ವ್ಯಕ್ತಿಯನ್ನು ಅಡ್ಡಗಟ್ಟಿ ಚಿನ್ನಾಭರಣ ದರೋಡೆ
Man robbed of gold jewellery while being held up
ವ್ಯಕ್ತಿಯನ್ನು ಅಡ್ಡಗಟ್ಟಿ ಚಿನ್ನಾಭರಣ ದರೋಡೆ
ಯರಗಟ್ಟಿ 02: ಸಮೀಪದ ವನ್ನೂರ-ಕೇಶಪ್ಪನಟ್ಟಿ ನಿರ್ಜನವಾದ ಪ್ರದೇಶದಲ್ಲಿ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಚಿನ್ನಾಭರಣ ಮತ್ತು ದ್ವಿಚಕ್ರ ವಾಹನ ದೋಚಿದ ಪ್ರಕರಣಕ್ಕೆ ಸಂಬಂಧಿಸಿ, ಐವರು ಡಕಾಯಿತರ ತಂಡವನ್ನು ನೇಸರಗಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿತರಾದ. ಈರ್ಪ ಮಹಾದೇವ ಪವಾಡಿ 26 ಉದ್ಯೋಗ : ಡ್ರೈವರ ಕೆಲಸ ಸಾ: ಹಣಬರಟ್ಟಿ ಹಾಲಿ ಚನ್ನಮ್ಮನಗರ ವಾಲ್ಮೀಕಿಗಲ್ಲಿ ಬೆಳಗಾವಿ., ಪ್ರಶಾಂತಅಪರ್ಸಾ ತಂದೆ ರಾಮಚಂದ್ರ ನಾರಿ 26 ವರ್ಷ ಉದ್ಯೋಗ : ಶೇತಿ ಕೆಲಸ ಸಾ: ಗುಜನಾಳ ತಾ: ಗೋಕಾಕ, ನಿಂಗಪ್ಪಅಅಜಯ ತಂದೆ ಅಡಿವೆಪ್ಪ ದೊಡಮನಿ 20 ವರ್ಷ ಉದ್ಯೋಗ : ಶೇತಿ ಕೆಲಸ. ಸಾ: ಗುಜನಾಳ ತಾ: ಗೋಕಾಕ, ರಾಮಪ್ಪಅರಮೇಶ ತಂದೆ ಬಾಳಪ್ಪ ಹಳಬನ್ನವರ 26 ವರ್ಷ : ಶೇತಿ ಕೆಲಸ ಸಾ: ಸುಣಕುಂಪಿ ಹಾಲಿ ರಾಜಕಟ್ಟಿ ತಾ: ಹುಕ್ಕೇರಿ, ಸದಾನಂದಅಸದಾಶಿವ ಬಾಳಪ್ಪ ಉದ್ದಾನಾಯ್ಕ 24 ವರ್ಷ ಜಾತಿ ಶೇಕ್ಕಿ ಕೆಲಸ ಸಾ: ಸುಣಕುಂಪಿ ತಾ: ಬೈಲಹೊಂಗಲ ಅವರಿಂದ ರೂ. 15000 ಹಣ ರೂ. 80 ಸಾವಿರ ಮೌಲ್ಯ್ ಎರಡು ದ್ವಿಚಕ್ರ ವಾಹನ, ಐದು ನಾಲ್ಕು ಮೊಬೈಲ್ ಸೇರಿದಂತೆ ಚಾಕು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ವೇಳೆ ಪಿಐ ಗಜಾನನ ನಾಯಕ, ಪಿಎಸ್‌ಐ ಈರಣ್ಣಾ ರಿತ್ತಿ, ಆರ್.ಬಿ. ಗೌಡರ, ಪೊಲೀಸ್ ಸಿಬ್ಬಂದಿಯಾದ ಎ. ಎ. ಗಡಿನಾಯಕ, ಎಸ್. ಆರ್. ದೇಸಾಯಿ, ಎಚ್. ಆರ್. ನ್ಯಾಮಗೌಡರ, ಜಿ. ಎಚ್. ಗುದಗಾಪೂರ, ಎನ್. ವ್ಹಿ. ಪರಡ್ಡಿ, ಎ. ಕೆ. ಡೊಂಬರ, ಎನ್. ಎಲ್. ಗುಡೆನ್ನವರ, ಸಂತೋಷ ದೇಯನ್ನವರ ಇದ್ದರು. ಪ್ರಕರಣ ಭೇದಿಸಿದ ಸಿಬ್ಬಂದಿಗಳಿಗೆ ಬೆಳಗಾವಿ ಎಸ್ ಪಿ ಭೀಮಾಶಂಕರ ಗುಳೇದ ಕಾರ್ಯ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 