ಜನವರಿ 12ರಂದು ಬಿಂಕದಕಟ್ಟಿಯಲ್ಲಿ ಸಹಕಾರ ರತ್ನ ಎಂ.ವಿ. ಮೂಲಿಮನಿ ಆವರ 94ನೇ ಜಯಂತ್ಯುತ್ಸವ ಕಾರ್ಯಕ್ರಮ
ಗದಗ 11: ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಸಹಕಾರಿ ಸಂಘ ನಿ. ವತಿಯಿಂದ ಸಹಕಾರ ರತ್ನ ಎಂ.ವಿ. ಮೂಲಿಮನಿ ಆವರ 94ನೇ ಜಯಂತ್ಯುತ್ಸವ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 67ನೇ ವಾರ್ಷಿಕ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘದ ರಜತ ಮಹೋತ್ಸವ ಕಾರ್ಯಕ್ರಮ ಜ. 12ರಂದು ಸಂಜೆ 5ಕ್ಕೆ ಜರುಗಲಿದೆ.
ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಅವರು ಅಧ್ಯಕ್ಷತೆ ವಹಿಸುವರು. ಕರ್ನಾಟಕ ಖನಿಜ ಅಭಿವೃಧ್ಧಿ ನಿಗಮ ನಿಯಮಿತದ ಅಧ್ಯಕ್ಷ ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ ಉಗ್ರಾಣವನ್ನು ಉದ್ಘಾಟಿಸುವರು. ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರು, ಶಾಸಕ ಜಿ.ಟಿ. ಪಾಟೀಲ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಮಾಜಿ ಶಾಸಕ ಡಿ.ಆರ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡುವರು. ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಹೈನುಗಾರಿಕೆಗೆ ಸಾಲ ವಿತರಣೆ ಮಾಡುವರು. ಮಾಜಿ ಸಚಿವ ಬಿ.ಆರ್. ಯಾವಗಲ್ಲ ಆವರು ರೈತರಿಗೆ ಮ್ಯಾಟ್ ವಿತರಣೆ ಮಾಡುವರು. ರಾಣೆಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಫೋಟೊ ಅನಾವರಣ ಮಾಡುವರು. ಶಿಕ್ಷಣ ತಜ್ಞ ಜೆ.ಕೆ. ಜಮಾದಾರ ಆವರು ಸಂಸ್ಥೆ ನಡೆದು ಬಂದ ದಾರಿ ಕುರಿತು ಉಪನ್ಯಾಸ ನೀಡುವರು.
ಮುಖ್ಯ ಅತಿಥಿಗಳಾಗಿ ಕೆಸಿಸಿ ಬ್ಯಾಂಕ್ ನಿರ್ದೇಶಕರಾದ ಮಲ್ಲಪ್ಪ ಕಲ್ಗುಡಿ, ಸಿ.ಬಿ. ದೊಡ್ಡಗೌಡ್ರು, ಜಮಾವೀತ ವುಲಾಮ ಪೀರಜಾದೆ ಅಧ್ಯಕ್ಷರು ಮೌಲಾನಾ ಇನಾಯತ್‌ವುಲ್ಲಾ, ಮಾಜಿ ಜಿಪಂ ಸದಸ್ಯ ರೇವಣಪ್ಪ ಕೊಂಡಿಕೊಪ್ಪ, ಸಹಕಾರ ಸಂಘದ ಉಪನಿಬಂಧಕಿ ಎಸ್.ಎಸ್. ಕಬಾಡೆ, ಅಸಿಸ್ಟಂಟ್ ರಜಿಸ್ಟರ್ ಪುಷ್ಪಾ ಕಡಿವಾಳರ, ಗ್ರಾಪಂ ಅಧ್ಯಕ್ಷೆ ತುಳಸಾ ಶ್ರೀನಿವಾಸ ತಿಮ್ಮನಗೌಡರ, ಉಪಾಧ್ಯಕ್ಷೆ ದ್ಯಾಮವ್ವ ಹನಮಪ್ಪ ಆರಟ್ಟಿ ಪಾಲ್ಗೊಳ್ಳುವರು.
ಸಹಕಾರ ರತ್ನ ಪುರಸ್ಕೃತರಾದ ಕೆ.ಎಲ್. ಪಾಟೀಲ, ಎಚ್.ಜಿ. ಹಿರೇಗೌಡರ, ಅಕಾಡೆಮಿಕ ಎಂಟರ್‌ಪ್ರೆನ್ಯೂರ್‌ಶಿಪ್ ಎಕ್ಸಲೆನ್ಸ್ ಪ್ರಶಸ್ತಿ ವಿಜೇತ ಎಸ್.ಆರ್. ನಾಗನೂರ ಹಾಗೂ ರಾಜ್ಯೋತ್ಸವ ಪುರಸ್ಕೃತ ಗುರಣ್ಣ ಬಳಗಾನೂರ ಅವರಿಗೆ ಸನ್ಮಾನ ಜರುಗಲಿದೆ ಎಂದು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಆರ್.ವಿ. ಅಗಸನಕೊಪ್ಪ, ಉಪಾಧ್ಯಕ್ಷ ಬಸಪ್ಪ ಮಲ್ಲಪ್ಪ ಭಾವಿಕಟ್ಟಿ, ಪ್ರಾಥಮಿಕ ಸಹಕಾರ ಸಂಘ ನಿ. ಅಧ್ಯಕ್ಷ ಡಿ.ಬಿ. ತಿರ್ಲಾಪೂರ ಹಾಗೂ ಉಪಾಧ್ಯಕ್ಷ ದೇವಪ್ಪ ಯಲ್ಲಪ್ಪ ಹುಲ್ಲೋಜಿ ಆವರು ತಿಳಿಸಿದ್ದಾರೆ.