ವಕ್ಫ್ ತಿದ್ದುಪಡಿ ಕಾಯ್ದೆ ಕೂಡಲೇ ವಾಪಸ್ ಪಡೆಯಲು ಮುಸ್ಲಿಮರ ಬೃಹತ್ ಪ್ರತಿಭಟನೆ
ಕೊಪ್ಪಳ 04: ಕೇಂದ್ರ ಸರ್ಕಾರ ಸಂವಿಧಾನ ವಿರೋಧಿ ವಕ್ಫ್‌ತಿದ್ದುಪಡಿಕಾಯ್ದೆಜಾರಿಗೆತರಲು ಮುಂದಾಗಿರುವುದನ್ನು ಖಂಡಿಸಿ ಕೂಡಲೇಇದನ್ನು ವಾಪಸ್ ಪಡೆಯಲು ಆಗ್ರಹಿಸಿ ಕೊಪ್ಪಳದಲ್ಲಿ ಮುಸ್ಲಿಮರು ಬೃಹತ್ ಪ್ರತಿಭಟನೆ ನಡೆಸಿದರು.
ಶನಿವಾರ ಬೆಳಿಗ್ಗೆ ನಗರದಗಡಿಯಾರಕಂಬದ ಬಳಿಯಿಂದ ಪ್ರಮುಖಜವಾಹರ್‌ರಸ್ತೆ ಮೂಲಕ ಸಂಚರಿಸಿದ ಬೃಹತ್ ಮೆರವಣಿಗೆ ಅಶೋಕ್ ಸರ್ಕಲ್ ಬಳಿ ಜಮಾಯಿಸಿ ಭಾರಿ ಪ್ರತಿಭಟನೆರ್ಯಾಲಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧಘೋಷಣೆ ಕೂಗಿ ಕೂಡಲೇ ಮುಸ್ಲಿಮರ ವಕ್ಫ್‌ತಿದ್ದುಪಡಿಕಾಯ್ದೆಕೈಬಿಡಬೇಕೆಂದು ಒತ್ತಾಯಿಸಿದರು.ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಕೋಮುವಾದಿ ಬಿಜೆಪಿ ಸರ್ಕಾರ ಮುಸ್ಲಿಮರನ್ನು ಟಾರ್ಗೆಟ್ ಮಾಡಿಅವರನ್ನುಅನಾವಶ್ಯಕತೊಂದರೆ ಕಿರುಕುಳ ನೀಡುತ್ತಿದೆಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಕೂಡಲೆ ಮುಸ್ಲಿಮರ ವಿರುದ್ಧದ ಮತ್ತು ಸಂವಿಧಾನದ ವಿರುದ್ಧದ ವಕ್ಫ್‌ತಿದ್ದುಪಡಿಕಾಯ್ದೆ ಕೈ ಬಿಡಬೇಕು, ಮುಸ್ಲಿಮರಿಗೆ ನ್ಯಾಯಯುತವಾಗಿ ಬದುಕಲು ಮತ್ತುಅವರ ನ್ಯಾಯ ಸಮ್ಮತ ಬೇಕು ಬೇಡಿಕೆಗಳ ಈಡೇರಿಕೆಗಾಗಿಕೇಂದ್ರ ಸರ್ಕಾರಕ್ಕೆ ಪ್ರತಿಭಟನಾಕಾರರು ಒತ್ತಾಯಿಸಿದರು. ಸದರಿ ಪ್ರತಿಭಟನಾ ಮೆರವಣಿಗೆಯ ನೇತೃತ್ವವನ್ನು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಜಿಲ್ಲಾ ಸಮಿತಿ ವಹಿಸಿಕೊಂಡಿದ್ದು ಮುಸ್ಲಿಂ ಧರ್ಮಗುರು ಹಾಗೂ ಯೂಸುಫಿಯಾ ಮಸೀದಿಯ ಖತೀಬ್ ವ ಇಮಾಮ್ ಮೌಲಾನ ಮೌಲ್ವಿ ಹಾಫಿಜ್ ವ ಖ್ವಾರಿ ಮೊಹಮ್ಮದ್ ನಜೀರ್‌ಅಹಮದ್‌ಖಾದ್ರಿ ವ ತಸ್ಕಿನಿ ನೇತೃತ್ವ ವಹಿಸಿದ್ದರು ಮತ್ತುಅವರು ಮಾತನಾಡಿತಿದ್ದುಪಡಿಕಾಯ್ದೆ ವಾಪಸ್ ಪಡೆಯುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದುಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದರು.
ಸಂಸದಕೆ.ರಾಜಶೇಖರ್ ಹಿಟ್ನಾಳ, ಮಾಜಿ ಸಂಸದ ಸಂಗಣ್ಣಕರಡಿ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಅಧ್ಯಕ್ಷ ಕೆ.ಶ್ರೀನಿವಾಸ ಗುಪ್ತ ಮತ್ತು ಕೊಪ್ಪಳ ನಗರಸಭೆಯಅಧ್ಯಕ್ಷಅಮ್ಜದ್ ಪಟೇಲ್, ಹಿರಿಯ ನ್ಯಾಯವಾದಿ ಹಾಗೂ ರಾಜ್ಯ ವಕ್ಫ್ ಮಂಡಳಿ ಸದಸ್ಯರಾದಎಸ್ ಆಸೀಫ ಅಲಿ, ಪ್ರಗತಿಪರ ಹೋರಾಟಗಾರರಾದ ಪ್ರೊಫೆಸರ್‌ಅಲ್ಲಮ ಪ್ರಭು ಬೆಟ್ಟದೂರು, ಡಿ.ಎಚ್.ಪೂಜಾರ್, ಕಾಂಗ್ರೆಸ್‌ಯುವ ನಾಯಕ ಕೆ.ಸೋಮಶೇಖರ ಹಿಟ್ನಾಳ, ನಗರಸಭೆಯ ಮಾಜಿಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮಹೇಂದ್ರಚೋಪ್ರಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಸನ್ನಗಡಾದ್, ಎಪಿಎಂಸಿ ಮಾಜಿಅಧ್ಯಕ್ಷ ಶರಣಪ್ಪ ಸಜ್ಜನ್, ನಗರಸಭೆ ಸದಸ್ಯರಾದರಾಜಶೇಖರ್‌ಅಡೂರ್, ಅಜೀಮ್‌ಅತ್ತಾರ್‌ಅಕ್ಬರ್ ಪಾಷಾ ಪಲ್ಟನ್, ನಗರಕಾಂಗ್ರೆಸ್‌ಅಧ್ಯಕ್ಷ ಎಂ.ಪಾಷಾ ಕಾಟನ್ ಹಿರಿಯ ನ್ಯಾಯವಾದಿಗಳಾದ ಪಿಆರ್ ಹೊಸಳ್ಳಿ , ಎ.ಎ ಚೌತಾಯಿ, ಹಿರಿಯ ನಾಯಕಯಮನೂರ್ಪ ನಾಯಕ್, ಸಮಾಜದ ಮುಖಂಡರಾದ ಕೆ.ಎಂ ಸಯ್ಯದ್, ಬಾಶು ಸಾಬ್‌ಖತೀಬ್, ಅಂಜುಮನ್‌ಕಮಿಟಿಅಧ್ಯಕ್ಷಎಂ.ಡಿ ಆಸೀಫ್ ಕರ್ಕಿಹಳ್ಳಿ ,ಕರ್ನಾಟಕ ಮುಸ್ಲಿಂ ಯುನಿಟಿಜಿಲ್ಲಾಅಧ್ಯಕ್ಷ ಎಂ ಡಿ ಜಿಲಾನ್‌ಕಿಲ್ಲೇದಾರ್ ಮೈ ಲೈಕ, ದಲಿತ ಮುಖಂಡ ಪರಶುರಾಮ್ ಕೆರೆಹಳ್ಳಿ ಹುಸೇನ್ ಪೀರ ಮುಜಾವರ್ ಮೌಲಾನ ಮೊಹಮ್ಮದ್ ಅಲಿ ಹಿಮಾಯಿತಿ, ಅಬ್ದುಲ್‌ಅಜೀಜ್ ಮಾನ್ವಿಕರ್, ಮಾನ್ವಿ ಪಾಷಾ, ಮೆಹಬೂಬ್‌ಅರಗಂಜಿ ,ಗಫಾರ್‌ದಡ್ಡಿ ,ಸಿರಾಜ್ ಮನಿಯರ್, ಯಜದಾನಿ ಪಾಶ ಖಾದ್ರಿಅಯ್ಯುಬ ಅಡ್ಡೆ ವಾಲೆ ಫಕ್ರುದ್ದೀನ್ ನದಾಫ್ ಸಮಾಜದಯುವ ನಾಯಕರಾದ ಸಲೀಂ ಮಂಡಲಗಿರಿ, ಸಲೀಂ ಅಳವಂಡಿ ಸಲೀಂ ಗೊಂಡಬಾಳ ,ನಾಸೀರ್ ಕಂಠಿ ,ಮೆಹಮುದ್ ಹುಸೇನಿ, ಅಲ್ಲದೆಯುವ ನಾಯಕರಾದ ಶರಣು ಗದ್ದಿ ಮತ್ತು ಮಂಜುನಾಥ್ ಗೊಂಡವಾಳ ಸೇರಿದಂತೆ ಸುಮಾರು ಹತ್ತು ಸಾವಿರಕ್ಕೂಅಧಿಕಜನ ಮುಸ್ಲಿಂ ಸಮಾಜ ಬಾಂಧವರುಅಲ್ಲದೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮುಖ್ಯಸ್ಥರು ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ನಂತರಜಿಲ್ಲಾ ಆಡಳಿತದ ಪರವಾಗಿ ಕೊಪ್ಪಳದ ತಹಶೀಲ್ದಾರ್ ವಿಠಲ್ ಚೌಗಲಾ ರವರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿ ಜಿಲ್ಲಾಧಿಕಾರಿಗಳವರ ಗಮನಕ್ಕೆ ತಂದುಅವರ ಮೂಲಕ ರಾಷ್ಟ್ರಪತಿಯವರಿಗೆರವಾನಿಸಲಾಗುವುದುಎಂದು ಹೇಳಿದರು, ಸೂಕ್ತ ರೀತಿಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.