ಮುರುಘೇಂದ್ರ ಮಹಾಸ್ವಾಮಿಗಳ ಮೂರ್ತಿ ಲೋಕಾಪರ್ಣೆ; ಆಗಸ್ಟ್‌ 21ರಂದು ಧಾರ್ಮಿಕ ಕಾರ್ಯಕ್ರಮ

ಮುರುಘೇಂದ್ರ ಮಹಾಸ್ವಾಮಿಗಳ ಮೂರ್ತಿ ಲೋಕಾಪರ್ಣೆ; ಆಗಸ್ಟ್‌ 21ರಂದು ಧಾರ್ಮಿಕ ಕಾರ್ಯಕ್ರಮ  Murughendra Mahaswamy's Murthy Lokaparne; Religious program on 21st August

ಬಳ್ಳಿಗೇರಿ/ಮಲಬಾದ್ 20:  ಮಧ್ಯದಲ್ಲಿರುವ   ಗುರುಬಸವ ವಿರಕ್ತಮಠದಲ್ಲಿ ಪರಮಪೂಜ್ಯ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳ ಮೂರ್ತಿ ಲೋಕಾಪರ್ಣೆ ಕಾರ್ಯಕ್ರಮವನ್ನು ಆಗಸ್ಟ್‌ 21ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ. ಬೀಳೂರು ಸಂಘ, ಬಸವನಬಾಗೇವಾಡಿ ವಿರಕ್ತಮಠಗಳ ಅಧಿಪತಿಗಳಾಗಿದ್ದ   ಮುರುಘೇಂದ್ರ ಮಹಾಸ್ವಾಮಿಗಳು ಧಾರ್ಮಿಕ ಪ್ರವಚನ, ಸಾಹಿತ್ಯ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಭಕ್ತರ ಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದರು.

ಅವರ ಮಾರ್ಗದರ್ಶನದಲ್ಲಿ ಹಲವು ಮಠಗಳ ಅಭಿವೃದ್ಧಿ ಹಾಗೂ ಧಾರ್ಮಿಕ ಚಟುವಟಿಕೆಗಳು ನಡೆದಿವೆ. ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಸಂಘ ವಿರಕ್ತಮಠ ಸೇರಿದಂತೆ ವಿವಿಧ ಮಠಗಳ ಅಭಿವೃದ್ಧಿಗೂ ಶ್ರೀಗಳು ಮಾರ್ಗದರ್ಶನ ನೀಡಿದ್ದರು. ಭಕ್ತರ ಆಶಯದಂತೆ ಬಡಚಿ ಹಾಗೂ ಬಳ್ಳಿಗೇರಿ ಗ್ರಾಮಗಳಲ್ಲಿ ಮಠಗಳನ್ನು ಸ್ಥಾಪಿಸಿ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಿದ್ದರು. ಮೂರ್ತಿ ಲೋಕಾಪರ್ಣೆ ಕಾರ್ಯಕ್ರಮಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸೇವೆ ಸಲ್ಲಿಸಿ ಪುಣ್ಯ ಪಡೆಯುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಧಾರ್ಮಿಕ ಪ್ರವಚನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.