ಕೃಷಿ ಇಲಾಖೆಗೆ ಗ್ರಹಣ ಶಾಸಕ ದೊಡ್ಡನಗೌಡ ಪಾಟೀಲ್ ಬೇಸರ

ಕುಷ್ಟಗಿ31; ಕೃಷಿ ಇಲಾಖೆಗೆ ಗ್ರಹಣ ಇಡೀದಿದೆ ಈ ಹಿಂದೆ ಇದ್ದ ಸಹಾಯಕ ನಿರ್ದೇಶಕ ಅಧಿಕಾರಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಿಲ್ಲ, ನೀವು ಸರಿಯಾಗಿ ಈ ಹುದ್ದೆಯನ್ನು ನಿಭಾಸುತ್ತಿರಿ ಎಂದು ತಿಳಿದರೇ ನೀವು ಕೂಡಾ ಸಭೆಗೆ ಸರಿಯಾಗಿ ಇಲಾಖೆ ವರದಿ ಮಾಹಿತಿ ನೀಡುತ್ತಿಲ್ಲ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಸಹಾಯಕ ನಿರ್ದೇಶಕ ಅಜಮೀರ್ ಅಲಿ ವಿರುದ್ಧ ಬೇಸರ ವ್ಯಕ್ತಪಡಿಸಿದರು. 

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಕುಷ್ಟಗಿ ತಾಲೂಕು ತೀರಾ ಹಿಂದುಳಿದ ಪ್ರದೇಶ  ಇಲ್ಲಿನ ರೈತರು ಕೃಷಿಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ. 

ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು. ನಾಮನಿರ್ದೇಶಿತ ಸದಸ್ಯ ಅನ್ವರ ಅತ್ತಾರ ಸಹಾಯಕ ನಿರ್ದೇಶಕ ಅಜಮೀರ್ ಅಲಿಅವರಿಗೆ ಸೇಂಗಾ, ಕಡಲೆ, ಹೆಸರು ಸೇರಿದಂತೆ ಇನ್ನಿತರೇ ಬಿತ್ತನೆ ಬೀಜಗಳ ದರದ ಮಾಹಿತಿಯನ್ನು ಕೇಳಿದರೆ ಉತ್ತರ ನೀಡಲು ತಡಬಡಾಯಿಸಿದರು. ಮುಂದಿನ ಸಭೆಗೆ ಸರಿಯಾದ ಪ್ರಗತಿ ವರದಿಯನ್ನು ತರಬೇಕು ಎಂದು ತಿಳಿಸಿದರು. 

ನಾರಾಯಣಪೂರ ಜಲಾಶಯದಿಂದ ಕುಷ್ಟಗಿ ಪಟ್ಟಣಕ್ಕೆ ಕುಡಿಯುವ ನೀರಿಗೆ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ ಎಂದು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ  ಎಇಇ ವಿಜಯಕುಮಾರ್ ಶಾಸಕರಿಗೆ ತಿಳಿಸಿದರು. 173 ಗ್ರಾಮಗಳ ಪೈಕಿ ನಾಲ್ಕು ತಾಂಡಾಗಳನ್ನು ಸೇರ್ಪಡೆ ಮಾಡಿ ಹಂತ ಹಂತವಾಗಿ ಪೈಪ್ ಲೈನ್ ಮೂಲಕ ನೀರು ನೀಡಲಾಗುವುದು. 

ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳಲ್ಲಿ ಪೈಪ್ ಲೈನ್ ಹಾಕಲು ತೆಗ್ಗು ತೆಗೆದು ಹಾಗೆ ಬಿಟ್ಟಿದ್ದಾರೆ ಎಂದು ನಾಮನಿರ್ದೇಶಿತ ಸದಸ್ಯರಾದ ಶ್ಯಾಮರಾವ್ ಕುಲಕರ್ಣಿ, ಶೇಖರಗೌಡ ಮಾಲಿ ಪಾಟೀಲ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. 

ಕ್ಷೇತ್ರದ ಕೆಲವು ಗ್ರಾಮಗಳಲ್ಲಿ ಜೆಜೆಎಮ್ ಕಾಮಗಾರಿ ಸಂಪೂರ್ಣವಾಗಿ ಕಳಪೆಯಾಗಿದೆ ಎಂದು ಶಾಸಕರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಎಇಇ ವಿಜಯ ಕುಮಾರ ವಿರುದ್ಧ ಹರಿಹಾಯ್ದರು. 

ಆರೋಗ್ಯ, ಶಿಕ್ಷಣ, ತೋಟಗಾರಿಕೆ, ಸಿಡಿಪಿಓ, ಸಮಾಜ ಕಲ್ಯಾಣ, ಪುರಸಭೆ, ಲೋಕೋಪಯೋಗಿ, ಪಶು ಸಂಗೋಪನೆ ಇಲಾಖೆ ಸೇರಿದಂತೆ ಹಲವಾರು ಇಲಾಖೆ  ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಪ್ರಗತಿ ವರದಿ ವಾಚಿಸಿದರು. 

ತಾಲೂಕು ಪಂಚಾಯಿತಿ ಕಾರ್ಯನಿವರ್ಾಹಕ ಅಧಿಕಾರಿ ನಿಂಗಪ್ಪ ಮಸಳಿ, ತಹಶೀಲ್ದಾರ ಶೃತಿ ಮಳ್ಳಪ್ಪಗೌಡರ, ನಾಮನಿದರ್ೆಶಿತ ಸದಸ್ಯರಾದ ನಿರ್ಮಲಾ ಕರಡಿ, ಯಲ್ಲಪ್ಪ ಬಾಗಲಿ, ಸಿದ್ದನಗೌಡ ಪಾಟೀಲ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು