ಧಾರವಾಡ 06: (ಪ್ರೇಕ್ಷಾಗೃಹ ಸಭಾಂಗಣ): ಸಂಗೀತವು ಧಾರವಾಡ ನಗರಕ್ಕೆ ಒದಗಿದ ಉತ್ಕೃಷ್ಠ ವರ ಎಂದು ಡಾ. ಶಾಂತರಾಮ ಹೆಗಡೆ ಹೇಳಿದರು.
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹ ಸಭಾಂಗಣದಲ್ಲಿ ಜ.5ರಂದು 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಏರ್ಪಡಿಸಿದ್ದ ಧಾರವಾಡ ಜಿಲ್ಲಾ ದರ್ಶನ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮಲ್ಲಿಕಾಜರ್ುನ ಮನ್ಸೂರ, ಗಂಗೂಭಾಯಿ ಹಾನಗಲ್, ಭೀಮಸೇನ್ ಜೋಶಿ ಅವರು ತಮ್ಮ ಇಡೀ ಬದುಕನ್ನು ಸಂಗೀತ ಕ್ಷೇತ್ರಕ್ಕೆ ಮುಡುಪಾಗಿಟ್ಟರು. ಧಾರವಾಡದ ಮಣ್ಣು, ನೀರಿನಲ್ಲಿ ಕಲಾವಿದರನ್ನು ಸೃಷ್ಠಿಸುವ ಶಕ್ತಿ ಇದೆ. ಇಲ್ಲಿನ ವಾತಾವರಣ ಹಿಂದೂಸ್ತಾನಿ ಸಂಗೀತವು ಬೆಳೆಯಲು ಪೂರಕವಾಗಿದೆ ಎಂದರು.
ಗದಗನ ಪಂಚಾಕ್ಷರಿ ಗವಾಯಿ ಅವರು ಸಂಗೀತದಲ್ಲಿ ಪರಿಣಿತಿ ಹೊಂದಿದ್ದನ್ನು ಇಲ್ಲಿ ಸ್ಮರಿಸಲೇಬೇಕು. ಅವರು ಮಕ್ಕಳಿಗೆ ಯಾವುದೇ ಬೇದ-ಭಾವವಿಲ್ಲದೆ ಸಂಗೀತ ಪಾಠ ಹೇಳುವ ಗುರುಗಳಾಗಿದ್ದರು ಎಂದರು.
ಹೋರಾಟ ಪರಂಪರೆ ಗೋಷ್ಠಿಯಲ್ಲಿ ಮಾತನಾಡಿದ ಡಾ.ಡಿ.ಎಮ್.ಹಿರೇಮಠ ಅವರು, ಧಾರವಾಡ ಬರೀ ಸಾಹಿತಿಗಳ ಊರಷ್ಟೇ ಅಲ್ಲ. ಇದು ಕನ್ನಡ ಹೋರಾಟ, ಸ್ವಾತಂತ್ರ್ಯ ಸಂಗ್ರಾಮ, ಏಕೀಕರಣ ಚಳುವಳಿಯಂತಹ ಹಲವಾರು ಹೋರಾಟಗಳ ತಾಣವಾಗಿದೆ ಎಂದು ತಿಳಿಸಿದರು.
ಈ ಭಾಗದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ ವೀರ ಮಹಿಳೆ ಕಿತ್ತೂರ ರಾಣಿ ಚೆನ್ನಮ್ಮ ಅವರನ್ನು ನಾವು ಸದಾಕಾಲ ಸ್ಮರಿಸಲೇಬೇಕು ಎಂದರು.
ಧಾರವಾಡದ ಕನರ್ಾಟಕ ವಿದ್ಯಾವರ್ಧಕ ಸಂಘಕ್ಕೆ ಬಹುದೊಡ್ಡ ಇತಿಹಾಸವಿದೆ. ಕನರ್ಾಟಕ ಏಕೀಕರಣದ ಆದೇಶ ಹೊರಡಿಸಿದ ನಂತರವೇ ಸತ್ಯಾಗ್ರಹ ಬಿಡುತ್ತೇನೆ ಎಂದು ಹೋರಾಡಿದ ಹುಬ್ಬಳ್ಳಿಯ ಹತ್ತಿರದ ಅದರಗುಂಚಿ ಗ್ರಾಮದ ಶಂಕರಗೌಡ ಪಾಟೀಲ ಅವರು ಕನರ್ಾಟಕ ಏಕೀಕರಣದ ಹೋರಾಟದಲ್ಲಿ ಸಕ್ರೀಯರಾಗಿ ಪಾಲ್ಗೊಂಡಿದ್ದರು ಎಂದರು.