ಅದ್ದೂರಿಯಾಗಿ ಮರುಳಸಿದ್ದೇಶ್ವರ ಪಲ್ಲಕ್ಕಿ, ನಂದಿಕೋಲ ಉತ್ಸವ
Marulasiddheshwara palanquin, Nandikol festival in grand style
ಇಂಡಿ 19: ತಾಲ್ಲಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಮರುಳಸಿದ್ದೇಶ್ವರ ಎಳ್ಳ ಅಮಾವಾಸಿ ನಿಮಿತ್ತವಾಗಿ ಪಲ್ಲಕ್ಕಿ ಹಾಗೂ ನಂದಿಕೋಲ ಉತ್ಸವ ಅದ್ದೂರಿಯಾಗಿ ನಡೆಯಿತು. ಪ್ರತಿ ವರ್ಷದಂತೆ ಮರುಳಸಿದ್ದೇಶ್ವರ ಪಲ್ಲಕ್ಕಿಯು ಹಾಗೂ ನಂದಿಕೋಲು ಮೆರವಣಿಗೆ ಗ್ರಾಮದ ಮೂಲ ದೇವಾಲಯದಿಂದ ವಾದ್ಯ ಸಂಗೀತ ನೃತ್ಯ ವೈಭವದ್ದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗ್ರಾಮದ ಹೊರವಲಯದಲ್ಲಿ ಇರುವ ಕಡೆಗುಡಿ ತಲುಪಿತು. ಅಲ್ಲಿ ನೆಲೆಸಿರುವ ಮರುಳಸಿದ್ದೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ತಡವಲಗಾ ಗ್ರಾಮಕ್ಕೆ ಮರಳಿ ಬಂದು ಬಲಭೀಮ ದೇವಾಲಯದಲ್ಲಿ ವಾಸ್ತವ್ಯ ಇರುವುದು. ರಾತ್ರಿ ಇಡಿ ಭಕ್ತರಿಂದ ಭಜನೆ ಹಾಗೂ ಜಾಗರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಹಾಗೂ ಎಳ್ಳು ಅಮವಾಸ್ಯೆಗೆ ರೈತ ಕುಟುಂಬಗಳಲ್ಲಿ ವಾರಗಟ್ಟಲೆ ಮೊದಲು ಎಳ್ಳು ಹೋಳಿಗೆ, ಎಣ್ಣಿ ಹೋಳಿಗೆ, ಶೇಂಗಾ ಹೋಳಿಗೆ, ಸಜ್ಜಿ ರೊಟ್ಟಿ, ಜೋಳದ ಖಡಕ್ ರೊಟ್ಟಿ, ಕರ್ಚಿಕಾಯಿ, ಕಾಳು ಪಲ್ಯೆ, ವಿವಿಧ ಬಗೆಯ ಚಟ್ನಿ, ಮೊಸರು ಹೀಗೆ ಬಗೆ ಬಗೆಯ ಭಕ್ಷಗಳನ್ನು ತಯಾರಿಸಿ ಅಮವಾಸ್ಯೆ ದಿನ ಎತ್ತಿನ ಬಂಡಿ, ಟಂಟಂ, ಟ್ರ್ಯಕ್ಟರ್ಗಳಲ್ಲಿ ಮನೆಯ ಸದಸ್ಯರ ಜೊತೆಗೆ ಸ್ನೇಹಿತರು, ಬಂಧುಗಳನ್ನು ಕರೆದುಕೊಂಡು ಹೊಲಕ್ಕೆ ಹೋಗಿ, ಹೊಲದಲ್ಲಿ ಸಮೃದ್ಧವಾಗಿ ಬೆಳೆದ ಬಿಳಿಜೋಳ, ಕಡಲೆ, ಕುಸುಬಿ, ಗೋಧಿ ಫೈರಿನ ಮಧ್ಯದಲ್ಲಿ ಬನ್ನಿ ಗಿಡದ ಹತ್ತಿರ ಐದು ಕಲ್ಲುಗಳಿಗೆ ಸುಣ್ಣ ಹಚ್ಚಿ ಪಂಚ ಪಾಂಡವರನ್ನು ಮಾಡಿ ಪೂಜೆ ಸಲ್ಲಿಸುತ್ತಾರೆ. ಎಲ್ಲ ಬಗೆಯ ತಿನಿಸುಗಳ ತುಣುಕನ್ನು ಒಂದು ಪಾತ್ರೆಯಲ್ಲಿ ಹಾಕಿಕೊಂಡು ಮುಂದೆ ಒಬ್ಬರು ತಿನಿಸುಗಳ ತುಣುಕನ್ನು ಹೊಲದಲ್ಲಿ ಚೆಲ್ಲಿ ಬಲೋರೇ ಬಲೋ ಚೊಂಗೆ ಬಲೋ ಎನ್ನುತ್ತಾರೆ ಇದು ಆದಿ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ ಎಂದು ಹೇಳುತ್ತಾರೆ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 