ಕುಷ್ಟಗಿಯಲ್ಲಿ ಮಹಿರ್ಷಿ ವಾಲ್ಮೀಕಿ ಜಯಂತಿಯನ್ನು ಸರಳ ಆಚರಣೆಗೆ ತಿರ್ಮಾನಿಸಿ ಮನವಿ

ಕುಷ್ಟಗಿ.ಅ.25; ಮಹಿರ್ಷಿ ವಾಲ್ಮೀಕಿ ಜಯಂತಿಯನ್ನು ಸರಳ ಆಚರಣೆ ಹಾಗೂ ಸರಕಾರ ನೀಡುವ ಜಯಂತಿ ಕಾರ್ಯಕ್ರಮದ ಕರ್ಚು ವೆಚ್ಚದ ಹಣವನ್ನು ಬರಗಾಲ ನಿಧಿಗೆ ಜಮಾ ಮಾಡಬೇಕು ಎಂದು ವಾಲ್ಮೀಕಿ ಸಮಾಜದ ಮುಖಂಡರು ತಿರ್ಮಾನಿಸಿ ಬುಧವಾರ ಬೆಳಿಗ್ಗೆ ಇಲ್ಲಿನ ತಹಸೀಲ್ದಾರ ಕಚೇರಿಗೆ ತೆರಳಿ ತಹಶೀಲ್ದಾರ ಶೃತಿ ಮಳ್ಳಪ್ಪಗೌಡರ ಅವರಿಗೆ ಮನವಿ ಪತ್ರ ಸಲ್ಲಿಸಿದರು. 

ಮನವಿ ಪತ್ರ ಸಲ್ಲಿಸಿ ನಂತರ ಮಾತನಾಡಿದ ವಾಲ್ಮೀಕಿ ಸಮಾಜದ ಅಧ್ಯಕ್ಷ ಬಸವರಾಜ ಎಂ ನಾಯಕ ಪ್ರಸಕ್ತ ಸಾಲಿನಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ಮಳೆ ಬಾರದೇ ಜನ  

ಜಾನುವಾರುಗಳಿಗೆ ನೀರು ಹಾಗೂ ಮೇವಿನ ಕೊರತೆ ಉಂಟಾಗಿ ತೀವ್ರವಾಗಿ ಬರಗಾಲ ಬಿದ್ದಿದೆ ಇದರಿಂದ ರೈತರು ಜೀವನ ನಡೆಸಲು ಕಷ್ಟ ಸಾಧ್ಯವಾಗಿದೆ. 

ಇತಂಹ ಬರಗಾಲ ಪರಿಸ್ಥಿತಿಯಲ್ಲಿ ಮಹಿರ್ಷಿ  ವಾಲ್ಮೀಕಿ ಜಯಂತಿಯನ್ನು ಸರಳ ಆಚರಿಸಲು ಹಾಗೂ ಸರಕಾರ ನೀಡುವ ಅದ್ಧೂರಿ ಜಯಂತಿ ಕಾರ್ಯಕ್ರಮದ ಕಚರ್ು ವೆಚ್ಚದ ಹಣವನ್ನು ಬರಗಾಲ ನಿಧಿಗೆ ಜಮಾ ಮಾಡಬೇಕು ಎಂದು ಸರಕಾರಕ್ಕೆ ಒತ್ತಾಯಿಸಿ ವಾಲ್ಮೀಕಿ ಸಮಾಜದ ಮುಖಂಡರು ಮನವಿ ಪತ್ರ ಸಲ್ಲಿಸಿದರು. 

ವಾಲ್ಮೀಕಿ ಸಮಾಜದ ಮುಖಂಡರಾದ ಈರಪ್ಪ ಹಜಾಳ, ಶಿವನಗೌಡ ನಾಯಕ, ದೊಡ್ಡಪ್ಪ ನಾಯಕ, ಭೀಮನಗೌಡ ನಾಯಕ, ಕೊಟ್ರೇಶ್ ನಾಯಕ, ಸುರೇಶ ಕಮ್ಮಾರ, ರವಿಪ್ರಕಾಶ ಕೆಳಗಡೆ, ಸಂತೋಷ ಗುಜ್ಜಲ್ ಹಾಗೂ ವಾಲ್ಮೀಕಿ ಸಮಾಜದ ಮುಖಂಡರು ಭಾಗವಹಿಸಿದ್ದರು