ಮಹಾಲಿಂಗಪುರ ಘಟಕಕ್ಕೆ ನೂತನ ಉಪಾಧ್ಯಕ್ಷ, ಕಾರ್ಯದರ್ಶಿ ಆಯ್ಕೆ
New Vice-President and Secretary elected for Mahalingapura unit
ಲೋಕದರ್ಶನ ವರದಿ
ಮಹಾಲಿಂಗಪುರ 03 : ವೀರ ಸ್ವತಂತ್ರ ಸೇನಾನಿ ಬೆಳವಡಿ ವಡ್ಡರ ಯಲ್ಲಣ್ಣ ತರುಣ ಸೇವಾ ಸಂಘ, ಮಹಾಲಿಂಗಪುರ ವತಿಯಿಂದ ವಿವಿಧ ಹಂತಗಳ ಪದಾಧಿಕಾರಿಗಳನ್ನು ನೇಮಕ ಮಾಡಿ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು. ನಗರದ ಜೇ.ಎಲ್.ಬಿ.ಸಿ. ಐಬಿಯಲ್ಲಿ ನಡೆದ ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ತಿಪ್ಪಣ್ಣ ಕಲ್ಲೋಳಪ್ಪ ಬಂಡಿವಡ್ಡರ, ರಾಜ್ಯ ಸದಸ್ಯರಾದ ಅರ್ಜುನ ರಾಮಪ್ಪ ಬಂಡಿವಡ್ಡರ ಹಾಗೂ ಯಂಕಪ್ಪ ಗುರ್ಪ ಬಂಡಿವಡ್ಡರ, ರಬಕವಿಹಿಬನಹಟ್ಟಿ ತಾಲೂಕು ಕಾರ್ಯದರ್ಶಿ ರಾಜು ರಾಮಪ್ಪ ಬಂಡಿವಡ್ಡರ ಹಾಗೂ ಮಹಾಲಿಂಗಪುರ ಘಟಕದ ಅಧ್ಯಕ್ಷ ರವಿ ಭಗವಂತ ವಡ್ಡರ ಅವರ ನೇತೃತ್ವದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಿತು. ರಬಕವಿಹಿಬನಹಟ್ಟಿ ತಾಲೂಕು ಘಟಕದ ಕಾನೂನು ಸಲಹೆಗಾರರನ್ನಾಗಿ ವಕೀಲ ರಾಮು ಬಾಬು ಪಾತ್ರೋಟ ಅವರನ್ನು ನೇಮಕ ಮಾಡಲಾಯಿತು.
ಮಹಾಲಿಂಗಪುರ ಘಟಕದ ಉಪಾಧ್ಯಕ್ಷರಾಗಿ ಮಾರುತಿ ಬಂಡಿವಡ್ಡರ ಹಾಗೂ ಕಾರ್ಯದರ್ಶಿಯಾಗಿ ಶಶಿಕಾಂತ ರಾಜು ಪಾತ್ರೋಟ ಅವರನ್ನು ನೇಮಕ ಮಾಡಲಾಯಿತು. ಮಹಾಲಿಂಗಪುರ ಘಟಕದ ಸದಸ್ಯರನ್ನಾಗಿ ರಾಮು ಬಂಡಿವಡ್ಡರ, ಪ್ರಭು ಬಂಡಿವಡ್ಡರ, ಸುನಿಲ ಬಂಡಿವಡ್ಡರ, ಪರಶುರಾಮ ಬಂಡಿವಡ್ಡರ ಸೇರಿದಂತೆ ಇತರರನ್ನು ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘದ ಸಂಘಟನೆಯನ್ನು ಬಲಪಡಿಸುವುದು ಹಾಗೂ ಸಮಾಜದ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಕುರಿತು ಚರ್ಚಿಸಲಾಯಿತು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 