ಸುಭಾಷ್ ಚಂದ್ರ ಬೋಸ್ ಅವರ ಕನ್ನಡಕ ಸರಿಪಡಿಸದ ನಗರಸಭೆ ಪೌರಾಯುಕ್ತರು ನಿರ್ಲಕ್ಷ್ಯ
Municipal Commissioner's negligence in not fixing Subhash Chandra Bose's glasses
ಕಾರವಾರ 06 : ನಗರದ ಹೃದಯಭಾಗದಲ್ಲಿ ಇರುವ ಸುಭಾಷ್ ಚಂದ್ರಬೋಸ್ ವೃತ್ತದಲ್ಲಿ ಇರುವ ಸುಭಾಷ್ ಚಂದ್ರಬೋಸ್ ಪ್ರತಿಮೆಯ ಕನ್ನಡಕ ಮುರಿದು ಬಿದ್ದು ವಿರೂಪವಾಗಿ ಒಂದು ವಾರ ಕಳೆದರೂ, ನಗರಸಭೆಯ ಪೌರಾಯುಕ್ತರು ನಿರ್ಲಕ್ಷ್ಯ ಮಾಡಿದ ಘಟನೆ ನಡೆದಿದೆ. ಸುಭಾಷರ ಪ್ರತಿಮೆಯ ಕನ್ನಡಕ ಕಿತ್ತು ಬಿದ್ದರೂ, ಸರಿಪಡಿಸದೇ ಕಾರವಾರ ನಗರಸಭೆ ನಿರ್ಲಕ್ಷದ ವಿರುದ್ಧ ಜನ ಕಿಡಿ ಕಾರಿದ್ದಾರೆ. ಕಾರವಾರ ನಗರಸಭೆಯಿಂದ 1973 ರಲ್ಲಿ ಸುಭಾಷ್ ಚಂದ್ರ ಬೋಸ್ ರ ಪ್ರತಿಮೆಯನ್ನು ಪ್ರತಿಷ್ಟಾಪನೆ ಮಾಡಿದ್ದು, ನಗರದ ಹೃದಯ ಭಾಗದಲ್ಲಿ ಇದೆ. ಈ ಪ್ರತಿಮೆ ಇರುವ ಸ್ಥಳವನ್ನು ಸುಭಾಷ್ ಚಂದ್ರಬೋಸ್ ಸರ್ಕಲ್ ಎಂದು ಕರೆಯಲಾಗುತ್ತಿದೆ. ನಗರದ ಪ್ರವೇಶ ರಸ್ತೆಯ ಸರ್ಕಲ್ ಆಗಿದ್ದು ಒಂದು ವಾರದಿಂದ ಈ ಪ್ರತಿಮೆ ವಿರೂಪವಾದರೂ, ನಗರಸಭೆ ಸರಿಪಡಿಸುವ ಕೆಲಸಕ್ಕೆ ಕೈಹಾಕಿಲ್ಲ. ಮೂರ್ತಿಯ ಕನ್ನಡಕ ತುಂಡಾಗಿದೆ . ಹೀಗಿದ್ದರೂ ಒಂದು ವಾರದಿಂದ ವಿರೂಪವಾಗಿ ಹಾಗೆಯೇ ಇದ್ದು, ಹಲವರು ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನಾದರೂ ನಗರಸಭೆ ಬೋಸರ ಕನ್ನಡಕ ಸರಿಪಡಿಸಲಿದೆಯೇ ಎಂದು ಕಾದು ನೋಡಬೇಕಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 