ನಮ್ಮ ಸಂಘ, ನಮ್ಮ ಕುಟುಂಬ: ದಿನೇಶ್ ಎಮ್

ಲೋಕದರ್ಶನ ವರದಿ

ಧಾರವಾಡ13: ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಪಾರದರ್ಶಕತೆಯ ಅನುಷ್ಠಾನಕ್ಕಾಗಿ ಕೈಜೋಡಿಸಬೇಕೆಂದು, ಸಂಘವನ್ನು ನಾವು ಪ್ರೀತಿಸಿದ್ದಲ್ಲಿ ಸಂಘವು ನಮ್ಮನ್ನು ಪ್ರೀತಿಸುತ್ತದೆ. ನಮ್ಮನ್ನು ಅಭಿವೃದ್ದಿಯತ್ತ ಕೊಂಡೊಯುತ್ತದೆ ಅದೇ ರೀತಿಯಲ್ಲಿ ನಾವು ಸಮಾಜ ಸೇವೆಗೆ ಅರ್ಥಕಲ್ಪಿಸಬೇಕಾಗಿದೆ ಎಂದು ನಿದರ್ೇಶಕರಾದ ದಿನೇಶ್ ಎಮ್ ಅಭಿಪ್ರಾಯಪಟ್ಟರು. 

 ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ) ಧಾರವಾಡ ತಾಲೂಕಿನ ವಿದ್ಯಾಗಿರಿ ವಲಯದ ಗಾಂಧೀ ನಗರದ ಸಾಯಿಬಾಬಾ ದೇವಸ್ಥಾನದಲ್ಲಿ ಒಕ್ಕೂಟಗಳ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿಲಾಗಿತು.

ಒಕ್ಕೂಟದ ಪದಾಧಿಕಾರಿಗಳಿಗೆ ಒಕ್ಕೂಟದ ಪರಿಕಲ್ಪನೆ, ಪದಾಧಿಕಾರಿಗಳ ಜವಾಬ್ದಾರಿ ಹಾಗೂ ಯೋಜನೆಗೆ ಅವರ ಸಹಕಾರದ ಬಗ್ಗೆ ತಿಳಿಸಿ.

   ಕಾರ್ಯಕ್ರಮದಲ್ಲಿ ಒಳಾಂಗಣ ಕ್ರಿಡೆಗಳನ್ನು ಏರ್ಪಡಿಸಿದ್ದು ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. 

  ತರಬೇತಿ ಕಾರ್ಯಗಾರದಲ್ಲಿ ತಾಲೂಕಿನ ಯೋಜನಾಧಿಕಾರಿಯವರಾದ ಉಲ್ಲಾಸ್ ಮೇಸ್ತ, ಮೇಲ್ವಿಚಾರಕರಾದ ಧರ್ಮಪ್ಪ, ಪೂಣರ್ಿಮಾ, ಜಯಂತಿ,  ಓಖಐಒ ಸಮನ್ವಯಾಧಿಕಾರಿಯಾದ ಉಮೇಶ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.