ಮಲ್ಲಿಕಾರ್ಜುನ ಜಾತ್ರೆ: ಸತ್ತಿಗೇರಿ, ಸೋಪ್ಪಡ್ಲ, ಕೋರಕೊಪ್ಪದಿಂದ ಶ್ರೀಶೈಲಕ್ಕೆ ಪಾದಯಾತ್ರೆ ಆರಂಭ
Mallikarjuna fair: Start of trek from Sattigeri, Soppadla, Korakoppa to Srishaila
ಯರಗಟ್ಟಿ 02 : ಆಂಧ್ರದ ಶ್ರೀಶೈಲ ಕ್ಷೇತ್ರದಲ್ಲಿ ಯುಗಾದಿಯಂದು ಜರುಗುವ ಮಲ್ಲಿಕಾರ್ಜುನ ಜಾತ್ರೆಯಲ್ಲಿ ಪಾಲ್ಗೊಳ್ಳಲು ತಾಲೂಕಿನ ಸತ್ತಿಗೇರಿ, ಸೊಪ್ಪಡ್ಲ, ಕೋರಕೊಪ್ಪ, ತೋರಣಗಟ್ಟಿ ಗ್ರಾಮಗಳಿಂದ ಅಪಾರ ಸಂಖ್ಯೆಯ ಭಕ್ತರು ಸೋಮವಾರ ಪಾದಯಾತ್ರೆ ಕೈಗೊಂಡರು.ಪಾದಯಾತ್ರೆ ಆರಂಭಕ್ಕೂ ಮುನ್ನ ಕ್ಷೇತ್ರಾಧಿಪತಿ ಮಲ್ಲಿಕಾರ್ಜುನ, ಮಳಿಮಲ್ಲೇಶ್ವರ, ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಕಂಬಿಯೊಂದಿಗೆ ಜಮಾಯಿಸಿದ ಭಕ್ತರು ಬಿರುಬಿಸಿಲನ್ನೂ ಲೆಕ್ಕಿಸದೆ ಒಂದು ತಾಸು ಮಂಗಳಾರತಿಯಲ್ಲಿ ಪಾಲ್ಗೊಂಡರು.ಪರ್ವತ ಮಲ್ಲಯ್ಯ ಉಘೆ, ಉಘೆ ಉದ್ಘೋಷ ಪ್ರತಿ ಭಕ್ತರ ಬಾಯಿಯಿಂದ ಬರುತ್ತಿತ್ತು.ಪಾದಯಾತ್ರಿಕರಿಗೆ ದಾರಿಯುದ್ದಕ್ಕೂ ನೀರು, ಪಾನಕ, ಮಜ್ಜಿಗೆ, ಅಂಬಲಿ, ದ್ರಾಕ್ಷಿ, ಬಾಳೆ ಹಣ್ಣು ಸೇರಿದಂತೆ ವಿವಿಧ ಪದಾರ್ಥಗಳನ್ನು ವಿತರಿಸುವ ಕಾರ್ಯದಲ್ಲಿ ಅನೇಕರು ತಮ್ಮ ಭಕ್ತಿ ಸಮರ್ಿಸಿದರು.
ಬಳಿಕ ಕೋರಕೊಪ್ಪ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಬಳಿ ಮತ್ತೊಮ್ಮೆ ಮಂಗಳಾರತಿ ಮಾಡಿದ ಬಳಿಕ ಪಾದಯಾತ್ರೆ ಗ್ರಾಮದಿಂದ ಮುಂದೆ ಸಾಗಿತು.ಪಾದಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರ ಸರಕುಗಳನ್ನು ಹೊತ್ತೊಯ್ಯುವ ಸೇವೆ ಸಲ್ಲಿಸಲು ವಾಹನದ ವ್ಯವಸ್ಥೆ ಕೂಡ ಭಕ್ತರು ಮಾಡಿದ್ದರು.ಈ ವೇಳೆ ಚಂದ್ರಯ್ಯ ಮಠಪತಿ, ದುಂಡಯ್ಯ ಸುಬ್ಬಾಪೂರಮಠ, ಕೋರಕಪ್ಪ ಪೂಜ್ಯ ಶ್ರೀಗಳಾದ ರೇವಣಸಿದ್ದೇಶ್ವರ ಸ್ವಾಮಿಜಿ, ಅಶೋಕ ನಂದಿ, ಸುರೇಶ ನಂದಿ, ಕಿರಣ ನರೇವಾಡಿ, ಹನಮಂತ ಮುನ್ಯಾಳ, ನಿಂಗನಗೌಡ ಪಾಟೀಲ, ಬಾಳಪ್ಪ ಕಾಶನ್ನವರ, ಗುರುನಾಥ ಮಟ್ಟಿ, ಪರ್ಪ ಶಿಂಗಾರಗೊಪ್ಪ, ಬಸನಗೌಡ ಪಾಟೀಲ, ಈರಣ್ಣಾ ಗೌಡರ, ಬಸವಂತ ಪಾಟೀಲ, ಭೀಮಶಿ ಇಟಗೌಡ್ರ, ಮಹಾಂತೇಶ ಕೊಟ್ರಶೆಟ್ಟಿ, ಬಾಳಪ್ಪ ಚಂದರಗಿ, ಲಕ್ಷ್ಮಣ ಬಡೆನ್ನವರ, ರಾಕೇಶ ಹೊಂಗಲ, ಬಸು ತೇಲಿ, ಶಿವಪ್ಪ ಕಾಡವಗೋಳ ಸೇರಿದಂತೆ ಅನೇಕರು ಇದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 