ಸಾನಿಧ್ಯದಲ್ಲಿ  ಹಾಗೂ ಪ್ರತಿಷ್ಠಾಚಾರ್ಯ ಪಂಡಿತ ವೃಷಭಸೇನ ಉಪಾಧ್ಯೆ , ಸಹ ಪ್ರತಿಷ್ಠಾಚಾರ್ಯ ಪಂಡಿತ  ಪಾರೀಸ ಉಪಾಧ್ಯೆ,ಪಂಡಿತ ಸಂಜೀವ ಉಪಾಧ್ಯೆ ಮತ್ತು ಉದಯಕುಮಾರ್ ಉಪಾಧ್ಯೆ ಇವರ ಮಾರ್ಗದರ್ಶನದಲ್ಲಿ ಧಾಮರ್ಿಕ ಕಾರ್ಯಕ್ರಮ ನಡೆದವು.